ಕರಾವಳಿ

ಜನರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ : ಬೋಳೂರು ಬೋಕ್ಕಪಟ್ನದಲ್ಲಿ ದಿನಸಿ ಕಿಟ್ ವಿತರಿಸಿ ಮಾಜಿ ಶಾಸಕ ಲೋಬೋ

Pinterest LinkedIn Tumblr

ಮಂಗಳೂರು : ಬೋಳೂರು ಬೊಕ್ಕಪಟ್ನದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾದ ಬಡ ಜನರಿಗೆ ಕಾಂಗ್ರೆಸ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಯುವ ಉದ್ಯಮಿ, ಕಾಂಗ್ರೆಸ್ ಕಾರ್ಯಕರ್ತ ಶಾನ್ ಡಿಸೋಜಾ ರವರು, ಅವರ ತಂದೆ ದಿ. ಸ್ಟಾನಿ ಡಿಸೋಜಾ ಮತ್ತು ಅವರ ದೊಡ್ಡಪ್ಪ ದಿ. ಜಾನ್ ಡಿಸೋಜಾ ರವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ರವರು ನೊಂದವರಿಗೆ ವಿತರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೋಬೊರವರು,ಈ ಒಂದು ಬೀಕರ ಕೋವಿಡ್ ರೋಗದಿಂದ ಜನ ತತ್ತರಿಸಿ ಹೋಗಿದ್ದಾರೆ. ಕೆಲಸವಿಲ್ಲದೇ ಜನ ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಜನರಿಗೆ ಬೇಕಾಗುವ ಅವಶ್ಯ ವಸ್ತುಗಳನ್ನು ಒದಗಿಸಲು ಸರಕಾರ ವಿಫಲವಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿಲ್ಲ.

ಅದಕ್ಕೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಜನರನ್ನು ಸ್ಪಂದಿಸುವಂತಹ ಕಾರ್ಯ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಲೊಯ್ ಡಿಸೋಜಾ, ಕ್ಲೇರ ಡಿಸೋಜಾ, ಗ್ರೇಸಿ ಡಿಸೋಜಾ, ಅಕ್ಷತಾ ಡಿಸೋಜಾ, ರುಡಾಲ್ಫ್ ಸಲ್ದಾನ, ಟಿ. ಕೆ. ಸುಧೀರ್, ಉದಯ್ ಕುಂದರ್, ಲಕ್ಷ್ಮಣ್ ಶೆಟ್ಟಿ, ಯಶವಂತ ಪ್ರಭು, ಯೋಗೀಶ್ ನಾಯಕ್, ರೋಷನ್, ಅಶೋಕ್, ಮಂಜುಳಾ ನಾಯಕ್, ಸಮರ್ಥ ಭಟ್,ಕೃತಿನ್ ಕುಮಾರ್,ಆಸೀಫ್ ಜೆಪ್ಪು, ಆಸ್ಟನ್ ಸಿಕ್ವೇರಾ,ಜೀವನ್ ಮೋರೆ ಮೊದಲಾದವರು ಉಪಸ್ಥಿತರಿದ್ದರು.

ಬೋಳೂರು ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ಗಳ ವಿತರಣೆ.

ನಗರದ 27ನೇ ಬೋಳೂರು ವಾರ್ಡಿನ ಕುದ್ರೋಳಿ ಕರ್ನಲ್ ಗಾರ್ಡನ್ಸ್ ನಲ್ಲಿ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡ ಜನರಿಗೆ ದಿನಸಿ ಸಾಮಾನುಗಳ ಕಿಟ್ ಗಳನ್ನು ಮಾಜಿ ಶಾಸಕ ಜೆ. ಆರ್. ಲೋಬೊ ರವರು ವಿತರಣೆಗೈದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮ ನ ಪಾ ಸದಸ್ಯ ಕಮಲಾಕ್ಷ ಸಾಲ್ಯಾನ್, ಒಬಿಸಿ ಜೆಲ್ಲಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ವಾರ್ಡ್ ಅಧ್ಯಕ್ಷ ದೀಪಕ್ ಶ್ರೀಯಾನ್, ಡಾ. ಬಿ. ಜಿ. ಸುವರ್ಣ, ಟಿ. ಕೆ. ಸುಧೀರ್, ನೀರಜ್ ಪಾಲ್,ಉದಯ್ ಕುಂದರ್,ಭುವನ್ ಕರ್ಕೇರ,ವಿಶಾಲ್, ಚೇತನ್, ರಕ್ಷಿತ್, ರೋಷನ್, ರಾಜ್ ಕುಮಾರ್,ಆಸೀಫ್ ಜೆಪ್ಪು, ಯಶವಂತ ಪ್ರಭು, ಜೀವನ್ ಮೋರೆ, ಶಶಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Comments are closed.