ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಹಳೇ ಪ್ರಿಯಕರ ಶಾಹಿದ್ ಕಪೂರ್ ಜೊತೆಗಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಮಾಡಿಕೊಂಡರು. ಅವರು ಜೊತೆಯಾಗಿ ಅಭಿನಯಿಸಿದ್ದ ‘ಜಬ್ ವಿ ಮೆಟ್’ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಆ ಚಿತ್ರ ಬಿಡುಗಡೆಯಾಗಿ 13 ವರ್ಷ ಕಳೆದಿದೆ. ಅದೇ ನೆಪದಲ್ಲಿ ಆ ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ಕಿಸಿದ ಒಂದು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಹಳೇ ದಿನಗಳನ್ನು ಕರೀನಾ ನೆನಪು ಮಾಡಿಕೊಂಡಿದ್ದಾರೆ.
ನಿರ್ದೇಶಕ ಇಮ್ತಿಯಾಜ್ ಅಲಿ, ಕರೀನಾ ಕಪೂರ್, ಶಾಹಿದ್ ಕಪೂರ್ ಜೊತೆಗಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಜೀವನದಲ್ಲಿ ಮನುಷ್ಯ ನಿಜವಾಗಿ ಏನನ್ನು ಬಯಸುತ್ತಾನೋ, ಅದನ್ನೇ ಪಡೆಯುತ್ತಾನೆ’ ಎಂಬ ಸಿನಿಮಾದ ಡೈಲಾಗ್ ಅನ್ನು ಈ ಫೋಟೋಗೆ ಕ್ಯಾಪ್ಷನ್ ರೀತಿ ನೀಡಿದ್ದಾರೆ ಕರೀನಾ. ಅದು ಕೊಂಚ ಮಾರ್ಮಿಕವಾಗಿಯೂ ಇದೆ. ಶಾಹಿದ್ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ಸೈಫ್ ಅಲಿ ಖಾನ್ ಅವರನ್ನು ಕರೀನಾ ಮದುವೆ ಆದರು. ಶಾಹಿದ್ ಕೂಡ ಮೀರಾ ರಜಪೂತ್ ಜೊತೆ ದಾಂಪತ್ಯ ಜೀವನ ಆರಂಭಿಸಿದರು.
ಕರೀನಾ ಕಪೂರ್ ಈಗ ಎರಡನೇ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ನಟನೆ ನಿಲ್ಲಿಸಿಲ್ಲ. ಇತ್ತೀಚೆಗೆ ಒಂದು ಫೋಟೋಶೂಟ್ನಲ್ಲಿ ಅವರು ಪಾಲ್ಗೊಂಡಿದ್ದರು. ಆಮೀರ್ ಖಾನ್ ನಾಯಕತ್ವದ ‘ಲಾಲ್ ಸಿಂಗ್ ಚೆಡ್ಡಾ’ ಸಿನಿಮಾದಲ್ಲೂ ಕರೀನಾ ಹೀರೋಯಿನ್ ಆಗಿ ಅಭಿನಯಿಸಿದ್ದಾರೆ. ಕೊರೊನಾ ವೈರಸ್ ಭೀತಿ ನಡುವೆಯೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.