ಕರಾವಳಿ

ಉಡುಪಿಯಲ್ಲಿ ಮತ್ತೆ ಕೊರೋನಾತಂಕ: 33 ಮಂದಿಗೆ ಪಾಸಿಟಿವ್; ಮಣಿಪಾಲ ಎಂಐಟಿ ಕ್ಯಾಂಪಸ್ ಕಂಟೈನ್ಮೆಂಟ್ ಝೋನ್

Pinterest LinkedIn Tumblr

ಉಡುಪಿ: ಕಳೆದ ಹಲವು ತಿಂಗಳಿನಿಂದ ಕೊರೋನಾ ಸೋಂಕಿನ ವಿಚಾರದಲ್ಲಿ‌ ನಿರಾತಂಕದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಮತ್ತೆ 33 ಮಂದಿಯಲ್ಲಿ ಕೋರೋನಾ‌ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಅದರಲ್ಲಿ ಮಣಿಪಾಲದ ಎಂ.ಐ.ಟಿ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಖಾರಿ ಡಾ ಸುಧೀರ್ ಚಂದ್ರ ಸೂಡಾ ಜಿಲ್ಲೆಯಲ್ಲಿ ಒಟ್ಟು 33 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಮಣಿಪಾಲದ ಎಂಐಟಿ ಕ್ಯಾಂಪಸ್ ಕಂಟೈನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಹೊರ ರಾಜ್ಯದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದ್ದು, ಪ್ರಾಥಮಿಕ ಸಂಪರ್ಕಿತರಲ್ಲೂ ಕಾಣಿಸಿಕೊಂಡ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಸಾರ್ವಜನಿಕರಿಗೆ ಸೋಂಕು ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಂಐಟಿ ಸುತ್ತ ಕಂಟೈನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Comments are closed.