ಸಂಯುಕ್ತ ಅರಬ್ ರಾಷ್ಟ್ರ (ಯು.ಎ.ಇ)ಯ ಪ್ರತಿಷ್ಠಿತ ಕನ್ನಡಿಗರ ಹೆಮ್ಮೆ ಕನ್ನಡಿಗ ಉದ್ಯಮಿ, ಸಮಾಜ ಸೇವಕ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್‌ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ದುಬೈಯ ಹೃದಯ ಭಾಗ ಬರ್ -ದುಬೈ ನಗರದಲ್ಲಿ ತಾ.21.10.2020 ರಂದು ಉದ್ಘಾಟನೆಗೊಂಡು ಗ್ರಾಹಕರ ಸೇವೆಗೆ ಲಭ್ಯವಾಗಿರುವ ಫಾರ್ಚೂನ್ ಎಟ್ರಿಯಂ ಎಂಬ 4ಸ್ಟಾರ್ ಹೋಟೆಲ್ ಕನ್ನಡಿಗರ ಪಾಲಿಗೆ ಹೆಮ್ಮೆಯಾಗಿದೆ.
ಕನ್ನಡಿಗ ಉದ್ಯಮಿ ಸಮಾಜ ಸೇವಕ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ ಮಾಲಕತ್ವದ ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ಸ್‌ನ ಶಾಖೆಯಾದ ಫಾರ್ಚೂನ್ ಎಟ್ರಿಯಂ ಹೋಟೆಲನ್ನು ಗಣ್ಯರಾದ ದುಬೈಯ ಭಾರತೀಯ ರಾಯಭಾರಿ ಕಚೇರಿಯ ಕೌನ್ಸುಲ್ ಜನ್ರಲ್ ಡಾ.ಅಮನ್ ಪುರಿ ಮತ್ತು ಅಜ್ಮಾನ್ ರಾಜವಂಶದ ಶ್ರೀ ಶೇಕ್ ಸುಲ್ತಾನ್ ಬಿನ್ ಅಲಿ ಬಿನ್ ರಶಿದ್ ಅಲ್ ನವೋಮಿ , ರಾಯಭಾರಿ ಕಚೇರಿಯ ಅಧಿಕಾರಿ ಶ್ರೀ ಸಂಜೀವ್ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ತದನಂತರ ಹೋಟೆಲ್‌ನಲ್ಲಿರುವ ದೇಶಿದಾಭ ಟ್ರೆಡಿಷನಲ್ ರೆಸ್ಟೋರೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತಾನಾಡಿದ ಸಮಾರಂಭದ ಮುಖ್ಯ ಅಥಿತಿಗಳಾಗಿದ್ದ ಡಾ ಅಮನ್ ಪುರಿಯವರು ಫಾರ್ಚೂನ್ ಗ್ರೂಪ್ ಹಾಗೂ ಪ್ರವೀಣ್ ಶೆಟ್ಟಿಯವರು ದುಬೈಯಲ್ಲಿ ಭಾರತೀಯರಿಗೆ ಮಾಡುತ್ತಿರುವ ಸೇವೆಯನ್ನುಕೊಂಡಾಡಿದರು.ದುಬೈಯಂತಹ ನಗರದಲ್ಲಿ ಹಾಸ್ಪಿಟಾಲಿಟಿ ಇಂಡಸ್ಟ್ರಿಸ್ ಗೆ ನಮ್ಮ ಭಾರತೀಯರ ಸೇವೆ ಅಪಾರ ಅಂತರದಲ್ಲಿ ಫಾರ್ಚೂನ್ ಗ್ರೂಪ್ ಯುಎಇಯಲ್ಲಿ ವೇಗದಲ್ಲಿ ಬೆಳೆಯುತ್ತಿದ್ದು,ಗ್ರಾಹಕರ ಸೇವೆಯಲ್ಲಿ ಹೆಸರುವಾಸಿಯಾಗಿದೆ. ಫಾರ್ಚೂನ್ ಎಟ್ರಿಯಂನ ಮುಂದಿನ ವ್ಯವಹಾರಿಕ ಭವಿಷ್ಯವು ಉತ್ತಮವಾಗಳೆಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಕೌನ್ಸುಲ್ ಜನ್ರಲ್ ಡಾ.ಅಮನ್ ಪುರಿ, ಅಜ್ಮಾನ್ ರಾಜವಂಶದ ಶ್ರೀ ಶೇಕ್ ಸುಲ್ತಾನ್ ಬಿನ್ ಅಲಿ ಬಿನ್ ರಶಿದ್ ಅಲ್ ನವೋಮಿ , ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಶ್ರೀ ಸಂಜೀವ್ ಕುಮಾರ್ ಮುಂತಾದವರು ಪಾಲ್ಗೋಂಡು ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಹಾಗೂ ಫಾರ್ಚೂನ್ ಸಮೂಹದ ಸಿಬ್ಬಂಧಿವರ್ಗಕ್ಕೆ ಶುಭಹಾರೈಸಿದರು. ಸಮಾರಂಭದಲ್ಲಿ ಬಂದು ಸೆರಿದ ಎಲ್ಲಾ ಅಥಿತಿ ಗಣ್ಯರಿಗೆ ಶ್ರೀಪ್ರವೀಣ್ ಶೆಟ್ಟಿಯವರು ಕೃತಜ್ಞತೆಯನ್ನು ಅರ್ಪಿಸಿದರು.
ಜಾಗತೀಕವಾಗಿ ಮಾರಕ ಕೋರೋನಾದ ಭೀತಿಯಲ್ಲಿರುವ ಈ ಸಂಧರ್ಭದಲ್ಲಿ ಆರೋಗ ಇಲಾಖೆಯ ಎಲ್ಲಾ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಬಹಳ ಅಚ್ಚುಕಟ್ಟಾಗಿ ಅಯೋಜಿಸಿದ ಈ ಕಾರ್ಯಕ್ರಮ ಸೇರಿದ ಸೂರಾರು ಅಥಿತಿಗಳ ಗಮನ ಸೆಳೆಯಿತು. ಸೇರಿದ ಎಲ್ಲಾ ಅಥಿತಿಗಳಿಗೆ ವಿವಿಧ ಬಗೆಯ ಆಹಾರ ಖಾದ್ಯಗಳನ್ನೊಳಗೊಂಡ ಭೋಜನ ಕೂಟದ ವವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕನ್ನಡಿಗರಿಗಾಗಿ ಖಾಸಗೀ ಪ್ರೈವೆಟ್ ಚಾರ್ಟರ್ ನ ವ್ಯವಸ್ಥೆ ಮಾಡಿದ್ದ ಪ್ರವೀಣ್ ಶೆಟ್ಟಿಯವರ ಸಮಾಜ ಸೇವೆಯನ್ನು ನೆನಪಿಸುತ್ತಾ ಫಾರ್ಚೂನ್ ಎಟ್ರಿಯಂ ಹೋಟೆಲ್‌ನಲ್ಲೂ ಹಲವಾರು ಕನ್ನಡಿಗರ ಉದ್ಯೋಗ ನೀಡಿದ ಪ್ರವೀಣ್ ಶೆಟ್ಟಿಯವರ ಉದ್ಯಮ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಪ್ರವೀಣ್ ಶೆಟ್ಟಿಯವರ ಕುಟುಂಬವರ್ಗದ ಸದಸ್ಯರು ಬಂದು ಮಿತ್ರರು, ನೂರಾರು ಅತಿಥಿಗಳು, ವಿವಿಧ ಫಾರ್ಚೂನ್ ಗ್ರೂಪ್ ನ ಹೋಟೆಲ್ ನ ಜನರಲ್ ಮೆನೆಜರ್‌ಗಳು ಸಿಬ್ಬಂಧಿಗಳು ಭಾಗವಹಿಸಿದ್ದರು. ಫಾರ್ಚೂನ್ ಗ್ರೂಪ್ ನ ಗ್ರೂಪ್ ಜನರಲ್ ಮೆನೆಜರ್ ಶ್ರೀ ಅಲೋಕ್ ನರುಲ್ಲ ರವರು ಅಥಿತಿಗಳನ್ನು ಸ್ವಾಗತಿಸಿ ವಂದಿಸಿದರು.
ಫಾರ್ಚೂನ್ ಎಟ್ರಿಯಂ ಹೋಟೆಲ್ ಸುಮಾರು 168 ಐಷಾರಾಮಿ ಕೊಠಡಿಗಳನ್ನು ಹೊಂದಿದ್ದು ಸ್ಪೊರ್ಟ್ಸ್ ಬಾರ್ ಪ್ರೆಡ್ಡಿಸ್, ಲೈವ್ ಪಂಜಾಬಿ ಬಂಗ್ರದ ದೇಶಿಧಾಬ ಸೇರಿ ಸುಮಾರು 9 ವಿವಿಧ ರೆಸ್ಟೋರೆಂಟ್‍ಗಳನ್ನು ಹೊಂದಿದ್ದು ವಿವಿಧ ವಿಧೇಶಿ ಅತಿಥಿಗಳ ಗಮನ ಸೆಳೆಯಲಿದೆ. ಎಟ್ರಿಯಂ ಹೋಟೆಲ್ ವಿವಿಧ ರೀತಿಯ ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಿಸಿದ್ದು ಚತುರ್ ತಾರಾ ಹೋಟೆಲ್‌ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಲಿದೆ.