ಆರೋಗ್ಯ

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ದೊಡ್ಡ ಕಾಯಿಲೆಯ ಮುನ್ಸೂಚನೆ

Pinterest LinkedIn Tumblr


ವಯಸ್ಸಾಗುತ್ತಿದ್ದಂತೆ ಕೂದಲು ಬೆಳ್ಳಗಾಗೋದು ಸಾಮಾನ್ಯ. ಆದರೆ ಕೆಲ ಯುವಕ/ಯುವತಿಯ ಕೂದಲು ಬೆಳ್ಳಗಾಗಿರುವುದು ನೀವು ನೋಡಿರಬಹುದು ಅಥವಾ ನಿಮ್ಮ ಕೂದಲು ಹೀಗೆ ಬೇಗನೆ ಬಣ್ಣ ಬದಲಿಸಿರಬಹುದು. ಆದರೆ ಇದನ್ನು ಸಾಮಾನ್ಯ ಪ್ರಕ್ರಿಯೆ ಎಂದು ನಿರ್ಲಕ್ಷ್ಯವಹಿಸದಿರಿ.

ಏಕೆಂದರೆ ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಇನ್ನೊಂದು ದೊಡ್ಡ ಕಾಯಿಲೆಯ ಬಗೆಗಿನ ಮುನ್ಸೂಚನೆ. ಅಚ್ಚರಿಯಾದರೂ ಇದು ಸತ್ಯ. ನಿಮ್ಮ ಕೂದಲು ಬೇಗನೆ ಬೆಳ್ಳಗಾಗುತ್ತಿದ್ದರೆ ನಿಮಗೆ ಹೃದಯ ಸಂಬಂಧಿ ಕಾಯಿಲೆ ಕಾಡಲಿದೆ ಎಂದರ್ಥ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಸಂಶೋಧನಾ ತಂಡ ಈ ವಿಷಯವನ್ನು ಬಹಿರಂಗಪಡಿಸಿದ್ದು, ವಯಸ್ಸಿಗಿಂತ ಬೇಗನೆ ಕೂದಲು ಬೆಳ್ಳಗಾಗುತ್ತಿದ್ದರೆ ಆತನಿಗೆ ಹೃದಯ ಸಂಬಂಧಿ ಸಮಸ್ಯೆಗಳು ತಲೆದೂರಲಿದೆ ಎಂದು ತಿಳಿಸಿದ್ದಾರೆ.

ಸಂಶೋಧಕರು 42 ರಿಂದ 64 ವರ್ಷ ವಯಸ್ಸಿನ 545 ಪುರುಷರನ್ನು ಈ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಕಪ್ಪು ಕೂದಲು, ಸಂಪೂರ್ಣ ಬಿಳಿ ಮತ್ತು ಬೂದು ಬಣ್ಣದ ಕೂದಲಿನವರನ್ನು ಮೂರು ಗುಂಪುಗಳಾಗಿ ವಿಂಗಡಿಸಿದ್ದರು. ಅಲ್ಲದೆ ಈ ಸಂಶೋಧನೆಯಲ್ಲಿ ಬೂದು ಕೂದಲಿನ 80 ಪ್ರತಿಶತ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಯ ಲಕ್ಷಣಗಳು ಕಂಡು ಬಂದಿವೆ.

ಅಕಾಲಿಕ ಬೂದುಬಣ್ಣದ ಸಾಮಾನ್ಯ ಕಾರಣಗಳಲ್ಲಿ ಒತ್ತಡ, ಥೈರಾಯ್ಡ್ ಸಮಸ್ಯೆ, ಅಸ್ವಸ್ಥತೆ, ವಿಟಮಿನ್ ಬಿ 12 ಕೊರತೆ, ಧೂಮಪಾನ ಇತ್ಯಾದಿಗಳ ಕಾರಣದಿಂದ ಸಾಮಾನ್ಯವಾಗಿ ಕಂಡು ಬರುತ್ತವೆ. ಇಂತಹ ಸಮಸ್ಯೆಗಳು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ.

ನಿಮ್ಮ ಹೃದಯದಲ್ಲಿ ಸಮಸ್ಯೆ ಇದೆ ಎಂದು ಹೇಳುವುದು ಸುಲಭವಲ್ಲ. ಏಕೆಂದರೆ ಎಲ್ಲಾ ಹೃದಯ ಕಾಯಿಲೆಗಳು ಸ್ಪಷ್ಟ ಎಚ್ಚರಿಕೆ ಚಿಹ್ನೆಗಳೊಂದಿಗೆ ಬರುವುದಿಲ್ಲ. ಹಾಗೆಯೇ, ಹೃದ್ರೋಗ ಹೊಂದಿರುವ ಎಲ್ಲ ಜನರು ಎದೆ ನೋವನ್ನು ಅನುಭವಿಸುವುದಿಲ್ಲ. ಆದ್ದರಿಂದ, ರೋಗಲಕ್ಷಣಗಳು ಮತ್ತು ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.