ಆರೋಗ್ಯ

ಇಂದಿನಿಂದ (ಮೇ.19) ಮನೆ ಸಮೀಪದಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಿ; ಅನಾವಶ್ಯಕ ತಿರುಗಾಡಿದ್ರೆ ವಾಹನ ಸೀಜ್: ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಲಾಕ್ ಡೌನ್ ವೇಳೆ ಸಾರ್ವಜನಿಕರು ದಿನಸಿ ಸಾಮಾಗ್ರಿ ಖರೀದಿ ನೆಪದಲ್ಲಿ ಅನಗತ್ಯ ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿದರೆ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ದಿನನಿತ್ಯದ ಅಗತ್ಯ ದಿನಸಿ ವಸ್ತುಗಳು, ತರಕಾರಿ, ಮತ್ತು ಮೀನು ಖರೀದಿಗೆ ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ಖರೀದಿಸುವುದು. ಅನಗತ್ಯವಾಗಿ ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿದರೆ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು ಈ ಕಟ್ಟುನಿಟ್ಟಿನ ಆದೇಶದ ಬಗ್ಗೆ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲೂ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಮೈಕ್ ಪ್ರಚಾರ ನಡೆಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

Comments are closed.