ಕರಾವಳಿ

ಪ್ರತ್ಯೇಕ ಪ್ರಕರಣ : ಮಂಗಳೂರಿನ ಕಣ್ಣೂರು ಹಾಗೂ ಶಕ್ತಿನಗರದ ಇಬ್ಬರು ಯುವತಿಯರು ನಾಪತ್ತೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 27 : ಮಂಗಳೂರಿನ ಕಣ್ಣೂರು ಹಾಗೂ ಶಕ್ತಿನಗರದ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀಬಾಯಿ (19) ಎಂಬ ಯುವತಿ ಅಕ್ಟೋಬರ್ 18ರಂದು ಕಣ್ಣೂರು ಗ್ರಾಮದ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:

ಹೆಸರು – ಲಕ್ಷ್ಮೀಬಾಯಿ, ಪ್ರಾಯ – 19 ವರ್ಷ, ಎತ್ತರ- 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಧರಿಸಿದ ಬಟ್ಟೆ – ಬಿಳಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶಾಲು ಧರಿಸಿರುತ್ತಾಳೆ. ಮಾತನಾಡುವ ಭಾಷೆ – ಲಂಬಾಣಿ, ಕನ್ನಡ, ತುಳು.

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಕ್ತಿನಗರದ ಮಹಿಳೆ ನಾಪತ್ತೆ :

ರೇಷ್ಮಾ ಡಿ ಸೋಜಾ (38) ಎಂಬ ಮಹಿಳೆ ಅಕ್ಟೋಬರ್ 22 ರಂದು ತನ್ನ ಮನೆ ಶಕ್ತಿನಗರದಿಂದ ಕೆಲಸಕ್ಕೆಂದು ಹೇಳಿ ಹೋದವಳು ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ ಇಂತಿವೆ:

ಹೆಸರು – ರೇಷ್ಮಾ ಡಿ ಸೋಜಾ, ಪ್ರಾಯ – 38 ವರ್ಷ, ಎತ್ತರ- 4.5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಧರಿಸಿದ ಬಟ್ಟೆ – ಜೀನ್ಸ್ ಪ್ಯಾಂಟ್ ಟೀ ಶರ್ಟ್, ಮಾತನಾಡುವ ಭಾಷೆ – ಕನ್ನಡ, ಹಿಂದಿ, ಕೊಂಕಣಿ, ಇಂಗ್ಲೀಷ್.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.