ಆರೋಗ್ಯ

ಎಳೆ ಬಿಸಿಲಿನಲ್ಲಿ ವ್ಯಾಯಾಮಗಳನ್ನು ಮಾಡುವುದರಿಂದ ನರದೌರ್ಬಲ್ಯ ಸಮಸ್ಯೆ ನಿವಾರಣೆ.

Pinterest LinkedIn Tumblr

ನರದೌರ್ಬಲ್ಯ ಸಮಸ್ಯೆ ಇರುವವರು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಎಳೆ ಬಿಸಿಲಿನಲ್ಲಿ ವ್ಯಾಯಾಮಗಳನ್ನು ಮಾಡುವುದರಿಂದ ಸೂರ್ಯನ ಕಿರಣಗಳಲ್ಲಿ ಇರುವ ವಿಟಮಿನ್ ಡಿ ನ ಕಾರಣದಿಂದಾಗಿ ದೇಹದಲ್ಲಿ ರಕ್ತದ ಸಂಚಲನ ಸರಾಗವಾಗಿ ಆಗುವುದರಿಂದ ನರಗಳ ದೌರ್ಬಲ್ಯ ಗುಣವಾಗುತ್ತದೆ

ಇನ್ನೂ ಅಶ್ವ ಗಂಧದ ಪುಡಿಯನ್ನು ಅದರ ಜೊತೆಗೆ ಒಂದಷ್ಟು ಕಲ್ಲು ಸಕ್ಕರೆಯ ಪುಡಿಯನ್ನು ಮಿಶ್ರಣ ಮಾಡಿ ಇಟ್ಟುಕೊಂಡು ಪ್ರತಿನಿತ್ಯ ಎರಡು ಬಾರಿ ಉಗುರು ಬೆಚ್ಚಗಿನ ಹಾಲಿನೊಂದಿಗೆ ಒಂದು ಚಮಚ ಸೇರಿಸಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಕ್ರಮೇಣ ನರಗಳ ಬಲಹೀನತೆ ಕಡಿಮೆಯಾಗುತ್ತದೆ ಇನ್ನೂ ಸಕ್ಕರೆ ಕಾಯಿಲೆ ಇರುವವರು ಕಲ್ಲು ಸಕ್ಕರೆಯ ಬದಲಾಗಿ ಹಳೆಯ ಬೆಲ್ಲದ ಪುಡಿಯನ್ನು ಬಳಸುವುದು ಒಳಿತು ಮತ್ತು ನರಗಳ ಬಲಹೀನತೆಗೆ ಇದೊಂದು ಅತ್ಯುತ್ತಮ ಉಪಾಯವಾಗಿದೆ

ಅಲ್ಲದೇ ನರಗಳ ದೌರ್ಬಲ್ಯತೆ ಇರುವವರು ಪ್ರತಿನಿತ್ಯ ಕೆನೆಬರಿತ ಹಾಲನ್ನು ಸೇವಿಸುವುದು ಕೂಡಾ ಒಳಿತು ಯಾಕಂದ್ರೆ ಹಾಲಿನಲ್ಲಿ ಕ್ಯಾಲ್ಸಿ ಯಮ್ ಇರುವ ಕಾರಣ ದೇಹಕ್ಕೆ ಬೇಕಾದ ಕ್ಯಾಲ್ಸಿಯಮ್ ಅನ್ನು ಹಾಲು ಒದಗಿಸುವುದಲ್ಲದೆ ನರಗಳ ಬಲಹೀನತೆಯನ್ನು ಸ್ವಲ್ಪ ಮಟ್ಟಿ ಗಾದರೂ ಕಡಿಮೆ ಮಾಡುತ್ತದೆ ಹಾಗೂ ಒಂದು ಗ್ಲಾಸ್ ಉರುಗು ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಸೇರಿಸಿ ಅದರ ಜೊತೆಗೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಕ್ರಮೇಣ ನರಗಳ ಬಲಹೀನತೆ ಕಡಿಮೆಯಾಗುತ್ತದೆ

ಇನ್ನೂ ಪ್ರತಿನಿತ್ಯ ಕುಡಿಯುವ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಬೆರೆಸಿ ಕುಡಿಯುವುದರಿಂದಲೂ ಕೂಡಾ ನರಗಳು ಬಲವನ್ನು ಪಡೆಯುತ್ತವೆ ಜೊತೆಗೆ ಪ್ರತಿನಿತ್ಯ ವ್ಯಾಮಗಳ ಜೊತೆಗೆ ಸಹಜವಾದ ಒಂದು ಸುದೀರ್ಗ ನಡಿಗೆ ನಡೆಯುವುದರಿಂದಲೂ ದೇಹಕ್ಕೆ ರಕ್ತದ ಸಂಚಲನ ಸರಿಯಾಗಿ ಆಗಿ ನರಗಳು ಸ್ವಲ್ಪ ಮಟ್ಟಿಗೆ ಬಲವನ್ನು ಪಡೆಯುತ್ತವೆ

Comments are closed.