ಆರೋಗ್ಯ

ಸದಾ ಕಿವಿಗೆ ಇಯರ್ ಫೋನ್, ಹೆಡ್ ಫೋನ್ ಬಳಸುತ್ತಿದ್ದಿರಾ..ಹಾಗದರೆ ಇದನ್ನೊಮ್ಮೆ ಓದಿ ಕೊಳ್ಳಿ

Pinterest LinkedIn Tumblr


ಬಸ್ಸಿನಲ್ಲಿ ಟ್ರೈನ್ ನಲ್ಲಿ ಹೊರಗಡೆ ಎಲ್ಲಾ ಕಡೆಯಲ್ಲಿ ನಾವು ಇಯರ್ ಫೋನ್, ಹೆಡ್ ಫೋನ್ ಬಳಸುವುದನ್ನು ನೋಡಿರುತ್ತೇವೆ. ಈಗಿನ ಕಾಲಕ್ಕೆ ತಕ್ಕಂತೆ ನಮ್ಮ ಯುವ ಜನತೆ ಮೊಬೈಲ್ ಫೋನ್ ಜೊತೆ ಇಯರ್ ಫೋನ್ ಬಳಸುವುದು ಕೂಡ ಹೆಚ್ಚು ಆಗಿದೆ. ವಯರ್ ಲೆಸ್ ಬ್ಲ್ಯೂ ಟೂತ್, ಹೆಡ್ ಫೋನ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈಗ ಮುಖ್ಯವಾಗಿ ವಿಷಯಕ್ಕೆ ಬರುವುದಾದರೆ, ಇಯರ್ ಫೋನ್ ಅಥವ ಹೆಡ್ ಫೋನ್ ಗಳನ್ನೂ ಅತಿಯಾಗಿ ಬಳಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ. ಆದರೆ ಅದಕ್ಕೂ ಮೊದಲು ನಾವು ಶಬ್ದವನ್ನು ಹೇಗೆ ಕೇಳುತ್ತೇವೆ ಅನ್ನೋದರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಕಿವಿಯಲ್ಲಿ ಔಟರ್ ಇಯರ್, ಮಿಡಲ್ ಇಯರ್ ಹಾಗೂ ಇನ್ನರ್ ಇಯರ್ ಎಂದು ಮೂರು ಭಾಗಗಳು ಇರುತ್ತವೆ. ನಾವು ಕೇಳುವ ಶಬ್ಧ ಗಾಳಿಯಲ್ಲಿ ವೈಬ್ರೆಟ್ ತರ ಪಾಸ್ ಆಗಿ ಔಟರ್ ಇಯರ್ ಮೂಲಕ ಒಳ ಬಂದು ಮಿಡಲ್ ಇಯರ್ ಗೆ ಬಂದು ತಮಟೇಗೆ ಬಡಿದು ವೈಬ್ರೇಶನ್ ಆಗುತ್ತಾ ಇನ್ನರ್ ಇಯರ್ ನ ಕೋ ಕ್ಲೆಯರ್ ಗೆ ವರ್ಗಾಯಿಸುತ್ತದೆ. ಅಲ್ಲಿ ಸೂಕ್ಷ್ಮವಾಗಿ ಗುರುತಿಸಿ ಮೆದುಳಿಗೆ ಎಲೆಕ್ಟ್ರಿಕ್ ರೀತಿಯಲ್ಲಿ ಸಂದೇಶ ರವಾನೆ ಆಗುತ್ತದೆ. ಆಗ ನಮಗೆ ಶಬ್ಧ ಗೊತ್ತಾಗುತ್ತದೆ. ಆಗ ನಾವು ಇಯರ್ ಫೋನ್ ನ ಶಬ್ದವನ್ನು ಅತೀ ಹತ್ತಿರದಿಂದ ಕೇಳಿದ ಹಾಗೆ ಆಗುತ್ತದೆ. ಅಮೆರಿಕಾದ ಸೇಫ್ಟಿ ಆಂಡ್ ಹೆಲ್ತ್ ಇನ್ಸ್ಟಿಟ್ಯುತ್ ಮತ್ತು ನಮ್ಮ ದೇಶವು ಸಹ ಆರೋಗ್ಯಕರ ಶಬ್ಧಕ್ಕಿಂತ ಹೆಚ್ಚಿನ ಶಬ್ಧ ಕೇಳಿದರೆ ಕಿವಿಗೆ ಹಾನಿಕಾರಕ ಎಂದು ತಿಳಿಸಿದ್ದಾರೆ.

ಆದರೆ ಈಗಿನ ಕಾಲದ ಇಯರ್ ಫೋನ್ ಮತ್ತು ಹೆಡ್ ಫೋನ್ ಗಳಲ್ಲಿ 99 ಡಿಸೇಬಲ್ ನಿಂದ 103ಡಿಸೇಬಲ್ ವರೆಗೂ ಶಬ್ದ ಕೇಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಅತೀ ಹೆಚ್ಚು ಹೆಡ್ ಫೋನ್ ಮತ್ತು ಇಯರ್ ಫೋನ್ ನಲ್ಲಿ ಅತಿ ಹೆಚ್ಚು ಶಬ್ಧ ಇಟ್ಟು ಕೇಳುವುದರಿಂದ ನಮ್ಮ ಇನ್ನರ್ ಇಯರ್ ಹಾನಿಗೆ ಒಳಗಾಗುವ ಸಂಭವ ಹೆಚ್ಚು ಇರುತ್ತದೆ. ನಮ್ಮ ದೇಹದ ಯಾವುದೇ ಅಂಗವಾದರು ಹಾಳಾದರೆ ಬೇಗ ಸರಿ ಹೋಗುವ ಸಾರ್ಥ್ಯವನ್ನು ಹೊಂದಿರುತ್ತವೆ. ಆದರೆ ಇನ್ನರ್ ಇಯರ್ ಗೆ ಈ ಸಮಾರ್ಥ್ಯ ಇರುವುದಿಲ್ಲ. ಹಾಗಾಗಿ ಇದರಿಂದ ಕಿವುಡು ತನ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ.

ಇಯರ್ ಫೋನ್ ಹಾಗೂ ಹೆಡ್ ಫೋನ್ ಬಳಸುವುದು ತಪ್ಪು ಹಾಗೂ ಬಳಸಬಾರದು ಅಂತ ಹೇಳುತ್ತಿಲ್ಲ ಆದರೆ ಬಳಸುವ ಸಮಯ ಕಡಿಮೆ ಇರಲಿ ಅಷ್ಟೇ. ಅತಿಯಾದ ಸೌಂಡ್ ಕಿವಿಗೆ ತುಂಬಾ ಹಾನಿಕಾರಕ. ಹಾಗಾಗಿ ನೀವು ಇಯರ್ ಫೋನ್ ಹಾಗೂ ಹೆಡ್ ಫೋನ್ ಬಳಸುವಾಗ 70/80 ಅಷ್ಟೇ ಅಳತೆಯಲ್ಲಿ ಇಟ್ಟುಕೊಂಡು ಕೇಳಿದರೆ ಒಳ್ಳೆಯದು

Comments are closed.