ಆರೋಗ್ಯ

ಬಸ್ಸಿನಲ್ಲಿ ಮಾಸ್ಕ್ ಕಡ್ಡಾಯ: ತಪ್ಪಿದಲ್ಲಿ ಪರವಾನಿಗೆ ರದ್ದು, ಮಾಲಿಕರ ವಿರುದ್ದ ಪ್ರಕರಣ: ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಕೋವಿಡ್ -19 ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಸ್ಸುಗಳಲ್ಲಿ ಚಾಲಕ, ನಿರ್ವಾಹಕ ಸಹಿತ ಮಾಸ್ಕ್ ಧರಿಸದೆ ಪ್ರಯಾಣಿಕರು ಕಂಡು ಬಂದಲ್ಲಿ ಬಸ್ಸುಗಳ ಪರವಾನಿಗೆ ರದ್ದು ಮಾಡಲು ಮತ್ತು ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್.ಟಿ.ಒ‌) ಹಾಗೂ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಡಿಸಿ ಸೂಚಿಸಿದ್ದಾರೆ.

ಮಾ. 15 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ -19 ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡದಿರುವುದು ಹಾಗೂ ಮಾಸ್ಕ್ ಧರಿಸದಿರುವುದು ಹೆಚ್ಚುತ್ತಿದ್ದು, ಕೋವಿಡ್-19ರ ನಿಯಂತ್ರಣದಲ್ಲಿ ಹಿನ್ನಡೆಯಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿರುತ್ತಾರೆ.ಈ ಬಗ್ಗೆ ಈಗಾಗಲೇ ಉಲ್ಲೇಖ(2)ರಂತ ನಿದೇಶನ ನೀಡಲಾಗಿದೆ ಎಂದಿದ್ದಾರೆ.

ಬಸ್ಸುಗಳಲ್ಲಿ ಡ್ರೈವರ್ ಕಂಡಕ್ಟರ್’ಗಳು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ ಬಸ್ ಗಳಲ್ಲಿ ಪ್ರವೇಶ ನೀಡಬಾರದಾಗಿಯೂ ಹಾಗೂ ಮಾಸ್ಕ್ ಧರಿಸದಿರುವುದು ಕಂಡು ಬಂದಲ್ಲಿ ಬಸ್ಸುಗಳ ಪರವಾನಿಗೆಯನ್ನು ರದ್ದು ಮಾಡಲು ಹಾಗೂ ಸಂಬಂಧಪಟ್ಟ ಬಸ್ಸಿನ ಮಾಲಿಕರ ಮೇಲೆ ಪ್ರಕರಣ ದಾಖಲಿಸಲು ಕ್ರಮ ವಹಿಸುವುದು ಅನಿವಾರ್ಯ ಎಂದು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Comments are closed.