ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಕಾರ್ಯಕ್ರಮವು ಸೆ.20ರಂದು ರವಿವಾರದಂದು ಮಂಗಳೂರಿನ ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ನಡೆಯಲಿದೆ ಎಂದು ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ ಹೇಳಿದರು.


ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರವಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ. ದೇವಾಡಿಗ, ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾರ್, ಮುಖ್ಯ ಅತಿಥಿಗಳಾಗಿ ಡಾ.ದೇವರಾಜ್ ಕೆ., ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಾ. ಬಿ.ಎಸ್. ಶೇರಿಗಾರ್, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷ ಅಣ್ಣಯ್ಯ ಬಿ. ಶೇರಿಗಾರ್, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಸುಬ್ಬಯ್ಯ ದೇವಾಡಿಗ, ಮಂಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ನಾರಾಯಣ್ ಎಂ. ದೇವಾಡಿಗ, ದಿನೇಶ್ ಕುಮಾರ್ ದೇವಾಡಿಗ, ಬಾಬು ದೇವಾಡಿಗ ಆಂಬ್ಲಮೊಗರು ಮಾಜಿ ಪ್ರಾಂಶುಪಾಲರು, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಭಾಸ್ಕರ್ ಶೇರಿಗಾರ್, ಸ್ಥಾಪಕ ಅಧ್ಯಕ್ಷರು, ಆಲ್ ಅಮೆರಿಕನ್ ತುಳು ಅಸೋಸಿಯೇಷನ್ (ಎಎಟಿಎ) ಉಸಾ, ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಅಧ್ಯಕ್ಷರು, ಕುಂದಾಪುರ ದೇವಾಡಿಗ ಮಿತ್ರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಆಲೂರು ರಘುರಾಮ ದೇವಾಡಿಗ, ಎಲ್.ಜಿ. ಫೌಂಡೇಶನ್ ಅಧ್ಯಕ್ಷ ನಾಗರಾಜ್ ದೇವಾಡಿಗ ಪಡುಕೋಣೆ, ಸುರೇಶ್ ಚಂದಪ್ಪ ದೇವಾಡಿಗ ದುಬೈ, ಶೇಖರ್ ದೇವಾಡಿಗ ಸಾಯಿ ನಿಧಿ ಗ್ರೂಪ್ ಆಫ್ ಹೋಟೆಲ್ಸ್ ಮುಂಬೈ, ಅಶೋಕ್ ಮೊಯ್ಲಿ ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
*ಸಮಾರೋಪ*: ಅಂದು ಸಂಜೆ 5:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಿಎಂ ಡಾ.ಎಂ. ವೀರಪ್ಪ ಮೊಯ್ಲಿ, ಗೌರವ ಅತಿಥಿಗಳಾಗಿ ಸಚಿವ ಯು.ಟಿ. ಖಾದರ್, ಶಾಸಕ ಡಿ. ವೇದವ್ಯಾಸ ಕಾಮತ್, ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಹರೀಶ್ ಶೇರಿಗಾರ್, ವಿಷನ್ ಮಂಗಳ ಯೋಜನೆಯ ಡಾ.ದೇವರಾಜ್ ಕೆ., ಅಶೋಕ್ ಮೊಯ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು, ಮುಖ್ಯ ಅತಿಥಿಗಳಾಗಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಡಾ.ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು ಶ್ರೀನಿವಾಸ್ ಕಾಲೇಜು, ವಿಶಾಲ್ ಹೆಗ್ಡೆ ಕುಲಾಧಿಪತಿಗಳು ನಿಟ್ಟೆ, ಡಾ.ಸಿ.ಪಿ. ಹಬೀಬ್ ರಹ್ಮಾನ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ಎ.ಜೆ ಶೆಟ್ಟಿ, ಅಧ್ಯಕ್ಷರು ಎ.ಜೆ. ಗ್ರೂಪ್ ಆಫ್ ಕಂಪೆನೀಸ್, ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃಸಂಘ, ರೊನಾಲ್ಡ್ ಮಾರ್ಟಿಸ್ ವ್ಯವಸ್ಥಾಪಕ ನಿರ್ದೇಶಕರು, ಬ್ಲೂ ರಾಯಲ್ ಗ್ರೂಪ್ ದುಬೈ, ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ಸಂಘ ಅಬುಧಾಬಿ, ಗಣೇಶ್ ಶೆಟ್ಟಿ, ಜಗನ್ನಾಥ್ ಶೇರಿಗಾರ್, ಸಂಜೀತ್ ಶೆಟ್ಟಿ, ಕರುಣಾಕರ ಎಂ.ಹೆಚ್ ಅಧ್ಯಕ್ಷರು, ಶತಮಾನೋತ್ಸವ ಆಚರಣಾ ಸಮಿತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ: ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಸಾಂಪ್ರದಾಯಿಕ ವಾದ್ಯಗಳ ಸಂಗಮದಲ್ಲಿ ನಾಗೇಂದ್ರ ಕುಡುಪು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಉದಯ್ ಶೇರಿಗಾರ್, ಅಲೆವೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಅವರ ತಂಡದಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ ಚೆಂಡೆ, ನಾಗಸ್ವರ, ಉಡುಕೆ, ಡೋಲು ಇದರ ವಿಶೇಷ ಪ್ರದರ್ಶನ ನಡೆಯಲಿದೆ.
ಸಂಜೆ 7.30ಕ್ಕೆ ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್ ಮತ್ತು ತಂಡದಿಂದ ಮ್ಯೂಸಿಕಲ್ ನೈಟ್ ನಡೆಯಲಿದೆ. ಹಾಗೆಯೇ ಸೋನಿ ಟಿವಿ ಖ್ಯಾತಿಯ ವಿಐಪಿ ಅವರಿಂದ ಸ್ಟ್ಯಾಂಡ್‌ಅಪ್ ಕಾಮೆಡಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ಗವರವಾಧ್ಯಕ್ಷರಾದ ಹರೀಶ್ ಶೇರಿಗಾರ್, ಡಾ.ದೇವರಾಜ್ ಕೆ, ವೀಣಾ ಗಣೇಶ್, ಗೀತಾ ಕಲ್ಯಾಣಪುರ, ಲೋಹಿತಾಕ್ಷ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
Comments are closed.