ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೋನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಬಿಹಾರ ಚುನಾವಣೆಯ ಹಿನ್ನೆಲೆ ಅವರು ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಸದ್ಯ ಸಚಿವೆಗೆ ಸೋಂಕು ತಗುಲಿದೆ.
‘ಈ ವಿಚಾರ ತಿಳಿಸುವಾಗ ಪದಗಳಿಗಾಗಿ ಹುಡುಕಾಡಿದ್ದು ಬಹಳ ಕಮ್ಮಿ. ಇಲ್ಲಿ ಇದನ್ನು ಸರಳವಾಗಿ ಹೇಳುತ್ತಿದ್ದೇನೆ. ನನಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ನನ್ನ ಜೊತೆಗಿದ್ದವರು ಸ್ವಯಂ ಆಗಿ ಕ್ವಾರೆಂಟೈನ್ ಇರಿ. ಅಲ್ಲದೆ ಶೀಘ್ರ ಕೊರೋನಾ ತಪಾಸಣೆ ಮಾಡಿಸಿಕೊಳ್ಳಿ’ ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.