ಆರೋಗ್ಯ

ಬಾಲಕಿ ಲಿವರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ನೆರವು ನೀಡಿ‌ ಮಾನವೀಯತೆ ಮೆರೆದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಕೋಟ ಅಮೃತೇಶ್ವರಿ ದೇವಳ ಸಮೀಪದ ನಿವಾಸಿ, ದೇವಳದ ಅರ್ಚಕ ಪ್ರತಿನಿಧಿ ದಾಮೋದರ ಜೋಗಿ – ದೀಕ್ಷಾ ದಂಪತಿ ಪುತ್ರಿ 6 ವರ್ಷದ ಮಾನ್ಯಾಳ ಲಿವರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ಉಡುಪಿಯ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಮೂರ್ತಿ ನಾಯಕ್ ವೈಯಕ್ತಿಕವಾಗಿ 40,000 ರೂ. ಮತ್ತು ಸಹೋದ್ಯೋಗಿಗಳ ವಾಟ್ಸಾೃಪ್ ಗ್ರೂಪ್ ನೆರವಿನಿಂದ 50,000 ಒಟ್ಟುಗೂಡಿಸಿ ಹಸ್ತಾಂತರಿಸುವ ಮೂಲಕ ಮಗುವಿನ ಚಿಕಿತ್ಸೆಗೆ ನೆರವಾಗಿದ್ದಾರೆ.

ಬಾಲಕಿಯ ಚಿಕಿತ್ಸೆಗೆ 16 ಲಕ್ಷ ರೂ. ಅಗತ್ಯವಿದ್ದು, ಅದರಂತೆ ಕೋಟ ಪರಿಸರದ ಸ್ಥಳೀಯ ಗಣ್ಯರ ಮೂಲಕ ಸಭೆ ನಡೆಸಿ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮೊರೆ ಹೋಗಿದ್ದರು. ಅದರಂತೆ ಉಡುಪಿಯ ರಿಸರ್ವ್ ಪೊಲೀಸ್ ಇಲಾಖೆಯ ಇನ್‌ಸ್ಪೆಕ್ಟರ್ ಮೂರ್ತಿ ನಾಯಕ್ ಮತ್ತು ಸಹೋದ್ಯೋಗಿಗಳ ವಾಟ್ಸಾಪ್ ಗ್ರೂಪ್ ನೆರವಿನಿಂದ ಮಗುವಿನ ಚಿಕಿತ್ಸೆಗೆ ಹಣ ನೀಡಲಾಗಿದೆ.

ಗುರುವಾರ ಕೋಟ ಅಮೃತೇಶ್ವರಿ ದೇವಳದ ಬಳಿಯ ದಾಮೋದರ ಜೋಗಿ ಮನೆಗೆ ಸಿಬ್ಬಂದಿಯೊಂದಿಗೆ ತೆರಳಿ ನೆರವು ಹಸ್ತಾಂತರಿಸಿದರು. ಉಡುಪಿ ಎ.ಆರ್. ಎಸ್‌ಐ ಪಾಂಡುರಂಗ, ಎಎಸ್‌ಐ ಜಯಕರ, ಹೈವೇ ಪಟ್ರೊಲ್ ಚಾಲಕ ಪ್ರಶಾಂತ್ ಪಡುಕರೆ, ಕೋಟ ಗ್ರಾಪಂ ಸದಸ್ಯ ಸಂತೋಷ್ ಪ್ರಭು, ಅರ್ಚಕ ಯುವ ಸಂಘದ ಪ್ರಮುಖರು ಇದ್ದರು.

Comments are closed.