ಪ್ರಮುಖ ವರದಿಗಳು

ಚಾಂಪಿಯನ್ಸ್ ಲೀಗ್‌ನಲ್ಲಿ ಮೆಸ್ಸಿ ದಾಖಲೆ: ಹ್ಯಾಟ್ರಿಕ್ ಗೋಲು; ಬಾರ್ಸಿಲೋನಾಕ್ಕೆ 4-0 ಜಯ

Pinterest LinkedIn Tumblr

mess1

ನಿಕೊಸಿಯಾ, ನ.26: ಬಾರ್ಸಿಲೋನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅಪೋಲ್ ನಿಕೋಸಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಜಮೆ ಮಾಡುವ ಮೂಲಕ ಚಾಂಪಿಯನ್ಸ್ ಲೀಗ್‌ನಲ್ಲಿ ಗರಿಷ್ಠ ಸ್ಕೋರರ್ ಎನಿಸಿ ಕೊಂಡಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೆಸ್ಸಿ ಹ್ಯಾಟ್ರಿಕ್ ಗೋಲು ಸಹಾಯದಿಂದ ಬಾರ್ಸಿಲೋನಾ ತಂಡ ನಿಕೋಸಿಯಾ ವಿರುದ್ಧ 4-0 ಅಂತರದಲ್ಲಿ ಜಯ ದಾಖಲಿಸಿತು.

ಕಳೆದ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್‌ನ ಫಾರ್ವರ್ಡ್ ಸ್ಟಾರ್ ರೌಲ್ ದಾಖಲಿಸಿದ್ದ 71 ಗೋಲುಗಳ ದಾಖಲೆ ಸರಿಗಟ್ಟಿದ್ದ ಮೆಸ್ಸಿ ಈ ಪಂದ್ಯದಲ್ಲಿ 3 ಗೋಲು ದಾಖಲಿಸಿದ ತನ್ನ ಗೋಲು ದಾಖಲೆಯನ್ನು 74ಕ್ಕೆ ಏರಿಸಿದರು. ರೌಲ್ 142 ಪಂದ್ಯಗಳಲ್ಲಿ 71 ಗೋಲು ಬಾರಿಸಿದ್ದರು. ಆದರೆ ಆದರೆ ಮೆಸ್ಸಿ 91 ಪಂದ್ಯಗಳಲ್ಲಿ 74 ಗೋಲು ಜಮೆ ಮಾಡಿದ್ದಾರೆ.
ಬಾರ್ಸಿಲೋನಾ ತಂಡದ ಗೆಲುವಿನಲ್ಲಿ ಮೆಸ್ಸಿ 3 ಮೂರು ಗೋಲುಗಳ ನೆರವು ನೀಡಿದರು. ಇನ್ನೊಂದು ಗೋಲನ್ನು ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸುಯೆರೆಝ್ ದಾಖಲಿಸಿದರು. ಇದು ಬಾರ್ಸಿಲೋನಾ ತಂಡ ಸೇರ್ಪಡೆಗೊಂಡ ಬಳಿಕ ಅವರ ಮೊದಲ ಗೋಲು ಆಗಿತ್ತು.
ಸುಯೆರೆಝ್ 27ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೋಲು ದಾಖಲೆ ತೆರೆದರು. ಬಳಿಕ 11 ನಿಮಿಷ ಉರುಳುವಷ್ಟರಲ್ಲಿ ಮೆಸ್ಸಿ ಗೋಲು ಬಾರಿಸಿ ರೌಲ್ ದಾಖಲೆಯನ್ನು ಹಿಂದಿಕ್ಕಿದರು. ದ್ವಿತೀಯಾರ್ಧದ 58ನೆ ನಿಮಿಷ ಮತ್ತು 87ನೆ ನಿಮಿಷದಲ್ಲಿ ಗೋಲು ಕಬಳಿಸಿದ ಮೆಸ್ಸಿ ಬಾರ್ಸಿಲೋನಾಕ್ಕೆ 4-0 ಗೆಲುವಿಗೆ ನೆರವಾದರು.
ಮೆಸ್ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ದಾಖಲೆ ಬರೆದಿರುವಂತೆ ಲಾ ಲಿಗಾದಲ್ಲಿ ಗೋಲುಗಳ ಸಂಖ್ಯೆಯನ್ನು 253ಕ್ಕೆ ಏರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ಮೆಸ್ಸಿ ದಾಖಲೆಯ ಹೈಲೈಟ್ಸ್
*ಚಾಂಪಿಯನ್ಸ್ ಲೀಗ್‌ನಲ್ಲಿ ಗರಿಷ್ಠ ಗೋಲು: 74
*ಬಾರ್ಸಿಲೋನಾ ಪರ ಗರಿಷ್ಠ ಸ್ಕೋರರ್: 368.
* 2014ರ ಸಾಲಿನಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಗೋಲು: 73
*ಬ್ಯಾಲನ್ ಡಿ’ ಒರ್ ಪ್ರಶಸ್ತಿ :4 ಬಾರಿ
*ಯುರೋಪಿಯನ್ ಕಪ್ ಟೂರ್ನಮೆಂಟ್‌ನಲ್ಲಿ ಟಾಪ್ ಸ್ಕೋರರ್ ಪ್ರಶಸ್ತಿ:4 ಬಾರಿ.
*ಲಾ ಲಿಗಾದಲ್ಲಿ ಹ್ಯಾಟ್ರಿಕ್: 8 ಬಾರಿ
*2014ರಲ್ಲಿ ದಾಖಲಿಸಿರುವ ಒಟ್ಟು ಗೋಲು: 91.
*ಲಾ ಲಿಗಾದಲ್ಲಿ ಗರಿಷ್ಠ ಸ್ಕೋರರ್: 253 ಗೋಲು

ಲಾ ಲಿಗಾದಲ್ಲಿ 2014ರ ತನಕ ಗರಿಷ್ಠ ಸ್ಕೋರ್ ದಾಖಲಿಸಿದವರು
1.ಲಿಯೊನೆಲ್ ಮೆಸ್ಸಿ (ಬಾರ್ಸಿಲೋನಾ) -253
2.ಟೆಲ್ಮೊ ಝರ್ರಾ (ಅಥ್ಲೆಟಿಕ್ ಬಿಲ್ಬಾವೊ1940-55)-251
3.ಹುಗೊ ಸಾಂಕೆಝ್(ಅಟ್ಲೆಟಿಕೊ ಮ್ಯಾಡ್ರಿಡ್, ರಿಯಲ್ ಮ್ಯಾಡ್ರಿಡ್, ರಾಯೊ ವಲ್ಲಾಕಾನೊ 1981-94)234
4.ರೌಲ್(ರಿಯಲ್ ಮ್ಯಾಡ್ರಿಡ್ 1994-2010) 228
5.ಅಲ್ಪೆರ್ಡೊ ಡಿ ಸ್ಟೆಫಾನೊ(ರಿಯಲ್ ಮ್ಯಾಡ್ರಿಡ್, ಎಸ್ಪಾನ್‌ಯೊಲ್ 1953-66) 227.

Write A Comment