ಅನಿವಾಸಿ ಭಾರತೀಯರು

ಮಂಗಳೂರು: ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್‌ನಿಂದ ಸಾಧಕ ದೇವಾಡಿಗ ಯುವ ಪ್ರತಿಭೆಗಳಿಗೆ ‘ಪ್ರಶಸ್ತಿ ಪ್ರದಾನ ಸಮಾರಂಭ’

Pinterest LinkedIn Tumblr

ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧ್ಯ: ಉದ್ಯಮಿ ಹರೀಶ್ ಶೇರಿಗಾರ್

ಮಂಗಳೂರು: ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧ್ಯ. ಸುಲಭದಲ್ಲಿ ಯಾವುದನ್ನೂ ಪಡೆಯುವ ನಿರೀಕ್ಷೆ ಮಾಡಬಾರದು. ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಲಿಯಬೇಕು. ಡಾ. ಕೆ.ವಿ ದೇವಾಡಿಗ ಅವರ ಸಾಧನೆ ನಮ್ಮೆಲ್ಲರಿಗೂ ಮಾದರಿ ಎಂದು ದುಬೈನ ಆಕ್ಮೇ ಬಿಲ್ಡಿಂಗ್ ಮೆಟಿರಿಯಲ್ಸ್ ಟ್ರೇಡಿಂಗ್ ಲಿ. ಆಡಳಿತ ನಿರ್ದೆಶಕರು ಹಾಗೂ ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಹರೀಶ್ ಶೇರಿಗಾರ್ ಹೇಳಿದರು.

ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ನ.26 ಭಾನುವಾರ ಮಂಗಳೂರು ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜಭವನದಲ್ಲಿ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ದೇವಾಡಿಗ ಯುವ ಪ್ರತಿಭೆಗಳಿಗೆ ‘ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಕುವೆಂಪು ಯುನಿವರ್ಸಿಟಿ ನಿವೃತ್ತ ಉಪಕುಲಪತಿ ಪ್ರೊ. ಡಾ. ಬಿ.ಎಸ್. ಶೇರಿಗಾರ್ ಮಾತನಾಡಿ, ಡಾ.ಕೆ.ವಿ ದೇವಾಡಿಗರು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಅವರು ಶ್ರೇಷ್ಠತೆಗೆ ಮತ್ತೊಂದು ಹೆಸರಾಗಿದ್ದು ಸಮಾಜದ ಮೇಲಿನ ಕಾಳಜಿ, ಬದ್ದತೆ ಅಪಾರ ಎಂದರು.

ಮಂಗಳೂರು ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಚಿಕ್ಕ ಸಮಾಜವಾದರೂ ಕೂಡ ದೇವಾಡಿಗ ಸಮುದಾಯ ಗೌರವ, ಸಮಾಜಿಕ ಕಳಕಳಿ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿ ಪ್ರೀತಿಗೆ ಪಾತ್ರರಾದವರು ಎಂದರು.

ಖ್ಯಾತ ನ್ಯೂರೋ ಸರ್ಜನ್ ಹಾಗೂ ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ವಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಕೆ. ಜಯರಾಜ್ ರೈ, ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿಗಳಾದ ಡಾ. ದಿವಾಕರ ರಾವ್, ಕೆ.ಜೆ ದೇವಾಡಿಗ, ಖಜಾಂಚಿ ಅಶೋಕ್ ಮೊದಲಾದವರು ಇದ್ದರು.

ಟ್ರಸ್ಟ್‌ನ ಕಾರ್ಯದರ್ಶಿ ಡಾ. ದೇವರಾಜ್ ಕೆ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ 2021 ಪ್ರಶಸ್ತಿ ವಿಜೇತೆ ವೀಣಾ ಕಾರ್ಯಕ್ರಮ ನಿರೂಪಿಸಿದರು. ಪಲ್ಲವಿ ಪ್ರಾರ್ಥಿಸಿದರು, ಕವಿತಾ, ಕಿರಣಾ, ಪಲ್ಲವಿ, ಜಯಲಕ್ಷ್ಮಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಸುಂದರ ಮೊಯ್ಲಿ‌ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಸಹನಾ ಅವರಿಂದ ಭಕ್ತಿಗೀತೆ, ಬಳಿಕ ಸುನಿಲ್ ಎ. ಧರ್ಮಸ್ಥಳ ಅವರಿಂದ ಕೊಳಲು ವಾದನ ನಡೆಯಿತು.

ಪ್ರಶಸ್ತಿ ಪ್ರದಾನ:
• ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಉದ್ಯಮಿ ಪ್ರಶಸ್ತಿ 2023- ಡಾ. ರೇಖಾ ಎಂ. ಬೈಂದೂರು

• ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಸಂಗೀತಗಾರ ಪ್ರಶಸ್ತಿ 2023- ಸುನಿಲ್ ಎ. ಧರ್ಮಸ್ಥಳ

• ಡಾ. ಭಾವನಾ ಶೇರಿಗಾರ್ ಶ್ರೇಷ್ಠ ವೈದ್ಯಕೀಯ ಪದವಿ ವಿದ್ಯಾರ್ಥಿ ಪ್ರಶಸ್ತಿ 2023- ಡಾ. ಚಾಂದ್ ಶ್ರಾವಣ್, ಬೆಂಗಳೂರು

• ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ ಪ್ರಶಸ್ತಿ 2023- ಚೈತ್ರ ರಾಧಾಕೃಷ್ಣ, ಬೆಂಗಳೂರು

• ಡಾ. ದಿವಾಕರ್ ರಾವ್ ಶ್ರೇಷ್ಠ ಸ್ನಾತಕೋತ್ತರ ವಿದ್ಯಾರ್ಥಿ ಪ್ರಶಸ್ತಿ 2023 (ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಹೊರತು)- ಸಹನಾ, ಮಂಗಳೂರು

• ಡಾ. ದಿವಾಕರ್ ರಾವ್ ಶ್ರೇಷ್ಠ ಪರಿಣಿತ ವ್ಯಕ್ತಿ ಪ್ರಶಸ್ತಿ 2023- ಪ್ರತೀಕ್ಷಾ ಉಳ್ಳಾಲ್, ಬೆಂಗಳೂರು

• ಡಾ. ಕೆ. ವಿ. ದೇವಾಡಿಗ ಶ್ರೇಷ್ಠ ಕಾಲೇಜು ಉಪನ್ಯಾಸಕ ಪ್ರಶಸ್ತಿ 2023- ನಮ್ರತಾ ಬಿ., ಮಂಗಳೂರು

• ಡಾ. ಕೆ. ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು ಪ್ರಶಸ್ತಿ 2023- ದೀಕ್ಷ ದೇವಾಡಿಗ, ಉಡುಪಿ

• ಶ್ರೀ ಅಶೋಕ್ ಶ್ರೇಷ್ಠ ಸಮಾಜ ಸೇವಕ ಪ್ರಶಸ್ತಿ 2023- ಸೂರಜ್ ದೇವಾಡಿಗ, ಮಂಗಳೂರು

• ಡಾ. ದೇವರಾಜ್ ಕೆ. ಶ್ರೇಷ್ಠ ಶಿಕ್ಷಕ ಪ್ರಶಸ್ತಿ 2023 (ಪ್ರೌಢ ಶಾಲೆ)- ಸುಶ್ಮಿತಾ, ಮಂಗಳೂರು

• ದಿ| ಕೆ. ಲಕ್ಷ್ಮಣ್ ಸ್ಮರಣಾರ್ಥ ಮಂಗಳ ಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿ ವರುಣ್ ದೇವಾಡಿಗ

• ಮಿಸ್ ಟೀನ್ ಗ್ಲೋಬ್ ಟೈಟಲ್ ಕಂಟೆಸ್ಟ್ ವಿಜೇತೆ ಯಶಸ್ವಿನಿ ದೇವಾಡಿಗ ಸುರತ್ಕಲ್

ಟ್ರಸ್ಟ್‌ನಿಂದ ಸಹಾಯ ಧನ ವಿತರಣೆ:
ಮನೆ ಕಟ್ಟಲು: ನಳಿನಿ ಪಾವಂಜೆ
ವಿದ್ಯಾಭ್ಯಾಸಕ್ಕಾಗಿ: ಸಿಎ ವಿದ್ಯಾರ್ಥಿನಿ ಶ್ರಾವ್ಯಾ ದೇವಾಡಿಗ, ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಕ್ಷಾ, ಕಾನೂನು ವಿದ್ಯಾರ್ಥಿನಿ ಅನುಷಾ, ಮಂಗಳ ಶಾಲೆಯ ವಿದ್ಯಾರ್ಥಿಗಳಾದ ಕೆ.ಎಸ್ ದಿಶಾ, ಕೆ.ಎಂ ಮಹೇಶ್.

Comments are closed.