ಮನೋರಂಜನೆ

‘ಓ ಕಾದಲ್ ಕಣ್ಮಣಿ’ಯಿಂದ ತಮಿಳುನಾಡಿನಲ್ಲಿ ಎರಡು ಆತ್ಮಹತ್ಯೆ?

Pinterest LinkedIn Tumblr

OKK-Suicide-Husband-GF-Refuses

ಕೊಯಂಬತ್ತೂರು: ಒಂದೇ ದಿನದಲ್ಲಿ ನಡೆದ ಎರಡು ಘಟನೆಗಳಲ್ಲಿ ತನ್ನ ಪ್ರೇಯಸಿ ಇತ್ತೀಚಿಗೆ ಬಿಡುಗಡೆಯಾದ ‘ಓ ಕಾದಲ್ ಕಣ್ಮಣಿ’ ಚಿತ್ರವನ್ನು ನೋಡಲು ಜೊತೆಗೂಡಲಿಲ್ಲ ಎಂಬ ಕಾರಣಕ್ಕೆ ಕೊಯಂಬತ್ತುರಿನಲ್ಲಿ ೨೯ ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ತನ್ನ ಗಂಡ ಇದೇ  ಚಲನಚಿತ್ರಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಬಿ ಆರ್ ಪುರಂ ನಿವಾಸಿ ಜೆ ಜೈಶಂಕರ್ ಮೊದಲು ಮದ್ಯ ಸೇವಿಸಿ, ಅಲ್ಲೇ ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ತನ್ನ ಪ್ರೇಯಸಿಗೆ ಚಲನಚಿತ್ರಕ್ಕೆ ಬರುವಂತೆ ಕೇಳಿದ್ದಾನೆ. ಮಣಿರತ್ನಂ ಅವರ ‘ಓ ಕಾದಲ್ ಕಣ್ಮಣಿ’ ಸಿನೆಮಾಕ್ಕೆ ತನ್ನ ಜೊತೆಗೂಡದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಬರಲು ನಿರಾಕರಿಸಿದ್ದರಿಂದ ಜೈಶಂಕರ್ ನೇಣು ಬಿಗಿದುಕೊಂಡಿದ್ದಾನೆ ಎಂದು ಪೀಲಮೇಡು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ನವ ಇಂಡಿಯಾ ಪ್ರದೇಶದ ನಿವಾಸಿ ಪಿ ಸತ್ಯಪ್ರಿಯ ತನ್ನ ಪತಿ ಪಳನಿಸ್ವಾಮಿ ಅವರಿಗೆ ಬಿಗ್ ಬಜಾರ್ ನಲ್ಲಿ ಶಾಪಿಂಗ್ ಗೆ ಕರೆದುಕೊಂಡು ಹೋಗಿ ‘ಓ ಕಾದಲ್ ಕಣ್ಮಣಿ’ ಚಲನಚಿತ್ರ ತೋರಿಸುವಂತೆ ದುಂಬಾಲು ಬಿದ್ದಿದ್ದಾರೆ.

ಖಾಸಗಿ ಸಂಸ್ಥೆಯೊಂದರ ಮಾರಾಟ ನಿರ್ದೇಶಕನಾಗಿರುವ ಪಳನಿಸ್ವಾಮಿ ತನಗೆ ಹುಷಾರಿಲ್ಲ ಎಂದು ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಅವನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದರು ಯಾವುದೇ ಪ್ರಯೋಜನವಾಗಿಲ್ಲ.

Write A Comment