ಆರೋಗ್ಯ

ಸೌಂದರ್ಯದ ಬಗ್ಗೆ ಕಾಳಜಿ ಇರುವವರು ಯಾವತ್ತು ಈ ಕೆಲಸ ಮಾಡಬೇಡಿ..?

Pinterest LinkedIn Tumblr

ಹಿಂದಿನ ಕಾಲದ ಜನರು ಅದರಲ್ಲಿಯೂ ರಾಜರು ಮನಸೋಲುತ್ತಿದ್ದದ್ದು ಹುಡುಗಿಯ ಮುಖದ ಅಂದ ನೋಡಿಯೇ ಹಾಗೂ ನಮ್ಮ ಆಧುನಿಕ ಯುಗದ ಜನರು ಅಂದರೆ ನಮ್ಮ ಯುವಕರಿಗೆ ಲವ್ ಅಟ್ ಫಸ್ಟ್ ಸೈಟ್ ಆಗುತ್ತಿರುವುದು ಆ ಹುಡುಗಿಯ ಮುಖದ ಸೌಂದರ್ಯ ನೋಡಿಯೇ. ಹೀಗಿರುವಾಗ ಹುಡುಗಿಯರೂ ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಬಗೆಯ ಕ್ರೀಮ್ ಗಳು ಲೋಷನ್ ಗಳು ಹಲವಾರು ಮನೆ ಮದ್ದುಗಳನ್ನು ತಮ್ಮ ಮುಖದ ಮೇಲೆ ಪ್ರಯೋಗ ಮಾಡುತ್ತಲೆ ಇರುತ್ತಾರೆ, ಎಷ್ಟೋ ಮಂದಿ ಹಚ್ಚಬಾರದ್ದನ್ನು ಮುಖಕ್ಕೆ ಹಚ್ಚಿ ಅಂದ ಕೆಡಿಸಿಕೊಂಡವರಿದ್ದಾರೆ. ಹಾಗಾದ್ರೆ ನಾವು ಈವಾಗ ಹೇಳಹೊರಟಿರೋ ವಿಷಯ ಕೂಡ ಅದರ ಬಗ್ಗೆನೆ ಯಾವ ಯಾವ ವಸ್ತುಗಳನ್ನು ಮುಖಕ್ಕೆ ಹಚ್ಚಬಾರದು ಅಂತ

೧.ನೀವು ಬಳಸುವ ಅನೇಕ ಕಂಪನಿಗಳ ಬಾಡಿ ವಾಶ್ ಗಳನ್ನು ಎಂದೂ ನಿಮ್ಮ ಮುಖಕ್ಕೆ ಹಚ್ಚಬೇಡಿ ಯಾಕಂದ್ರೆ ನಿಮ್ಮ ಮೈ ಚರ್ಮ ಹಾಗೂ ಮುಖದ ಚರ್ಮಕ್ಕೆ ವ್ಯತ್ಯಾಸವಿದೆ ಮುಖದ ಚರ್ಮ ಮೈ ಚರ್ಮಕ್ಕಿಂತಲೂ ತುಂಬಾ ಮೃದುವಾಗಿರುತ್ತದೆ ಬಾಡಿ ವಾಶ್ ಗಳನ್ನು ನಿಮ್ಮ ಮೈ ಚರ್ಮದ ಗಡುಸುತನಕ್ಕೆ ಅನುಗುಣವಾಗಿಯೇ ತಯಾರಿಸಿರುವುದರಿಂದ ನಿಮ್ಮ ಮುಖಕ್ಕೆ ಅದನ್ನು ಹಚ್ಚುವುದರಿಂದ ನಿಮ್ಮ ಮುಖದ ಚರ್ಮ ಕಾಂತಿ ಕಳೆದುಕೊಳ್ಳಬಹುದು ಮತ್ತು ಮುಖದ ಮೇಲೆ ಮೊಡವೆಗಳು ಮೂಡುವ ಸಾಧ್ಯತೆ ಇರುತ್ತದೆ

೨.ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲೀನ್ ಅನ್ನು ಅಪ್ಪಿ ತಪಿಯು ಕೂಡ ಮುಖಕ್ಕೆ ಹಚ್ಚಬೇಡಿ ಯಾಕಂದ್ರೆ ಇದು ಪೆಟ್ರೋಲಿಯಂ ಯುಕ್ತವಾಗಿದ್ದು ತುಂಬಾ ಅಂಟುವಂತಹ ಗುಣವನ್ನು ಹೊಂದಿರುತ್ತದೆ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಸಣ್ಣ ಸಣ್ಣ ಪೋರ್ ಗಳು ಮುಚ್ಚಲ್ಪಟ್ಟು ನಮ್ಮ ದೇಹ ಹೊರಹಾಕುವ ಕಶ್ಮಲಗಳು ಒಳಗೇ ಉಳಿದು ಮುಖದ ಮೇಲೆ ಬೇಡವಾದ ಅಸಹ್ಯವಾದ ಗುಳ್ಳೆಗಳು ಮೂಡುತ್ತವೆ

೩. ಬಿಸಿನೀರನ್ನು ನೀವು ಮುಖ ತೊಳೆಯುವುದಕ್ಕೆ ಬಳಸಲೇಬಾರದು ಯಾಕಂದ್ರೆ ಬಿಸಿನೀರನ್ನು ನೀವು ಮುಖ ತೊಳೆಯುವುದರಿಂದ ನಿಮ್ಮ ಮುಖದಲ್ಲಿರುವ ಎಣ್ಣೆ ಅಂಶ ಕ್ರಮೇಣ ಕಡಿಮೆಯಾಗುತ್ತಾ ಬಂದು ಕೊನೆಗೆ ನಿಮ್ಮ ಮುಖದ ಚರ್ಮ ಒಣ ಚರ್ಮವಾಗಿಬಿಡುತ್ತದೆ ಅಲ್ಲದೆ ನಿಮ್ಮ ಮುಖವು ನೈಸರ್ಗಿಕ ಕಳೆಯನ್ನೂ ಕಳೆದುಕೊಳ್ಳುತ್ತದೆ.

೪. ಅಡುಗೆ ಸೋಡವನ್ನು ನಿಮ್ಮ ಮುಖಕ್ಕೆ ಹಚ್ಚಬಾರದು ಯಾಕಂದ್ರೆ ಅಡುಗೆ ಸೋಡಾ ನಿಮ್ಮ ಮುಖಕ್ಕೆ ಸೂಕ್ತವಲ್ಲ ಅಡುಗೆ ಸೋಡವನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಮೇಲೆ ಪಿಗ್ಮೆಂಟೇಶನ್ ಗಳು ಹೆಚ್ಚಾಗುತ್ತದೆ ಅಲ್ಲದೆ ಮೊಡವೆಗಳು ಮೂಡುತ್ತವೆ.

Comments are closed.