ಅನಿವಾಸಿ ಭಾರತೀಯರು

ಕರ್ನಾಟಕ ರಾಜ್ಯ ದೇವಾಡಿಗ ಸಂಘ, ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ‌ಸನ್ಮಾನ-ವಿದ್ಯಾರ್ಥಿವೇತನ ವಿತರಣೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘ(ರಿ) ಮಂಗಳೂರು ಸಹಯೋಗದಲ್ಲಿ, ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವಾಡಿಗ ಯುವ ಪ್ರತಿಭೆಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ-2021, ವಿದ್ಯಾರ್ಥಿ ವೇತನ ‌ಸಮಾರಂಭವು ಭಾನುವಾರದಂದು ಮಂಗಳೂರು ಮಣ್ಣಗುಡ್ಡೆಯ ದೇವಾಡಿಗ ಸಮಾಜಭವನದಲ್ಲಿ ನಡೆಯಿತು.

10 ಮಂದಿ ಸಾಧಕರಿಗೆ ಸನ್ಮಾನ, ಪ್ರಶಸ್ತಿ…
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ‌ ಗೌರವಿಸಲಾಯಿತು. ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ‌ ಯುವ ಉದ್ಯಮಿ-2021 ಪ್ರಶಸ್ತಿಯನ್ನು ರಿತೇಶ್ ಕುಮಾರ್ ಬೆಂಗಳೂರು, ಶ್ರೀ ಹರೀಶ್ ಶೇರಿಗಾರ್ ಶ್ರೇಷ್ಠ ಯುವ ಸಂಗೀತಗಾರ2021 ಪ್ರಶಸ್ತಿಯನ್ನು ದೀಕ್ಷಾ ಅಲೆವೂರು, ಡಾ. ಭಾವನ ಶೇರಿಗಾರ್ ಶ್ರೇಷ್ಠ ವೈದ್ಯಕೀಯ ಪದವಿ ವಿದ್ಯಾರ್ಥಿನಿ 2021 ಪ್ರಶಸ್ತಿಯನ್ನು ಪ್ರತೀಕ್ಷಾ ಎಂ ಶೇರಿಗಾರ್ ಉಡುಪಿ, ಡಾ. ಭಾವನ ಶೇರಿಗಾರ್ ಶ್ರೇಷ್ಠ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ 2021 ಪ್ರಶಸ್ತಿಯನ್ನು ಪರೀಕ್ಷಿತ್ ಶಂಕರ್ ಗುಡ್ಡದಮನೆ ಶಿರಸಿ, ಡಾ. ದಿವಾಕರ್ ರಾವ್ ಶ್ರೇಷ್ಠ ಸ್ನಾತಕೋತ್ತರ ವಿದ್ಯಾರ್ಥಿ 2021 ಪ್ರಶಸ್ತಿಯನ್ನು ಮೃಣಾಲಿ ಜೆ.ಪಿ ಕೊಟ್ಟಾರ, ಡಾ. ದಿವಾಕರ್ ರಾವ್ ಶ್ರೇಷ್ಠ ಯುವ ಪರಿಣಿತ/ಕೌಶಲ್ಯ ವ್ಯಕ್ತಿ2021 ಪ್ರಶಸ್ತಿಯನ್ನು ಸತೀಶ್ ದೇವಾಡಿಗ ಮುರುಡೇಶ್ವರ, ಕೆ.ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು2021 ಪ್ರಶಸ್ತಿಯನ್ನು ಆಯುಷ್ ಆರ್. ದೇವಾಡಿಗ ಉರ್ವ, ಅಶೋಕ್ ಶ್ರೇಷ್ಠ ಸಮಾಜಸೇವೆ2021 ಪ್ರಶಸ್ತಿಯನ್ನು ಸುಮೀತ್ ದೇವಾಡಿಗ ಗೋರಿಗುಡ್ಡ, ಡಾ. ಕೆ.ವಿ. ದೇವಾಡಿಗ ಶ್ರೇಷ್ಠ ಕಾಲೇಜು ಉಪನ್ಯಾಸಕ 2021 ಪ್ರಶಸ್ತಿಯನ್ನು ಡಾ. ಚಂದ್ರಹಾಸ ಜಿ. ಕಣ್ವತೀರ್ಥ, ಡಾ. ದೇವರಾಜ್ ಕೆ. ಶ್ರೇಷ್ಠ ಶಿಕ್ಷಕಿ (ಪ್ರೌಢಶಾಲೆ) 2021 ಪ್ರಶಸ್ತಿಯನ್ನು ವೀಣಾ ಮರೋಳಿ ಅವರಿಗೆ ನೀಡಲಾಯಿತು. ವಿದೂಷಿ ಮಂಗಳಾ ಕಿಶೋರ್ ದೇವಾಡಿಗ ಉಚ್ಚಿಲ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ..
ಇದೇ ಕಾರ್ಯಕ್ರಮದಲ್ಲಿ 15 ದೇವಾಡಿಗ ಸಂಘಗಳಿಂದ ಬಂದ 72 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ವತಿಯಿಂದ ವಿದ್ಯಾರ್ಥಿವೇತನ ನೀಡಿ ಸನ್ಮಾನಿಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.

ಯುಪಿಸಿಎಲ್ ಅದಾನಿ‌ ಗ್ರೂಫ್, ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ ಇದರ ಅಧ್ಯಕ್ಷರಾದ ಕಿಶೋರ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ನ್ಯೂರೋ ಸರ್ಜನ್ ಮಂಗಳೂರು ಹಾಗೂ ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಅಧ್ಯಕ್ಷರಾದ ಡಾ. ಕೆ.ವಿ. ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ.) ಉಪಾಧ್ಯಕ್ಷರಾದ ಡಾ. ಭಾವನಾ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ಡಾ. ದೇವರಾಜ್ ಕೆ., ಕೋಶಾಧಿಕಾರಿ ಅಶೋಕ್,‌ಟ್ರಸ್ಟಿ ಡಾ. ದಿವಾಕರ ರಾವ್, ಮಂಗಳಾ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ಚಾರ್ಟಡ್ ಅಕೌಂಟೆಂಟ್ ದಿನಕರ್ ಅತ್ತಾವರ್, ಕರ್ನಾಟಕ ರಾಜ್ಯ ದೇವಾಡಿಗ ಸಂಘ, ಮಂಗಳೂರು ಇದರ ಅಧ್ಯಕ್ಷ ಕೆ.‌ಶ್ರೀಧರ್ ಮೊಯ್ಲಿ, ಉಪಾಧ್ಯಕ್ಷ ಎಂ. ಲೋಕಾನಂದ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಸುಧಾಕರ ಮೊಯ್ಲಿ, ಕೋಶಾಧಿಕಾರಿ ಬಿ. ಹೇಮಂತ್ ಕುಮಾರ್ ಮೊದಲಾದವರಿದ್ದರು.

ಸಂಪೂರ್ಣ ಕಾರ್ಯಕ್ರಮ ಕೋವಿಡ್ ನಿಯಮಾವಳಿಯಂತೆ ನಡೆಯಿತು. ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಿಗ್ಗೆನ ಉಪಹಾರವನ್ನು ಹಾಗೂ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

 

Comments are closed.