ಆರೋಗ್ಯ

ಶಾಕಿಂಗ್ ನ್ಯೂಸ್: ಕೊರೋನಾ ಬಳಿಕ ವಿಶ್ವಕ್ಕೆ ಎಂಟ್ರಿ ಕೊಟ್ಟ ಮತ್ತೊಂದು ಭೀತಿ ಹುಟ್ಟಿಸುವ ವೈರಸ್

Pinterest LinkedIn Tumblr

ವಿಶ್ವಾದ್ಯಂತ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಇಡೀ ವಿಶ್ವ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ದೇಶ ವಿದೇಶದಲ್ಲಿ ವಿಜ್ಞಾನಿಗಳು ಹರಸಾಹಸಪಡುತ್ತಿದ್ದಾರೆ.

ಇಡೀ ವಿಶ್ವವೇ ಕಳೆದ ವರ್ಷದಿಂದ ಕೊರೊನಾ ಆತಂಕದಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ಹೊಸ ವೈರಸ್‌ ಒಂದು ಎಂಟ್ರಿ ಕೊಟ್ಟಿದೆ ಎಂಬ ಶಾಕಿಂಗ್ ಸುದ್ದಿ ವರದಿಯಾಗಿದೆ. ಈ ವೈರಸ್‌ ಕೂಡ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಈ ವೈರಸ್ ಕುರಿತ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಎಬೋಲಾದಂತಹ ರಕ್ತಸ್ರಾವ ಜ್ವರ ಸೃಷ್ಟಿ ಮಾಡುವ ಚಪರೆ ಹೆಸರಿನ ವೈರಸ್ (Chapare virus) ಪತ್ತೆಯಾಗಿದ್ದು, ಇದು ಮನುಷ್ಯನಿಂದ ಮನುಷ್ಯನಿಗೆ ಹರಡಬಹುದು ಎಂದು ತಜ್ಞರು ಮತ್ತೊಂದು ಶಾಕಿಂಗ್​ ಸುದ್ದಿ ನೀಡಿದ್ದಾರೆ.

ಡೆಂಗ್ಯೂ ಮಾದರಿಯ ಲಕ್ಷಣಗಳನ್ನು ಈ ವೈರಸ್ ಹೊಂದಿದೆ. ಇದರಿಂದ ಮೆದುಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಹಾಗೆಯೇ ಇಬೋಲಾದ ಲಕ್ಷಣಗಳನ್ನು ಕೂಡ ಹೊಂದಿದೆ. ಇದನ್ನು ಅತ್ಯಂತ ಕೆಟ್ಟ ವೈರಸ್ ಎಂದು ಪರಿಗಣಿಸಲಾಗಿದೆ.

ಈ ವೈರಸ್​ ಮನುಷ್ಯನಿಂದ ಮನುಷ್ಯನಿಗೆ ಹಬ್ಬಿತ್ತು. ಈ ವೈರಸ್​ ಸೋಂಕಿತನ ವೀರ್ಯದಲ್ಲಿ 24 ವಾರಗಳಕಾಲ ಜೀವಂತವಾಗಿತ್ತು! ಹೀಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ತಜ್ಞರ ಅಭಿಪ್ರಾಯ.

ವಿಜ್ಞಾನಿಗಳು ನೀಡಿರುವ ಮಾಹಿತಿ ಪ್ರಕಾರ 2019ರಲ್ಲಿ ಬೊಲಿವಿಯಾದ ರಾಜಧಾನಿ ಲಾ ಪಾಜ್‌ನಲ್ಲಿ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯ ಇಬ್ಬರು ನರ್ಸ್‌ಗಳು ಈ ವೈರಸ್‌ನಿಂದಲೇ ಮೃತಪಟ್ಟಿದ್ದರು.

ಕಳೆದ ವರ್ಷ ಸೋಂಕು ಕಾಣಿಸಿಕೊಂಡಿದ್ದ ಐದು ಮಂದಿಯಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಈ ವೈರಸ್​ ತಗುಲಿದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರಂಭದಲ್ಲಿ ವೈದ್ಯರು ಇದನ್ನು ಡೆಂಗ್ಯೂ ಎಂದು ಭಾವಿಸಿದ್ದರು. ಆದರೆ, ದಿನ ಕಳೆದಂತೆ ಯಾರಲ್ಲೂ ಡೆಂಗ್ಯೂ ಲಕ್ಷಣವೇ ಇರಲಿಲ್ಲ. ಕೊನೆಗೆ ಇದು ಚಪರೆ ವೈರಸ್​ ಎಂಬುದು ಖಾತ್ರಿ ಆಗಿತ್ತು.

2004ರಲ್ಲಿ ಈ ವೈರಸ್‌ನ್ನು ಬೊಲಿವಿಯಾದ ಚಾಪರೆ ಪ್ರದೇಶದಲ್ಲಿ ಕಂಡುಹಿಡಿಯಲಾಗಿತ್ತು. ಈ ವೈರಸ್ ಇಲಿಗಳಿಂದ ಮಾನವನ ಶರೀರವನ್ನು ಪ್ರವೇಶಿಸುತ್ತದೆ. ಇದು ಕೂಡ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಯಾರಿಗೆಲ್ಲಾ ಈ ಸೋಂಕು ತಗುಲಿರುತ್ತದೆಯೋ ಅವರಲ್ಲಿ ವಸಡಿನಲ್ಲಿ ರಕ್ತ ಸುರಿಯುವುದು, ಮುಖ ಊದಿಕೊಳ್ಳುವುದು, ಕಣ್ಣಿನೊಳಗೆ ನೋವು ಕಾಣಿಸಿಕೊಳ್ಳುತ್ತದೆ, ಈ ರೋಗಕ್ಕೆ ಯಾವುದೇ ಔಷಧಗಳಿಲ್ಲ. ಒಂದೆರೆಡು ಪ್ರಕಣಗಳಲ್ಲೇ ರೋಗದ ಬಗ್ಗೆ ಅರಿವು ಬಂದಿರುವ ಕಾರಣ ಚಿಕಿತ್ಸೆಯೂ ಕೂಡ ಸುಲಭವಾಗಲಿದೆ. ಈ ವೈರಸ್‌ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜ್ವರ, ಹೊಟ್ಟೆ ನೋವು, ವಾಂತಿ, ಒಸಡುಗಳಲ್ಲಿ ರಕ್ತಸ್ರಾವ, ಚರ್ಮದ ದದ್ದು ಮತ್ತು ನೋವು ಚಾಪರೆಯ ಕೆಲವು ಲಕ್ಷಣಗಳು. ಚಪರೆ ವೈರಸ್​ ಮನುಷ್ಯನಿಂದ ಮನುಷ್ಯನಿಗೆ ಹರಡುವುದರಿಂದ ಈ ವೈರಸ್​ ಸಾಂಕ್ರಾಮಿಕವಾಗುವ ಎಲ್ಲಾ ಲಕ್ಷಗಣಗಳಿವೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಈ ಬಗ್ಗೆ ಎಚ್ಚರಿಕೆ ನೀಡಿದೆ.

Comments are closed.