ಆರೋಗ್ಯ

ನಟಿ ಚೇತನಾ ರಾಜ್ ಪ್ರಕರಣ: ಲೈಸೆನ್ಸ್ ಇಲ್ಲದೇ ಶಸ್ತ್ರಚಿಕಿತ್ಸೆ ನಡೆದಿತ್ತೇ..?ಶೆಟ್ಟಿ ಕಾಸ್ಮೆಟಿಕ್ ಸೆಂಟರ್’ಗೆ ನೋಟಿಸ್..!

Pinterest LinkedIn Tumblr

ಬೆಂಗಳೂರು: ನಟಿ ಚೇತನಾ ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.

ಕೊಬ್ಬನ್ನು ತೆಗೆಯುವ ಶಸ್ತ್ರಚಿಕಿತ್ಸೆ (ಲೈಪೋ ಸಕ್ಷನ್)ಯ ನಂತರ ಕನ್ನಡ ನಟಿ ಚೇತನ ರಾಜ್ ಅವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಆರೋಗ್ಯಾಧಿಕಾರಿ ಅವರು ಶೆಟ್ಟಿ ಸೌಂದರ್ಯವರ್ಧಕ ಕೇಂದ್ರಕ್ಕೆ ನೋಟಿಸ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳು, ‘ಶೆಟ್ಟಿ ಸೌಂದರ್ಯವರ್ಧಕ ಕೇಂದ್ರವು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಯನ್ನು ನಡೆಸಲು ಮಾತ್ರ ಪರವಾನಗಿಯನ್ನು ಹೊಂದಿತ್ತು, ಅವರು ಚೇತನಾ ರಾಜ್ ಅವರಿಗೆ ನಡೆಸಲಾದ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಕ್ಕಾಗಿ ಅಲ್ಲ. ಹೀಗಾಗಿ ಅವರು ಈ ಘಟನೆಯ ಕುರಿತು ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗಿದೆ. ಸ್ಪಂದಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗಳು ಚೇತನಾ ಸಾವನ್ನಪ್ಪಿರುವುದಾಗಿ ಅವರ ತಂದೆ ವರದರಾಜು
ಆರೋಪಿಸಿದ್ದಾರೆ. ಡಾ.ಸಾಹೇಬ್ ಗೌಡ ಶೆಟ್ಟಿ, ಡಾ.ಶೆಟ್ಟಿ ಕಾಸ್ಮಿಟಿಕ್ ಸೆಂಟರ್ ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಸಿಆರ್ ಪಿಸಿ 174(C) ಅಡಿ ಯುಡಿಅರ್ ದಾಖಲಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

Comments are closed.