ಆರೋಗ್ಯ

ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಲ್ಲಿ ಆಯಸ್ಕಾಂತ ಶಕ್ತಿ? ಉಡುಪಿಯ ವೈರಲ್ ವಿಡಿಯೋ ಬಗ್ಗೆ ಡಿಸಿ ಸ್ಪಷ್ಟನೆ

Pinterest LinkedIn Tumblr

ಉಡುಪಿ: ಕೋವಿಡ್ ಲಸಿಕೆ ಪಡೆದರೆ ದೇಹಕ್ಕೆ ಅಯಸ್ಕಾಂತೀಯ ಶಕ್ತಿ ಬರುತ್ತದೆ ಎನ್ನುವ ಪುಕಾರು ಹಬ್ಬಿಸುವ ವಿಡಿಯೋ ಒಂದು ಇತ್ತೀಚೆಗೆ ಮಹಾರಾಷ್ಟ್ರ- ಜಾರ್ಖಂಡ್ ರಾಜ್ಯದಲ್ಲಿ ಎನ್ನುವಂತೆ ವೈರಲ್ ಆಗಿದ್ದು ಸದ್ಯ ಉಡುಪಿಲ್ಲೂ ಅಂತಹದೆ ವಿಡಿಯೋ ವೈರಲ್ ಆಗಿದೆ. ಉಡುಪಿ ಮೂಲದ ವ್ಯಕ್ತಿಯೊಬ್ಬರ ಮೈಯಲ್ಲಿ ಆಯಸ್ಕಾಂತೀಯ ಶಕ್ತಿಯಿದೆ. ಮೈಯಲ್ಲಿ ಸೌಟು, ತಟ್ಟೆ, ಲೋಟ ಅಂಟುತ್ತಿದೆ.

ಉಡುಪಿಯ ಪಿಪಿಸಿ ಬಳಿಯ ವ್ಯಕ್ತಿಯೊಬ್ಬರ ಮೈಯಲ್ಲಿ ವಸ್ತುಗಳು ಅಂಟುತ್ತಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ನಾನು ಕೆಲ ದಿನಗಳ ಹಿಂದೆ ಕೋವಿಡ್ ಲಸಿಕೆ ಪಡೆದಿದ್ದು ಲಸಿಕೆ ಪಡೆದವರಿಗೆ ಆಯಸ್ಕಾಂತದ ಶಕ್ತಿ ಬರುವ ಬಗ್ಗೆ ವಿಡಿಯೋ ನೋಡಿದ್ದ ತಾನೂ ಪ್ರಯೋಗ ಮಾಡಿದಾಗ ತನ್ನ ಮೈಯಲ್ಲಿ ಸೌಟು, ತಟ್ಟೆ, ಲೋಟಗಳು ಅಂಟಿದ್ದವು ಎಂದು ಆ ವ್ಯಕ್ತಿ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗುತ್ತಿದೆ.

ಡಿಸಿ ಜಿ. ಜಗದೀಶ್ ಸ್ಪಷ್ಟನೆ…
ಆಯಸ್ಕಾಂತ ಶಕ್ತಿಯ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಲಸಿಕೆ ಪಡೆದರೆ ಯಾವುದೇ ಕಾರಣಕ್ಕೂ ಆಯಸ್ಕಾಂತೀಯ ಶಕ್ತಿ ಬರುವುದಿಲ್ಲ. ಆ ವ್ಯಕ್ತಿಯನ್ನು ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅವರ ಹಣೆ, ಭುಜ, ಬೆನ್ನು, ಹೊಟ್ಟೆ ಮತ್ತು ಮೊಣಕೈ ಭಾಗದಲ್ಲಿ ಅವರಿಗೆ ಆಯಸ್ಕಾಂತೀಯ ಲಕ್ಷಣಗಳು ಇರುವ ಬಗ್ಗೆ ಕಂಡುಬಂದಿದೆ. ಅವರಿಗೆ ಇತರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಲಸಿಕೆಯ ಕಾರಣದಿಂದ ಈ ತರಹದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಜನರಲ್ಲಿ ಯಾವುದೇ ಗೊಂದಲ ಬೇಡ ಎಂದು ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

Comments are closed.