ಆರೋಗ್ಯ

ಮನೆಯಲ್ಲಿ,ಬಸ್‌ಗಳಲ್ಲಿ,ಇವುಗಳ ಕಾಟದಿಂದ ಮುಕ್ತಿ ಬೇಕಾ ಈ ರೀತಿ ಮಾಡಿ..

Pinterest LinkedIn Tumblr

ಮನೆಯಲ್ಲಿ ಅಥವಾ ಬೆಡ್ ರೂಮ್‌ನಲ್ಲಿ ನೆಮ್ಮದಿಯ ಜೀವನ ಮಾಡಬೇಕು ಅಂದುಕೊಂಡಿರುತ್ತಾರೆ ಆದ್ರೆ, ಕೆಲವೊಮ್ಮೆ ತಿಗಣೆಗಳ ಕಾಟ ಜಾಸ್ತಿ ಆದ್ರೆ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತದೆ ರಾತ್ರಿ ಮಲಗಲು ಆಗೋದಿಲ್ಲ ಅಷ್ಟೊಂದು ಕಾಟ ಕೊಡುತ್ತವೆ ಈ ತಿಗಣೆಗಳು. ಇತಂಹ ತಿಗಣೆಗಳಿಂದ ಹೇಗೆ ಮುಕ್ತಿ ಪಡೆಯಬೇಕು ಅನ್ನೋದನ್ನ ಹೇಳುವುದಾದರೆ ಮನೆಯಲ್ಲಿಯೇ ಇರುವಂತ ಕೆಲವು ವಸ್ತು ಪದಾರ್ಥ ಗಳನ್ನು ಬಳಸಿ ತಿಗಣೆ ಕಾಟಕ್ಕೆ ಮುಕ್ತಿ ಪಡೆಯಬಹುದಾಗಿದೆ.

ತಿಗಣೆಗಳು ರಾತ್ರಿ ಸಮಯದಲ್ಲಿ ಮನುಷ್ಯನ ರಕ್ತ ಹೀರುತ್ತವೆ ಆಗಾಗಿ ರಾತ್ರಿ ಮಲಗಲು ನೆಮ್ಮದಿಯ ನಿದ್ರೆ ಇಲ್ಲದಂತೆ ಮಾಡುತ್ತವೆ ಆದ್ದರಿಂದ ಇದರಿಂದ ಮುಕ್ತಿ ಪಡೆಯಲು ಈ ಮನೆಮದ್ದು ಬಳಸಿ ಎರಡು ಚಮಚ ಡೇಟಾಲ್ಗೆ ಸ್ವಲ್ಪ ನೀರನ್ನು ಹಾಕಿಕೊಂಡು ಅದಕ್ಕೆ ವಾಷಿಂಗ್ ಪೌಡರ್ ಎರಡು ಚಮಚ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ನಲ್ಲಿ ಹಾಕಿ ತಿಗಣೆ ಇದ್ದಕಡೆ ಸ್ಪ್ರೇ ಮಾಡಿ

ಮತ್ತೊಂದು ವಿಧಾನ ಏನಪ್ಪಾ ಅಂದ್ರೆ ಒಂದು ಗ್ಲಾಸ್ ನೀರಿಗೆ ೨೦ ರಿಂದ ೨೫ ಹನಿ ಟ್ರೀ ಟ್ರೀ ಆಯಿಲ್ ಮಿಶ್ರಣ ಮಾಡಿ ಸ್ಪ್ರೇ ಬಾಟಲ್ ನಲ್ಲಿ ಹಾಕಿಕೊಂಡು ತಿಗಣೆಗಳು ಇರುವ ಜಾಗಕ್ಕೆ ಸ್ಪ್ರೇ ಮಾಡಿ ತಿಗಣೆಗಳ ನಿವಾರಿಯಾಗುತ್ತದೆ. ಇದರಿಂದ ಮನೆಯಲ್ಲಿ ತಿಗಣೆಗಳ ಕಾಟ ಇಲ್ಲದಂತಾಗುವುದು.

ಮನೆಯಲ್ಲಿ ಮತ್ತೊಂದು ಸಮಸ್ಯೆ ಇರುತ್ತದೆ ಅದುವೇ ಜಿರಲೆಗಳ ಕಾಟ ಹೌದು ಮನೆಯಲ್ಲಿ ಅಡುಗೆ ಮನೆಗಳಲ್ಲಿ ಜಿರಳೆಗಳು ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ, ಆದ್ರೆ ಇವುಗಳಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಮನೆಮದ್ದು ಅದು ಯಾವುದು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ ನಿಮಗೆ ಇದು ಉಪಯುಕ್ತ ಅನಿಸಿದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.

ಮನೆಯಲ್ಲಿ ಇರುವಂತ ಕಾಫಿ ಪೌಡರ್ ಅನ್ನು ಜಿರಳೆಗಳು ಓಡಾಡುವ ಜಾಗಕ್ಕೆ ಹಾಕಿ, ಇದನ್ನು ಜಿರಳೆಗಳು ತಿಂದು ಜೀರ್ಣವಾಗದಷ್ಟೇ ಸಾಯುತ್ತವೆ ಇನ್ನು ಬಿರಿಯಾನಿ ಎಲೆಯನ್ನು ಪುಡಿಮಾಡಿಕೊಂಡು ಅದನ್ನು ಜಿರಳೆಗಳು ಓಡಾಡುವ ಜಾಗಕ್ಕೆ ಅಥವಾ ಮೂಲೆಗೆ ಹಾಕಿ ಇದರ ವಾಸನೆಗೆ ಜಿರಳೆಗಳು ಮನೆಯಿಂದ ಹೊರ ಹೋಗುತ್ತವೆ. ಇದನ್ನು ಎರಡರಿಂದ ಮೂರುದಿನ ಮಾಡಿ ಮನೆಯಲ್ಲಿ ಜಿರಳೆ ತಿಗಣೆಗಳ ಕಾಟದಿಂದ ಮುಕ್ತಿ ಪಡೆಯಬಹುದು.

Comments are closed.