ಆರೋಗ್ಯ

ಪಾದಗಳಲ್ಲಿ ಇರುವಂತಹ ಆಣೆ ನಿವಾರಣೆಗೆ ಸರಳ ಉಪಾಯ

Pinterest LinkedIn Tumblr


ಹಿಂದಿನ ಕಾಲ ಹಾಗೂ ಹೀಗಿನ ಕಾಲದಲ್ಲೂ ಕೆಲವರು ಪಾದರಕ್ಷೆಯನ್ನು ಹಾಕುವ ಅಭ್ಯಾಸವಿರುವುದಿಲ್ಲ ಅತಂಹವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಆದರೆ ಈ ಕಾಲಿನಲ್ಲಿ ಆಗುವಂತ ಆಣೆಯನ್ನು ನಿವಾರಿಸಿಕೊಳ್ಳಲು ಕೆಲವರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ, ಆಣೆಯನ್ನು ಆಂಗ್ಲ ಭಾಷೆಯಲ್ಲಿ corn ಎಂಬುದಾಗಿ ಹೇಳಲಾಗುತ್ತದೆ. ಆದ್ರೆ ಕೆಲವರಿಗೆ ಏನೇ ಮಾಡಿದರು ಕೂಡ ಪಾದಗಳಲ್ಲಿ ಇರುವಂತ ಆಣೆ ನಿವಾರಣೆಯಾಗುವುದಿಲ್ಲ ಅಂತವರಿಗೆ ಈ ಮನೆಮದ್ದು ಉಪಯೋಗವಾಗಬಹುದಾಗಿದೆ. ಹೌದು ಈ ಸಮಸ್ಯೆ ಇದ್ರೆ ಬರಿಗಾಲಿನಲ್ಲಿ ಓಡಾಡಲು ಆಗೋದಿಲ್ಲ ಸ್ವಲ್ಪ ಪಾದಗಳಿಗೆ ಕಲ್ಲು ಚುಚ್ಚಿದರೆ ಜೀವವೆ ಹೋಗುವಷ್ಟು ನೋವು ಕೊಡುತ್ತದೆ,

ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಯಸಿದರೆ ಮುಂದೆ ನೋಡಿ.

ಸುಣ್ಣವನ್ನು ಒಂದು ಚಿಟಿಕೆಯಷ್ಟು ತಗೆದುಕೊಂಡು ಅದಕ್ಕೆ ಅಡುಗೆಗೆ ಬಳಸುವಂತ ಚಕ್ಕೆ ಪುಡಿಯನ್ನು ಅರ್ಧ ಟೀ ಚಮಚದಷ್ಟು ತಗೆದು ಕೊಂಡು ಈ ಎರಡನ್ನು ಮಿಕ್ಸ್ ಮಾಡಿ ಆಣೆಗಳು ಆಗಿರುವಂತ ಜಾಗಕ್ಕೆ ಹಚ್ಚಿ ಬಟ್ಟೆ ಕಟ್ಟಿಕೊಳ್ಳಬೇಕು. ಹೀಗೆ ಈ ಎರಡು ಮದ್ದುಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಮಾಡಿ ಇದರ ಉಪಯೋಗವನ್ನು ಪಡೆದುಕೊಳ್ಳಿ.

ಈ ಸಮಸ್ಯೆ ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹೆಚ್ಚು ಕಷ್ಟ ಆಡುವ ಅಗತ್ಯವಿಲ್ಲ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇರುವಂತ ಔಷದಿ ಮೂಲಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೌದು ಎಕ್ಕದ ಗಿಡದ ಎಲೆಗಳಲ್ಲಿ ಮುರಿದಾಗ ಬರುವಂತ ಹಾಲನ್ನು ಅರ್ಧ ಟೀ ಚಮಚ ತಗೆದುಕೊಂಡು ಅದಕ್ಕೆ ಅರ್ಧ ಚಮಚ ಹರಳೆಣ್ಣೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ ಆಣೆ ಆಗಿರುವಂತ ಜಾಗಗಳಲ್ಲಿ ಇದನ್ನು ಹಚ್ಚಿ ಬಟ್ಟೆಯಿಂದ ಕಟ್ಟಿಕೊಳ್ಳಬೇಕು.

Comments are closed.