India

ಪಾಕ್ ಶಂಕಿತರಿಂದ 600 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ

Pinterest LinkedIn Tumblr

people-arrated

ಪೋರಬಂದರ್, ಏ.21- ಕಳೆದ ರಾತ್ರಿ ಗುಜರಾತ್‌ನ ಪೋರಬಂದರ್‌ನಲ್ಲಿ ಭಾರತೀಯ ನೌಕಾದಳ ಮತ್ತು ಕರಾವಳಿ ತೀರ ಪಡೆ ಪೊಲೀಸರಿಂದ ಬಂಧಿಸಿರುವ ಪಾಕಿಸ್ತಾನ ಶಂಕಿತರಿಂದ ವಶಪಡಿಸಿಕೊಂಡ ಮಾದಕ ವಸ್ತುಗಳ ಬೆಲೆ 600 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಪಾಕ್‌ನ ಬಂದರು ನಗರಿ ಕರಾಚಿ ಮೂಲಕ ದೋಣಿಯಿಂದ ಪೋರಬಂದರ್‌ಗೆ ಆಗಮಿಸಿದ್ದ 8 ಮಂದಿ ಶಂಕಿತರಿಂದ 200 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 800 ಕೋಟಿಗೂ ಅಧಿಕ ಎಂದು ಅಂದಾಜು ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಪಾಕ್ ಶಂಕಿತರನ್ನು ಬಂಧಿಸಿದ್ದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರಿಂದ ಹೆರಾಯಿನ್ ಜತೆಗೆ ಸ್ಯಾಟ್‌ಲೈಟ್ ಫೋನ್‌ಗಳು, ಪಿಸ್ತೂಲ್‌ಗಳು ಸೇರಿದಂತೆ ಕೆಲವು ಸಂಶಯಾತ್ಮಕ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ನೌಕಾದಳದ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಪಾಕ್ ಶಂಕಿತರಿಗೆ ಮಾದಕ ವಸ್ತುಗಳನ್ನು ರವಾನೆ ಮಾಡಲು ಭಾರತೀಯ ಮೀನುಗಾರರು ಕೈ ಜೋಡಿಸಿರಬಹುದೆಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಒಂದು ತಿಂಗಳ ಹಿಂದೆಯಷ್ಟೆ ಕರಾಚಿಯಿಂದ ಗುಜರಾತ್‌ಗೆ ಪ್ರವೇಶ ಮಾಡುತ್ತಿದ್ದ ದೋಣಿಯನ್ನು ಭಾರತೀಯ ನೌಕಾಪಡೆ ಅಧಿಕಾರಿಗಳು ಹೊಡೆದುರುಳಿಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಜಾಲವನ್ನು ಭೇದಿಸುವಲ್ಲಿ ನೌಕಾಪಡೆ ಯಶಸ್ವಿಯಾಗಿದೆ.  ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಈ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Write A Comment