ಆರೋಗ್ಯ

ವ್ಯಾಸಂಗ, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ

Pinterest LinkedIn Tumblr

ಉಡುಪಿ: ಸರಕಾರವು 18 ರಿಂದ 44 ವರ್ಷದ ಆಯ್ದ ಗುಂಪುಗಳಿಗೆ ಕೋವಿಡ್-19 ಲಸಿಕಾಕರಣ ಪ್ರಾರಂಭಿಸುವ ಕುರಿತು ಆದೇಶಿಸಲಾಗಿದ್ದು, ಅದರಂತೆ ವ್ಯಾಸಾಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ,ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇದರ ನೋಡೆಲ್‌ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಅವರನ್ನು ನೇಮಿಸಲಾಗಿದ್ದು, ಲಸಿಕೆ ನೀಡುವ ಕುರಿತ ಅನೆಕ್ಸರ್-3 ನ್ನು ಅಪರ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ, ಮಣಿಪಾಲ ಉಡುಪಿ ಇಲ್ಲಿಂದ ಪಡೆಯಬಹುದಾಗಿದೆ.

ಅನೆಕ್ಸರ್-3 ಪಡೆಯಲು, ಅರ್ಜಿಯೊಂದಿಗೆ, ಆಧಾರ್‌ಕಾರ್ಡು , ಪಾಸ್ ಪೋರ್ಟ್ , ವೀಸಾ , ವ್ಯಾಸಾಂಗದ ಬಗ್ಗೆ ವಿದ್ಯಾಸಂಸ್ಥೆಯ ಪತ್ರ (Offer letter) ಇವುಗಳ ಮೂಲಪ್ರತಿ ಹಾಗೂ ಸ್ವಯಂ ದೃಢೀಕರಿಸಿದ ಜೆರಾಕ್ಸ್ ಪ್ರತಿಯೊಂದಿಗೆಕಚೇರಿಯನ್ನು ಸಂಪರ್ಕಿಸುವುದು. ಹೆಚ್ಚಿನ

ಮಾಹಿತಿಗಾಗಿ ಕಚೇರಿ ದೂರವಾಣಿ ಸಂ: 0820-2574802 ಅಥವಾ 1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.