ಆರೋಗ್ಯ

ಕಟ್ಟಡ ಕಾರ್ಮಿಕರಿಗೆ ಮಹತ್ವದ ಸೂಚನೆ: ಕೋವಿಡ್ ಲಸಿಕೆ ಪಡೆಯುವ ಬಗ್ಗೆ ವಿವರವಿಲ್ಲಿದೆ

Pinterest LinkedIn Tumblr

ಉಡುಪಿ: ಸರ್ಕಾರವು ಕಟ್ಟಡಕಾರ್ಮಿರನ್ನು ಸಹ ಆಧ್ಯತಾ ವರ್ಗವೆಂದು ಸರ್ಕಾರ ಪರಿಗಣಿಸಿ 1 ನೇ ಡೋಸ್ ಲಸಿಕೆಯನ್ನು ನೀಡಲಿದೆ.

ಆದ್ದರಿಂದ ಉಡುಪಿ ಜಿಲ್ಲೆಯ ಎಲ್ಲ ಕಟ್ಟಡ ನಿರ್ಮಾಣ ಸಂಸ್ಥೆಯ ಮಾಲೀಕರು/ಗುತ್ತಿಗೆದಾರರು/ಕ್ರೇಡಾಯ್ ಸದಸ್ಯರು ತಮ್ಮತಮ್ಮ ಕಟ್ಟಡ ಕಾರ್ಮಿಕರ ವಿವರವನ್ನು ಜಿಲ್ಲೆಯ ತಾಲೂಕುಗಳಲ್ಲಿರುವ ಕಾರ್ಮಿಕ ನಿರೀಕ್ಷಕರಕಛೇರಿಗೆ ಸಲ್ಲಿಸಿ , 18 ರಿಂದ 44 ವರ್ಷದೊಳಗಿನ ಎಲ್ಲಾ ಕಟ್ಟಡಕಾರ್ಮಿಕರಿಗೆ ಲಸಿಕೆಯನ್ನು ಹಾಕಿಸುವಂತೆ ಮತ್ತು 45 ವರ್ಷ ಮೇಲ್ಪಟ್ಟ 1 ನೇ ಡೋಸ್ ಲಸಿಕೆ ಪಡೆಯದ ಕಾರ್ಮಿಕರ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ನೀಡುವಂತೆ ಕೋರಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಹತ್ತಿರದ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರನ್ನು ಮತ್ತು ಪಿ.ಹೆಚ್.ಸಿ ಗಳನ್ನು ಅಥವಾ ಸಿವಿಸಿಗಳನ್ನು ಸಂಪರ್ಕಿಸಿ ಲಸಿಕೆ ನೀಡುವ ನಿಗದಿಯಾದ ದಿನಾಂಕಗಳನ್ನು ತಿಳಿದುಕೊಂಡು ಅಗತ್ಯ ದಾಖಲೆಗಳನ್ನು ಮತ್ತು ತಮ್ಮ ನೋಂದಣಿ ಪತ್ರವನ್ನು ಮತ್ತು ಆಧಾರ್ ಹಾಜರು ಪಡಿಸಿ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ನೋಂದಾಯಿತರಲ್ಲದ ಕಟ್ಟಡ ಕಾರ್ಮಿಕರು ಸಂಬಂಧಿಸಿದ ತಾಲೂಕು ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಿ ಕಟ್ಟಡಕಾರ್ಮಿಕರೆಂಬ ಬಗ್ಗೆ ಸೂಕ್ತ ಮತ್ತುಅಗತ್ಯ ದಾಖಲೆಗಳನ್ನು ಸಲ್ಲಿಸಿ ಅನುಬಂಧ-3 ರಲ್ಲಿದೃಢೀಕರಣ ಪತ್ರವನ್ನು ಪಡೆದು ಅನುಬಂಧ 3 ಮತ್ತು ಆಧಾರ್‌ಕಾರ್ಡ್ ಹಾಜರು ಮಾಡಿ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ‌ ಮಾಹಿತಿಗಾ‌ಗಿ ಉಡುಪಿ-8792638806/9036660366, ಕಾರ್ಕಳ–7760625404/9844251886 ಕುಂದಾಪುರ-7760625404/9844251886 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.