ಸಾಮಾನ್ಯ ಕಾಯಿಲೆ ಕೆಮ್ಮು ನೆಗಡಿ ಕಫ ಸೇರಿದಂತೆ ದೊಡ್ಡ ದೊಡ್ಡ ರೋಗಗಳನ್ನು ನಿಯಂತ್ರಿಸುವ ಗುಣವನ್ನು ವಿಳ್ಳೆದೆಯಲ್ಲಿ ಕಾಣಬುದಾಗಿದೆ. ಇನ್ನು ಕೆಲವರು ಊಟದ ನಂತರ ಎಲೆ ಅಡಿಕೆ ತಿನ್ನುವಂತ ಅಭ್ಯಾಸವನ್ನು ಕೂಡ ಮಾಡಿಕೊಂಡಿರುತ್ತಾರೆ, ಇದರಿಂದ ಉತ್ತಮ ಆರೋಗ್ಯವಿದೆ ಆದ್ರೆ ಅತಿಯಾಗಿ ಯಾವುದನ್ನೂ ಕೂಡ ಬಳಸಬಾರದು ಅತಿಯಾದರೆ ಅಮೃತವು ವಿಷ ಅನ್ನೋದು ನೆನಪು ಮಾಡಿಕೊಳ್ಳಬೇಕಾಗುತ್ತದೆ.ಎಕೆಂದರೆ ವಿಳ್ಳೇದೆಲೆ ಅನ್ನೋದು ಬರಿ ಶಾಸ್ತ್ರಕ್ಕೆ ಹಾಗೂ ಪೂಜಾ ಕಾರ್ಯಕ್ಕೆ ಸೀಮಿತವಾಗಿಲ್ಲದೆ, ಹಲವು ಔಷದಿ ಗುಣಗಳು ಇದರಲ್ಲಿ ಹೇರಳವಾಗಿದೆ.
ಇತ್ತೀಚಿನ ದಿನಗಳಲ್ಲಿ ತಲೆಕೂದಲು ಉದುರುವ ಸಮಸ್ಯೆ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ, ಈ ಸಮಸ್ಯೆಗೆ ಸೂಕ್ತ ಕಾರಣವೇನು ಅನ್ನೋದು ಸರಿಯಾಗಿ ತಿಳಿಯುವುದಿಲ್ಲ ಕೆಲವರ ದೇಹದ ಮೇಲಿನ ಪ್ರಭಾವದಿಂದ ತಲೆಕೂದಲು ಉದುರುತ್ತದೆ, ಹೇಗೆಂದರೆ ಕೆಲವರಲ್ಲಿ ವಿಟಮಿನ್ ಕೊರತೆ ಕಡಿಮೆ ಇದ್ರೆ ಹಾಗೂ ಒತ್ತಡ ಸಮಸ್ಯೆಯಿಂದ ಅಥವಾ ಪ್ರತಿದಿನ ಸ್ನಾನಕ್ಕೆ ಬಳಸುವಂತ ನೀರಿನ ಪ್ರಭಾವದಿಂದ ಹೀಗೆ ನಾನಾ ಕಾರಣಗಳಿಂದ ತಲೆಕೂದಲು ಉದುರುತ್ತದೆ. ಆದ್ರೆ ತಲೆಕೂದಲು ಉದುರುವ ಸಮಸ್ಯೆಗೆ ವಿಳ್ಳೇದೆಲೆಯಲ್ಲಿ ಹೇಗೆ ಪರಿಹಾರವಿದೆ ಅನ್ನೋದನ್ನ ತಿಳಿಯುವ ಮೊದಲು ವಿಳ್ಳೆದೆಯ ಬಗ್ಗೆ ತಿಳಿಯೋಣ.
ತಲೆಕೂದಲು ಉದುರುವ ಸಮಸ್ಯೆಗೆ ವಿಳ್ಳೇದೆಲೆ ಮದ್ದು: ಈ ಮನೆಮದ್ದು ತಯಾರಿಸಲು ಬೇಕಾಗುವಂತ ಸಾಮಗ್ರಿಗಳು ಯಾವುವು ಅನ್ನೋದಾದರೆ ಶುದ್ಧವಾದ 4 ರಿಂದ 5 ವಿಳ್ಳೇದೆಲೆ ಹಾಗೂ ಒಂದು ಟೀ ಚಮಚ ಕೊಬ್ಬರಿ ಎಣ್ಣೆ ಇದರ ಜೊತೆಗೆ ಒಂದು ಚಮಚ ಹರಳೆಣ್ಣೆ ಇಷ್ಟು ಸಾಮಗ್ರಿಗಳು ಮನೆಮದ್ದು ತಯಾರಿಸಲು ಬೇಕಾಗುತ್ತದೆ.
ಮನೆಮದ್ದು ತಯಾರಿಸುವ ವಿಧಾನ: ಮೊದಲು ವಿಳ್ಳೆದೆಯನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು ಇದಾದ ನಂತರ ಒಂದು ಬಟ್ಟಲಿನಲ್ಲಿ ಇದನ್ನು ಹಾಕಿಕೊಂಡು ಇದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹೀಗೆ ಈ ಮೂರನ್ನು ಮಿಶ್ರಣ ಮಾಡಿಕೊಂಡ ನಂತರ 5 ನಿಮಿಷಗಳ ಕಾಲ ಬಿಟ್ಟು ತಲೆಯ ಬುಡಕ್ಕೆ ಹಚ್ಚಿಕೊಂಡು 45 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಯನ್ನು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ವಾರದಲ್ಲಿ ಒಂದೆರಡು ಬಾರಿಯಾದರೂ ಮಾಡಿದರೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.

Comments are closed.