ಕರಾವಳಿ

ಮೇ.24ರ ಬಳಿಕವೂ ಲಾಕ್ಡೌನ್ ಮುಂದುವರೆಸುವುದು ಸೂಕ್ತ: ಸಚಿವ ಆರ್. ಅಶೋಕ್

Pinterest LinkedIn Tumblr

ಕುಂದಾಪುರ: ಲಾಕ್ ಡೌನ್ ನಿಂದಾಗಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ. ಸಾವು ನೋವುಗಳು ಕಮ್ಮಿಯಾಗಿದೆ. ಆ ದೃಷ್ಟಿಯಿಂದ ಲಾಕ್ ಡೌನ್ ಮಾಡುವುದು ಸೂಕ್ತವೆಂದು ಹಲವಾರು ಮಂತ್ರಿಗಳು, ತಜ್ಞರು, ಕೋವಿಡ್ ತಜ್ಞರು ಲಾಕ್ ಡೌನ್ ಮುಂದುವರೆಸಲು ತಿಳಿಸಿದ್ದಾರೆ. ಲಾಕ್ ಡೌನ್ ಮಾಡುವಂತದ್ದು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿರುವಂತದ್ದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಹಾನಿಗೀಡಾಗಿ ಮರವಂತೆ ತೀರ ಪ್ರದೇಶಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಇನ್ನು ಚಂಡಮಾರುತ ಪರಿಣಾಮದ‌ ಮಳೆ‌ ಹಾಗೂ ಗಾಳಿಯಿಂದ ಮನೆ ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿದ್ದು ಅದರ ಪುನರ್ ರಿಪೇರಿಗೆ ಕೆಲ ವಸ್ತುಗಳು ಅಗತ್ಯವಾಗಿದ್ದು ಅಂತಹ ಅಂಗಡಿ ತೆರೆಯಲು‌ ಹಾಗೂ ಜನರು ಅದರ ಖರೀದಿಗೆ ತೆರಳಲು ಅವಕಾಶ ನೀಡಬೇಕು ಎನ್ನುವ ಪತ್ರಕರ್ತರ ಅಭಿಪ್ರಾಯಕ್ಕೆ ಸ್ಪಂದಿಸಿದ ಅವರು ಈ ಬಗ್ಗೆ ಜಿಲ್ಲಾಡಳಿತದ ಬಳಿ ಚರ್ಚಿಸುತ್ತೇನೆ ಎಂದರು.

 

Comments are closed.