ಆರೋಗ್ಯ

ಮಾಸ್ಕ್ ಧರಿಸದಿದ್ದರೇ ಮುಲಾಜಿಲ್ಲದೇ ಕ್ರಮಕೈಗೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Pinterest LinkedIn Tumblr

ಬೆಂಗಳೂರು: ಮಾಸ್ಕ್ ಧರಿಸಿದಿರುವವರು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಬ್ದಾರಿ ತೋರುವಂತವರ ವಿರುದ್ಧ ರಾಜ್ಯ ಸರಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವತ್ತಕ್ಕು ಅಧಿಕ ಪ್ರತಿಭಟನೆಗಳು ನಡೆದಿದ್ದು ಅಲ್ಲಿ ಮಾಸ್ಕ್ ಧಾರಣೆ, ಅಂತರ ಪಾಲನೆ ಮೊದಲಾದ ಕೋವಿಡ್-19 ನಿಯಮಾವಳಿ ಪಾಲನೆ ಆಗಿಲ್ಲ. ಇಂತಹ ಪ್ರತಿಭಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಕೋರಿ ಸಾಯಿದತ್ತ ಎನ್ನುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತ್ರತ್ವದ ವಿಭಾಗೀಯ ಪೀಠ ಈ ವಿಚಾರಣೆ ನಡೆಸಿದೆ. ಸೆ.೨೫ ರಂದು ನಡೆದ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರತಿಭಟನೆಯ ಚಿತ್ರಗಳನ್ನು ಗಮನಿಸಿದಾಗ ಮಾಸ್ಕ್ ಧರಿಸದಿರುವುದು ಮತ್ತು ಅಂತರ ಪಾಲನೆ ಮಾಡದಿರುವುದು ಕಂಡುಬರುತ್ತಿದೆ. ಇದು ಕೊರೋನಾ ಹಬ್ಬಲು ಕಾರಣವಾಗಿದೆ. ಇಂತಹ ನಿಯಮ ಉಲ್ಲಂಘನೆ ತಡೆಯಲು ರಾಜ್ಯ ಸರಕಾರ ಹಾಗೂ ಸಂಬಂದಪಟ್ಟ ಪ್ರಾಧಿಕಾರ ಕಾರ್ಯಾಚರಣೆ ನಡೆಸಬೇಕು. ನಿಯಮ ಪಾಲಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯ ಪಟ್ಟಿದೆ.

Comments are closed.