ಆರೋಗ್ಯ

ಕುಂದಾಪುರ ಕೋವಿಡ್ ಆಸ್ಪತ್ರೆಗೆ 5 ಲಕ್ಷ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣ ಕೊಡುಗೆ ಕೊಟ್ಟ ಎ.ಜಿ. ಕೊಡ್ಗಿ ಕುಟುಂಬ..!

Pinterest LinkedIn Tumblr

ಕುಂದಾಪುರ: ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಂದ ಸಿಗುತ್ತಿರುವ ಉತ್ತಮ ಸೇವೆಯಿಂದ ಅವರು ಗುಣಮುಖರಾಗುತ್ತಿದ್ದು ಇದನ್ನು ಮೆಚ್ಚಿ 3 ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಎ.ಜಿ. ಕೊಡ್ಗಿ ಅವರ ಕುಟುಂಬಿಕರು ಅಂದಾಜು 5 ಲಕ್ಷಕ್ಕೂ ಅಧಿಕ ಮೊತ್ತದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ರಕ್ತ ತಪಾಸಣೆಯ ಉಪಕರಣವನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು.

ಅಮಾಸೆಬೈಲಿನ ಅವರ ನಿವಾಸದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅವರಿಗೆ ರಕ್ತ ತಪಾಸಣಾ ಉಪಕರಣವನ್ನು ಎ.ಜಿ. ಕೊಡ್ಗಿ ಹಾಗೂ ಕುಟುಂಬಿಕರು ಹಸ್ತಾಂತರಿಸಿದರು.

ಉಪಕರಣ ಸ್ವೀಕರಿಸಿ ಮಾತನಾಡಿದ ಎಸಿ ಕೆ. ರಾಜು, ಕುಂದಾಪುರದಲ್ಲಿ ಈ ರೀತಿಯಾಗಿ ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಕೊಡುಗೆಗಳು ಲಭಿಸಿದೆ. ಇನ್ನು ಹೆಚ್ಚೆಚ್ಚು ಇಂತಹ ದಾನಿಗಳಿಂದ ಕೊಡುಗೆಗಳು ಸಿಕ್ಕಲ್ಲಿ ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಮತ್ತಷ್ಟು ಸೇವೆಗಳು ಸೋಂಕಿತರಿಗೆ ಸಿಗಲಿದೆ ಎಂದರು.

6 ಹಂತದಲ್ಲಿ ರಕ್ತ ಪರೀಕ್ಷೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣ ಇದಾಗಿದೆ.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಅರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾರ್ಬಟ್‌ ರೆಬೆಲ್ಲೊ, ಪಿಜಿಶಿಯನ್‌ ಡಾ. ನಾಗೇಶ್‌, ಕೊಡ್ಗಿಯವರ ಪುತ್ರರಾದ ಅನಂತ್ ಕೊಡ್ಗಿ, ಕಿಶೋರ್ ಕೊಡ್ಗಿ, ಆನಂದ ಕೊಡ್ಗಿ, ಕುಮಾರ್ ಕೊಡ್ಗಿ, ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಸಬ್ಲಾಡಿ ಜಯರಾಮ ಶೆಟ್ಟಿ ಮೊದಲಾದವರು ಈ ಸಂದರ್ಭ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.