Karavali

ಅಮಾಸೆಬೈಲು: ಅನ್ಯಕೋಮಿನ ಯುವಕನೊಂದಿಗೆ ವಿವಾಹಿತೆ ಪರಾರಿ ಪ್ರಕರಣಕ್ಕೆ ಹೊಸ ತಿರುವು; ಮಹಿಳೆ ವಶ ; ಅಮಾಸೆಬೈಲ್ ಎಸ್ಸೈ ರವಿಯಿಂದ ಪತ್ರಕರ್ತರಿಗೆ ಅಡ್ಡಿ

Pinterest LinkedIn Tumblr

amasebailu_married lady_missing

ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಅನ್ಯ ಕೋಮಿನ ಯುವಕನೊಂದಿಗೆ ಪರಾರಿಯಾದ ಘಟನೆಗೆ ಹಿಂದೂಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಇವರ ಪೈಕಿ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಕೆಯ ಮನೆಯವರ ಸ್ವಾಧೀನಕ್ಕೊಪ್ಪಿಸಿದ ಘಟನೆ ಸೋಮವಾರ ನಡೆದಿದೆ. ಇನ್ನೊಂದು ಮೂಲದ ಪ್ರಕಾರ ಸರ್ಫರಾಜ್ ಮನೆಯವರೇ ಇವರಿಬ್ಬರನ್ನು ಪೊಲೀಸರ ವಶಕ್ಕೆ  ನೀಡಿದ್ದಾರೆಂಬ ಮಾಹಿತಿಯೂ ಇದೆ.

amasebailu_Lady_Missing

Amasebailu_Lady missing_sarPharaj Amasebailu_Lady missing_sarPharaj (1) Amasebailu_Lady missing_sarPharaj (2) Amasebailu_Lady missing_sarPharaj (3) Amasebailu_Lady missing_sarPharaj (4)

ಖತರ್ನಾಕ್ ಸರ್ಫರಾಜ್ : ಅಮಾಸೆಬೈಲಿನಲ್ಲಿ ಮೊಬೈಲ್ ಶಾಪ್ ಹಾಗೂ ಸಿದ್ಧಾಪುರದಲ್ಲಿ ಒಂದು ಅಂಗಡಿ ನಡೆಸುತ್ತಿರುವ ಸರ್ಫರಾಝ್ ಈ ಹಿಂದೆ ಸ್ಥಳೀಯ ಮುಸ್ಲಿಂ ಯುವತಿಯೊಬ್ಬಳನ್ನು ಹಾಗೂ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಕೆಲವು ಸಮಯಗಳ ನಂತರ ಅವರನ್ನು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು, ಇದೀಗ ವಿವಾಹಿತ ಮಹಿಳೆಯನ್ನೂ ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಯಾರಿವಳು ಮಧುರಾ ಹೆಬ್ಬಾರ್: ಶಿವಮೊಗ್ಗ ಮೂಲದ ಮಧುರಾ ಹೆಬ್ಬಾರ್ ಪಿಯುಸಿ ಉತ್ತೀರ್ಣಳಾದ ನಂತರ ರಟ್ಟಾಡಿಯ ಕೃಷಿಕ ಕುಟುಂಬದ ರಾಘವೇಂದ್ರ ಹೆಬ್ಬಾರ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ನಂತರ ಮಧುರಾ ಹೆಬ್ಬಾರ್  ಕಾಲೇಜಿಗೆ ಹೋಗುವ ಹಠ ಮಾಡಿದ್ದಳು. ಆಕೆಯ ಹಠಕ್ಕೆ ಮಣಿದಿದ್ದ ರಾಘವೇಂದ್ರ ಹೆಬ್ಬಾರ್ ಕಾಲೆಜಿಗೆ ಕಳಿಸಿದ್ದ. ಈ ಸಂದರ್ಭದಲ್ಲಿ ಪರಿಚಯವಾಗಿದ್ದ ಸರ್ಫರಾಜ್ ಆಕೆಗೆ ಮೆಸೇಜು ಕಳಿಸುತ್ತಿದ್ದರೂ ಮೊದಮೊದಲೂ ಅದನ್ನು ಆಕೆ ವಿರೋಧಿಸುತ್ತಿದ್ದಳು ಎಂಬುದಾಗಿ ಆಕೆಯ ಗೆಳತಿಯರು ಹೇಳುತ್ತಾರೆ. ಆದರೆ ಕೊನೆಗೂ ಸರ್ಫರಾಜನ ಮಂಕುಬೂದಿಗೆ ಮರುಳಾದ ಆಕೆ ಆತನ ಜೊತೆ ಪರಾರಿಯಾಗಿದ್ದಳೆನ್ನಲಾಗಿದೆ.

ಬೆಂಗಳೂರಿನಲ್ಲಿ ಸಿಕ್ಕರೇ?: ಸರ್ಫರಾಜ್‌ನ ಬೊಲೆರೋ ವಾಹನವು ಭಟ್ಕಳದಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು, ಇಬ್ಬರ ಮೊಬೈಲ್ ಫೋನ್‌ಗಳೂ ಭಟ್ಕಳ ವ್ಯಾಪ್ತಿ ತನಕ ಹೋಗಿದ್ದು, ಅಲ್ಲಿಯ ನಂತರ ಸ್ವಿಚ್‌ಆಫ್ ಆಗಿದೆ ಎಂದು ತಿಳಿದುಬಂದಿದೆ. ಕಾರವಾರದಲ್ಲಿ ಮತಾಂತರ ಕೇಂದ್ರವೊಂದಿದ್ದು ಅಲ್ಲಿ ಇಬ್ಬರೂ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರಾದರೂ ಆಕೆಯನ್ನು ಪತ್ತೆ ಹಚ್ಚುವಲ್ಲಿ ಅಮಾಸೆಬೈಲ್ ಪೊಲೀಸರು ವಿಫಲರಾಗಿದ್ದು, ಕೊನೆಗೆ ಸರ್ಪರಾಜ್ ಮನೆಯವರೇ ಮಾತುಕತೆ ನಡೆಸಿ ಮನೆಗೆ ಕರೆಯಿಸಿಕೊಂಡಿದ್ದರು. ಆದರೆ ಅಲ್ಲಿ ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದು, ಕೊನೆಗೆ ಪೊಲೀಸರು ಕುಂದಾಪುರದ ಮಹಿಳಾ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆಕೆಯನ್ನು ಪ್ರತ್ಯೇಕವಾಗಿ ಕರೆದು ಹೇಳಿಕೆ ಪಡೆದುಕೊಂಡಿದ್ದು, ಆಕೆ ಗಂಡನ ಮನೆಗೂ ಹೋಗಲೊಪ್ಪದೇ ಸರ್ಪರಾಜನ ಜೊತಗೂ ಹೋಗಲೊಪ್ಪದೇ ಇದ್ದ ಕಾರಣಕ್ಕೆ ಆಕೆಯ ಮನೆಯವರ ಜೊತೆಗೆ ಕಳುಹಿಸಿಕೊಡುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

ಪತ್ರಕರ್ತರಿಗೆ ನಿಂದಿಸಿದ ಅಮಾಸೆಬೈಲು ಎಸ್ಸೈ  : ಮಾಹಿತಿ ಪಡೆದ ಪ್ರಮುಖ ಪತ್ರಿಕೆಗಳ ವರದಿಗಾರರು, ಟಿವಿ ಮಾಧ್ಯಮ ವರದಿಗಾರರು ಮಹಿಳಾ ಠಾಣೆಗೆ ಹೋದಾಗ ಅಮಾಸೆಬೈಲು ಎಸ್ಸೈ ರವಿ  ಅವಾಚ್ಯವಾಗಿ ನಿಂದಿಸುವ ಮೂಲಲ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ  ಮೌಖಿಕ ದೂರು ನೀಡಲಾಗಿದೆ. ಎಸ್ಸೈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದ ದಳ ಹಾಗೂ ಕುಂದಾಪುರ ಕ್ಷೇತ್ರ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.

Write A Comment