ಆರೋಗ್ಯ

ಹುಡುಗಿಯ ಕನ್ಯ#ತ್ವದ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ….

Pinterest LinkedIn Tumblr

ಕನ್ಯ#ತ್ವದ ವಿಷಯ ಬಂದಾಗ ಹೆಚ್ಚು ಚರ್ಚೆಗೀಡಾಗುವುದು ಹುಡುಗಿ . ಮದುವೆಗೂ ಮೊದಲು ಹುಡುಗಿ ಕನ್ಯತ್ವ ಹೊಂದಿದ್ದಾಳೆಯೇ ಇಲ್ಲವೋ ಎಂಬುದನ್ನು ಇಂದಿಗೂ ಜನ ಚರ್ಚಿಸುವುದನ್ನು ನೋಡುತ್ತಿದ್ದೇವೆ. ಲೈಂ#ಗಿಕ ಕ್ರಿಯೆ ನಡೆಸುವಾಗ ರಕ್ತಸ್ರಾವ ಆದರೆ ಆಕೆ ಕನ್ಯೆ, ಇಲ್ಲದಿದ್ದರೆ ಆಕೆ ಕನ್ಯ#ತ್ವ ಉಳಿಸಿಕೊಂಡಿಲ್ಲ ಎಂಬುದು ಹಲವರ ವಾದ…ಆದರೆ ಇದು ನಿಜವೇ ಎಂಬುದಕ್ಕೆ ಇಲ್ಲಿದೆ ಉತ್ತರ…..

ಸೆ#ಕ್ಸ್ ವೇಳೆ ಹುಡುಗಿಗೆ ರಕ್ತಸ್ರಾವ ಆದರೆ ಆಕೆ ಕನ್ಯೆ. ಇಲ್ಲದಿದ್ದರೆ ಕನ್ಯ#ತ್ವ ಉಳಿಸಿಕೊಂಡಿಲ್ಲ ಎಂಬುದನ್ನು ವಾದಿಸುತ್ತಾರೆ ಹಲವಾರು. ಆದರೆ ಇದು ಸಂಪೂರ್ಣವಾಗಿ ಅವೈಜ್ಞಾನಿಕ ಎನ್ನುತ್ತಾರೆ ವೈದ್ಯರು.

ಹಾಗಾದರೆ, ಮೊದಲ ಬಾರಿಗೆ ಸಂ#ಭೋಗ ಮಾಡುವ ರಕ್ತಸ್ರಾವ ಬರುವುದೇಕೆ? ಈವರೆಗೂ ಸಂ#ಭೋಗ ಮಾಡದೇ ಇದ್ದರೂ ರಕ್ತಸ್ರಾವ ಆಗದೆ ಇರಲು ಕಾರಣಗಳೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಲೈಂ#ಗಿಕ ಕ್ರಿಯೆ ವೇಳೆ ರಕ್ತಸ್ರಾವ ಆದರೆ ಮಾತ್ರ ಆಕೆ ಕನ್ಯ#ತ್ವ ಉಳಿಸಿಕೊಂಡಿದ್ದಾಳೆ ಎನ್ನುವ ನಂಬಿಕೆ ಅನೇಕರದ್ದು. ಹೀಗಾಗಿ, ಲೈಂ#ಗಿಕ ಕ್ರಿಯೆ ಮಾಡಿದ ವೇಳೆ ರಕ್ತ ಬರುವಂತೆ ನೋಡಿಕೊಳ್ಳುವ ಅನೇಕ ಟ್ಯಾಬ್ಲೆಟ್​ಗಳು ಆನ್​ಲೈನ್​ನಲ್ಲಿ ಮಾರಾಟ ಮಾಡಲಾಗುತ್ತಿದೆಯಂತೆ. ಈ ಬಗ್ಗೆ ಸ್ತ್ರೀರೋಗ ತಜ್ಞರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಮಹಿಳೆಯರಲ್ಲಿ ಹೈಮೆನ್ ಹೆಸರಿನ ತೆಳುವಾದ ಪೊರೆ ಇರುತ್ತದೆ. ವಿವಿಧ ರೀತಿಯ ರಂಧ್ರಗಳನ್ನು ಹೊಂದಿರುವ ತೆಳುವಾದ ಪೊರೆಯು ಮುಟ್ಟಿನ ರಕ್ತವನ್ನು ಹೊರಕ್ಕೆ ಹರಿಯುವಂತೆ ಮಾಡುತ್ತದೆ. ಹೈಮೆನ್ ಗಾತ್ರ ಮತ್ತು ಆಕಾರವನ್ನು ಅವಲಂಬಿಸಿ, ಮಹಿಳೆಯರು ಮೊದಲ ಬಾರಿಗೆ ಲೈಂ#ಗಿಕ ಕ್ರಿಯೆ ನಡೆಸಿದಾಗ ರಕ್ತಸ್ರಾವ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಙರು.

ಕೆಲವು ಹೆಣ್ಣುಮಕ್ಕಳು ಸೈಕಲ್​ ತುಳಿಯುತ್ತಾರೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ರೀತಿಯ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡ ವೇಳೆ ಈ ಪೊರೆ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾದಗ ಲೈಂ#ಗಿಕ ಕ್ರಿಯೆ ವೇಳೆ ರಕ್ತ ಬರುವುದಿಲ್ಲ. ಹೀಗಾಗಿ, ರಕ್ತ ಬಂದರೆ ಮಾತ್ರ ಆಕೆ ಕನ್ಯೆ, ಇಲ್ಲದಿದ್ದರೆ ಆಕೆ ಕನ್ಯ#ತ್ವ ಕಳೆದುಕೊಂಡಿದ್ದಾಳೆ ಎನ್ನುವ ನಂಬಿಕೆ ತಪ್ಪು ಅನ್ನುತ್ತಾರೆ ತಜ್ಞರು.

Comments are closed.