ರಾಷ್ಟ್ರೀಯ

ರೈಲ್ವೆ ಇಲಾಖೆಯಲ್ಲಿ 4,263 ಕೋಟಿ ರೂ. ವಂಚನೆ

Pinterest LinkedIn Tumblr

Indian-Railway-Case

ನವದೆಹಲಿ, ಏ.21-ರೈಲ್ವೆ ಇಲಾಖೆಯಲ್ಲಿ ಸುಮಾರು 4 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ನಡೆದಿರುವ ಬಗ್ಗೆ ವಾಸನೆ ಗ್ರಹಿಸಿರುವ ಸಿಬಿಐ, ರೈಲ್ವೆ ಅಧಿಕಾರಿಗಳು ಮತ್ತು ಸರಕು ನಿರ್ವಹಣೆಗಾರರು ಶಾಮೀಲಾಗಿ ಈ ಅವ್ಯವಹಾರ ನಡೆಸಿದ್ದಾರೆ ಎಂದು ಹೇಳಿದೆ. ಕಳೆದ 2012-13ರ ಅವಧಿಯಲ್ಲಿ ರೈಲ್ವೆ ಇಲಾಖೆ 1008 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಾಟ ಮಾಡಿರುವ ರೈಲ್ವೆ ಇಲಾಖೆ,  85,262 ಕೋಟಿ ಆದಾಯಗಳಿಸಿದೆ. ಆದರೆ, ಕಂಪ್ಯೂಟರ್‌ಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ಬದಲಿಸಿ ವೇಬ್ರಿಡ್ಜ್‌ಗಳಲ್ಲಿ ನಡೆಸಲಾದ ತೂಕದಲ್ಲೇ ಗೋಲ್‌ಮಾಲ್ ಮಾಡಲಾಗಿದೆ.

ಈ ಕೃತ್ಯದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸರಕು ಸಾಗಾಟ ನಿರ್ವಾಹಕರು ಶಾಮೀಲಾಗಿ ಇಲಾಖೆಗೆ ಈ ರೀತಿ ವಂಚನೆ ಮಾಡಿದ್ದಾರೆ. ಈ ಅಕ್ರಮಕ್ಕೆ ಅಧಿಕಾರಿಗಳು ತೀರಾ ಅತ್ಯಾಧುನಿಕ ಸಾಫ್ಟ್‌ವೇರ್‌ಗಳನ್ನು ಬಳಸಿದ್ದು, ಅದು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಅಕ್ರಮ ನಡೆಸಿದ್ದಾರೆ. ಈ ಮೂಲಕ ಸುಮಾರು 4,263 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ನಡೆಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2012-13ನೇ ಸಾಲಿನ ಸರಕು ಸಾಗಣೆಯ ಒಟ್ಟು ತೂಕದಲ್ಲಿ ಕೇವಲ ಶೇ.5ರಷ್ಟು ಏರುಪೇರು ಮಾಡಿದ್ದರೂ ಅದರ ಮೌಲ್ಯ 4,263 ಕೋಟಿ ರೂ.ಗಳಷ್ಟಾಗುತ್ತದೆ. ಇದು ಕೇವಲ ಬರೀ ಆರ್ಥಿಕ ನಷ್ಟದ ಪ್ರಶ್ನೆಯಲ್ಲ. ಆದರೆ, ಖಾಸಗಿ ಸರಕು ಸಾಗಣೆ ನಿರ್ವಾಹಕರಿಗೆ ಲಾಭ ಮಾಡಿಕೊಡುವುದರ ಜತೆಗೆ ಭೋಗಿಗಳಿಗೆ ನಿಯಮಿತ ತೂಕಕ್ಕಿಂತ ಹೆಚ್ಚು ಸರಕು ಹಾಕುವುದರಿಂದ ಹಳಿಗಳು, ವ್ಯಾಗನ್‌ಗಳು ಜಖಂ ಆಗಿ ರೈಲ್ವೆ ಸುರಕ್ಷತೆಗೆ ಭಾರಿ ಹೊಡೆತ ಬೀಳಲಿದೆ ಎಂದು ಸಿಬಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Write A Comment