ಉಡುಪಿ: ಪ್ರಥಮ ಹಂತದ ಕೋವಿಡ್ ಲಸಿಕೆ ಪಡೆಯಲು ಈಗಾಗಲೇ ನೊಂದಾಯಿಸಿಕೊಂಡು, ಇದುವರೆಗೂ ಲಸಿಕೆ ಪಡೆಯದ ಸರಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಹಾಗೂ ಫ್ರಂಟ್‌ಲೈನ್ ವರ್ಕರ್‌ಗಳಿಗೆ ಫೆಬ್ರವರಿ 22 ರಿಂದ 24 ರ ವರೆಗೆ 3 ದಿನಗಳ ಕಾಲ ಲಸಿಕೆ ಪಡೆಯಲು ವಿಶೇಷ ಅವಕಾಶ ನೀಡಲಾಗಿದೆ.
ಆದ್ದರಿಂದ ಪ್ರಥಮ ಹಂತದ ಲಸಿಕೆ ಪಡೆಯಲು ನೊಂದಾಯಿಸಿಕೊಂಡು, ಇದುವರೆಗೂ ಲಸಿಕೆ ಪಡೆಯದ ಕೋವಿಡ್ ಸರಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಹಾಗೂ ಫ್ರಂಟ್‌ಲೈನ್ ವರ್ಕರ್‌ಗಳು, ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.