ಮಂಗಳೂರು ಅಕ್ಟೋಬರ್. 02 : ಉತ್ತರಪ್ರದೇಶದ ಅತ್ರಾಸದಲ್ಲಿ ನಡೆದ ಮನೀಶಾ ಎಂಬ ದಲಿತ ಹೆಣ್ನುಮಗಳ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆಯನ್ನು ವಿಶ್ವ ಹಿಂದ್ ಪರಿಷದ್‌ನ ದುರ್ಗಾವಾಹಿನಿ ಘಟಕ ತೀವ್ರವಾಗಿ ಖಂಡಿಸುತ್ತಿದ್ದು, ಅರೋಪಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸುತ್ತಿದೆ ಎಂದು ವಿಶ್ವ ಹಿಂದ್ ಪರಿಷದ್‌ನ ದುರ್ಗಾವಾಹಿನಿಯು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರಪ್ರದೇಶದ ಅತ್ರಾಸದಲ್ಲಿ ಸೆಪ್ಟೆಂಬರ್ 14 ರಂದು ಮನುಕುಲವೇ ತಲೆತಗ್ಗಿಸುವ ಪೈಶಾಚಿಕ ಹೀನ ಕೃತ್ಯ ನಡೆದಿದ್ದು 19 ವರ್ಷದ ಹೆಣ್ಣುಮಗಳ ಮೇಲೆ 4 ಜನ ರಾಕ್ಷಸರಿಂದ ಭೀಕರವಾಗಿ ನಡೆದ ಅತ್ಯಾಚಾರ ಮತ್ತು ಕೊಲೆಯಂತಹ ಅಮಾನವೀಯ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ದುರ್ಗಾವಾಹಿನಿ ತೀವ್ರವಾಗಿ ಖಂಡಿಸುತ್ತದೆ.
ಮಾತ್ರವಲ್ಲದೇ ಆರೋಪಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ನೀಡಬೇಕೇಂದು ಈ ಮೂಲಕ ಆಗ್ರಹ ಮಾಡುತ್ತಿದೆ ಎಂದು ವಿಹಿಂಪ ಮಂಗಳೂರು, ಮಹಿಳಾ ಘಟಕದ ಜಿಲ್ಲಾ ಸಹಕಾರ್ಯದರ್ಶಿಶ್ರೀಮತಿ ಸುರೇಖಾ ರಾಜ್ ಹಾಗೂ ದುರ್ಗಾವಾಹಿನಿ ಮಂಗಳೂರು ಘಟಕದ ಜಿಲ್ಲಾ ಸಂಯೋಜಕಿ ಶ್ರೀಮತಿ ಸುಕನ್ಯಾ ರಾವ್ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.