ಆರೋಗ್ಯ

‘ಡ್ರಗ್ಸ್ ಮುಕ್ತ ಉಡುಪಿ’ಗೆ ಪಣತೊಟ್ಟ ಪೊಲೀಸರು: 2 ವಾರದಲ್ಲಿ 73.39 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸ್ ಇಲಾಖೆ ಪಣತೊಟ್ಟಿದೆ. ಉಡುಪಿ ಎಸ್ಪಿ ವಿಷ್ಣುವರ್ಧ‌ನ್ ನೇತೃತ್ವದ ಪೊಲೀಸರ ತಂಡ ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಸೆರೆಹಿಡಿದ್ದಾರೆ.

ಈ ಪ್ರಕರಣದ ಕುರಿತು ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಅವರು ಜಿಲ್ಲೆಯಲ್ಲಿ ಪ್ರಮುಖ 3 ಪ್ರಕರಣಗಳಲ್ಲಿ  73 ಲಕ್ಷದ 39 ಸಾವಿರ 500 ರೂ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಈ ಕಾರ್ಯಾಚರಣೆಯು ಜಿಲ್ಲಾ ವಿಶೇಷ ತಾಂತ್ರಿಕ ತಂಡದ ಸಂಯೋಜನೆಯೊಂದಿಗೆ ಈ ಕೆಳಗಿನ 3 ಪ್ರಮುಖ ಪ್ರಕರಣಗಳನ್ನು ಬೇಧಿಸಿದ, ಆರೋಪಿಗಳನ್ನು ಪತ್ತೆ ಹಚ್ಚಿ, Synthetic Drugs ನ್ನು ವಶಪಡಿಸಿಕೊಂಡು ಇಲ್ಲಿಯವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

30 ಲಕ್ಷ 57 ಸಾವಿರ ಮೌಲ್ಯದ ನಿಷೇಧಿತ MDMA Ecstasy 540 ಗ್ರಾಂ ತೂಕದ 1019 ಮಾತ್ರೆಗಳು, ರೂ 30 ಲಕ್ಷ ಮೌಲ್ಯದ 1000 ಎಲ್.ಎಸ್.ಡಿ. ಸ್ಟ್ಯಾಂಪ್ಸ್, ರೂ 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಬ್ರೌನ್ ಶುಗರ್ ಮತ್ತು ರೂ 9, 82, 500 ಮೌಲ್ಯದ 131 ಗ್ರಾಂ ತೂಕವುಳ್ಳ Superior Quality hydro weed ಗಾಂಜಾವನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 73,39500 ಆಗಿರುತ್ತದೆ ಎಂದರು.

ಮಾದಕ ವಸ್ತುಗಳ ಸಾಗಾಟ ಹಾಗೂ ಸೇವೆನೆ ಕುರಿತು ಕಾರ್ಯಾಚರಣೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಅವರ ಉಸ್ತುವಾರಿಯಲ್ಲಿ 3 ತಂಡಗಳನ್ನು ರಚಿಸಲಾಗಿದ್ದು ತಾಂತ್ರಿಕ ತಂಡದಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್,  ಕಾರ್ಕಳದ ಭರತ್ ಎಸ್, ರೆಡ್ಡಿ,  ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರ ಶಿವಾನಂದ, ನಿತಿನ್ ಮತ್ತು ದಿನೇಶ್ ಸಹಕರಿಸಿದ್ದರು.

ಕಾರ್ಯಾಚರಣೆಗಾಗಿ ಮಣಿಪಾಲ ಸಿಪಿಐ ಮಂಜುನಾಥ ಎಂ., ಸಿಪಿಐ ರಾಜಶೇಖರ್ ವಂದಲಿ, ಮಣಿಪಾಲ ಠಾಣೆಯ ಶೈಲೇಶ್, ಪ್ರಸನ್ನ, ರೋಮನ್, ಅಬ್ದುಲ್ ರಜಾಕ್, ಆದರ್ಶ, ಸಲ್ಮಾನ್ ಖಾನ್ ಮತ್ತು ಕುಂದಾಪುರ ಠಾಣೆ ವಿಜಯ ಕುಮಾರ್, ರಾಜು, ಸತೀಶ್ ಇದ್ದರು.

ಅಲ್ಲದೆ ತನಿಖಾ ತಂಡದಲ್ಲಿ ಉಡುಪಿ ಡಿವೈಎಸ್ಪಿ ಟಿ.ಆರ್. ಜೈಶಂಕರ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಕಾಪು ಸಿಪಿಐ ಮಹೇಶ್ ಪ್ರಸಾದ್, ಉಡುಪಿ ಸಿಪಿಐ ಮಂಜುನಾಥ, ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ. ಆರ್., ಬ್ರಹ್ಮಾವರ ಪಿಎಸ್ಐ ರಾಘವೇಂದ್ರ ಭಾಗವಹಿಸಿದ್ದರು ಎಂದರು

ಈ ಎಲ್ಲಾ ದಾಳಿಗಳಲ್ಲಿ ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು, ಉಡುಪಿ ಸಹಾಯಕ ಡ್ರಗ್ ಕಂಟ್ರೋಲರ್ ನಾಗರಾಜ್, ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಹಾಗೂ ಅವರ ಸಿಬ್ಬಂದಿಯವರು ಕೂಡ ಸಹಕರಿಸಿದ್ದರು.

ಈ ವರ್ಷದಲ್ಲಿ ಗಾಂಜಾ ಸೇವನೆ ಮಾರಾಟ, ಸಾಗಾಟ, ವಿದ್ಯಾರ್ಥಿ ಹಾಗೂ ಸಾರ್ವಜನಿಕರ ವಿರುದ್ಧ ಒಟ್ಟು 200 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಳೆದ 5 ವರ್ಷಗಳಲ್ಲಿ ದಾಖಲಿಸಿದೆ ಅತೀ ಹೆಚ್ಚು ಪ್ರಕರಣ ಗಳಾಗಿರುತ್ತದೆ. ಅಲ್ಲದೇ ಗಾಂಜಾ ಹೊರತುಪಡಿಸಿ Synthetic drugs ಅನ್ನು ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದರು.ಉಡುಪಿ ಜಿಲ್ಲಾ ಪೊಲೀಸರ ಈ ಕಾರ್ಯವನ್ನು ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಹಾಗೂ ಪಶ್ಚಿಮ ವಲಯದ ಐಜಿಪಿಯವರು ಶ್ಲಾಘಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ ಚಂದ್ರ, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಕಾರ್ಕಳ ಡಿವೈಎಸ್ಪಿ ಭರತ್ ಎಸ್, ರೆಡ್ಡಿ, ಉಡುಪಿ ಸಿಪಿಐ ಮಂಜುನಾಥ, ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ. ಆರ್., ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ ಎಂ., ಮಣಿಪಾಲ ಪಿಎಸ್ಐ ರಾಜಶೇಖರ್ ವಂದಲಿ,  ಐ.ಎಸ್.ಡಿ ಉಡುಪಿ ಘಟಕದ ನಿರೀಕ್ಷಕ ಮಧು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.