ಮನೋರಂಜನೆ

ಲಾ ಲಿಗ ಟೂರ್ನಿ ಬಾರ್ಸಿಲೋನಕ್ಕೆ ಭರ್ಜರಿ ಜಯ

Pinterest LinkedIn Tumblr

messi__________________

ಮ್ಯಾಡ್ರಿಡ್, ಡಿ.8: ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರನೆ ಬಾರಿ ಹ್ಯಾಟ್ರಿಕ್ ಗೋಲು ದಾಖಲಿಸಿದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಯ ಸಾಹಸದಿಂದ ಬಾರ್ಸಿಲೋನ ತಂಡ ಎಸ್ಪಾನಿಯೊಲ್ ತಂಡವನ್ನು 5-1 ಅಂತರದಿಂದ ಸೋಲಿಸಿದೆ.

ಈ ಗೆಲುವಿನೊಂದಿಗೆ ಬಾರ್ಸಿಲೋನ ಲಾ ಲಿಗ ಟೂರ್ನಿ ಯಲ್ಲಿ ಮೊದಲ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಪ್ರಬಲ ಸ್ಪರ್ಧೆ ನೀಡುತ್ತಿದೆ. 14 ಪಂದ್ಯಗಳಲ್ಲಿ 36 ಅಂಕ ಗಳಿಸಿರುವ ರಿಯಲ್ ಮೊದಲ ಸ್ಥಾನದಲ್ಲಿದೆ. ಬಾರ್ಸಿಲೋನ (14 ಪಂದ್ಯ, 34 ಅಂಕ) ಎರಡನೆ ಸ್ಥಾನದಲ್ಲಿದೆ. ರವಿವಾರ ಇಲ್ಲಿ ನಡೆದ ಲಾ ಲಿಗ ಪಂದ್ಯದಲ್ಲಿ 21ನೆ ಹ್ಯಾಟ್ರಿಕ್ ಗೋಲು ಬಾರಿಸಿದ ಮೆಸ್ಸಿ ರಿಯಲ್ ಮ್ಯಾಡ್ರಿಡ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯನ್ನು (23 ಹ್ಯಾಟ್ರಿಕ್) ಮುರಿಯಲು ಇನ್ನು ಎರಡು ಹ್ಯಾಟ್ರಿಕ್ ಗೋಲಿನ ಅಗತ್ಯವಿದೆ. ಪ್ರೀಮಿಯರ್ ಡಿವಿಜನ್ ಇತಿಹಾಸದಲ್ಲಿ ಅಗ್ರ ಸ್ಕೋರರ್ ಎನಿಸಿದ್ದ ಮೆಸ್ಸಿ ಇದೀಗ ಬಾಸಿ

ಲೋರ್ನ ಪರ ಸ್ಪರ್ಧಾತ್ಮಕ ಹಾಗೂ ಸೌಹಾರ್ದ ಪಂದ್ಯಗಳಲ್ಲಿ ಒಟ್ಟು 402 ಗೋಲು ದಾಖಲಿಸಿದ ಸಾಧನೆ ಮಾಡಿದ್ದಾರೆ. ರವಿವಾರದ ಪಂದ್ಯದಲ್ಲಿ ಮೆಸ್ಸಿ ಹ್ಯಾಟ್ರಿಕ್ ಗೋಲು (45+1, 50, 82ನೆ ನಿ.) ದಾಖಲಿಸಿದರು. ಗೆರಾರ್ಡ್ ಪಿಕ್ಯೂ (53ನೆ ನಿ.) ಹಾಗೂ ಪೆಡ್ರೊ(77ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಎಸ್ಪಾನಿಯೊಲ್ ತಂಡದ ಪರ ಸೆರ್ಜಿಯೊ ಗಾರ್ಸಿಯೊ(13ನೆ ನಿ.) ಒಂದು ಗೋಲನ್ನು ದಾಖಲಿಸಿದ್ದರು.

Write A Comment