ಆರೋಗ್ಯ

ಚಿಕ್ಕ ಮಕ್ಕಳ ಹೊಟ್ಟೆ ನೋವು ನಿವಾರಣೆಗಾಗಿ ನಿತ್ಯಪುಷ್ಪ ಹೂವಿನ ಎಲೆಗಳ ರಸ ಸಹಕಾರಿ.

Pinterest LinkedIn Tumblr

ಗುಲಾಬಿ ಮಿಶ್ರಿತ ಕೆಂಪು ,ಬಿಳಿ ಬಣ್ಣಗಳಿಂದ ಕೂಡಿದ ಈ ಹೂವು ಮನೆಯ ಸುತ್ತಮುತ್ತಲಿನಲ್ಲಿಯೇ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಸದಾಪುಷ್ಪ ಅಥವಾ ನಿತ್ಯ ಪುಷ್ಪ ಎಂದು ಕೂಡ ಕರೆತ್ತಾರೆ.ಅಷ್ಟೇ ಅಲ್ಲದೇ ಈ ಹೂವು ಒಂದು ಔಷಧೀಯ ಗುಣ ಹೊಂದಿರುವ ಸಸ್ಯವಾಗಿದೆ. ಎಲ್ಲಾ ಕಾಲಗಳಲ್ಲಿಯೂ ಹೂವು ಬಿಡುವ ಕಾರಣ ಇದನ್ನು ನಿತ್ಯ ಪುಷ್ಪ, ಸದಾಪುಷ್ಪ ಎಂದೂ ಕರೆಯುತ್ತಾರೆ.

ಈ ಹೂವನ್ನು ಅಲಂಕಾರಿಕ ಪುಷ್ಪಗಳಾಗಿ ಬಳಕೆ ಮಾಡಲಾಗುವ ಈ ಪುಟ್ಟ ಗಿಡ ಇಂದು ಇಡೀ ದೇಶದಲ್ಲಿ ಚಿರಪರಿಚಿತವಾಗಿದೆ. ಎಲೆಗಳ ಹಸಿರು, ಎದುರುಗಡೆ ತೆಲುಗು ಲಾಬಿ ಕೆಂಪು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಬಣ್ಣದಲ್ಲಿ ಬೇರೆ-ಬೇರೆ ರೀತಿ ಇದ್ದರು ಸಹ ಗುಣದಲ್ಲಿ ಎಲ್ಲಾ ಬಣ್ಣದ ಹೂವುಗಳು ಒಂದೇ ಆಗಿರುತ್ತದೆ. ಹಾಗೂ ಹಿಂದಿನ ಕಾಲದಿಂದಲೂ ಈ ಹೂವಿನ ಸಸ್ಯ ಹಾಗೂ ಹೂವನ್ನು ಗಿಡಮೂಲಿಕೆ ಯಾಗಿ ಉಪಯೋಗಿಸಲ್ಪಡುತ್ತಿತ್ತು.

ಸದಾ ಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ರೋಗಕ್ಕೆ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ವಿನ್ಕ್ರಿಸ್ಟಿನ್ ಮತ್ತು ವಿನ್ ಲಾಸ್ಟನಾನ್ ಎಂಬ ರಕ್ತದ ಕ್ಯಾನ್ಸರ್ ನಿವಾರಣೆ ಮಾಡುವ ಗುಣವನ್ನು ಹೊಂದಿರುತ್ತದೆ.

ಮಧುಮೇಹ ರೋಗ ನಿಯಂತ್ರಣಕ್ಕಾಗಿ ಸಹ ಈ ಗಿಡ ಮತ್ತು ಹೂವನ್ನು ಬಳಕೆ ಮಾಡಲಾಗುತ್ತದೆ . ಚಿಕ್ಕ ಮಕ್ಕಳ ಹೊಟ್ಟೆ ನೋವು ನಿವಾರಣೆಗಾಗಿ ನಿತ್ಯಪುಷ್ಪ ಹೂವಿನ ಎಲೆಗಳ ರಸವನ್ನು ಬಳಕೆ ಮಾಡಲಾಗುತ್ತದೆ.

ರಕ್ತದೊತ್ತಡ ಸಮಸ್ಯೆ ಇದ್ದರೂ ಸಹ ನಿತ್ಯಪುಷ್ಪ ಹೂವನ್ನು ಬಳಕೆ ಮಾಡಲಾಗುತ್ತದೆ. ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ಇಟ್ಟುಕೊಂಡು ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೊಂಬು ನೀರಿಗೆ ಹಾಕಿ ಕಾಯಿಸಿ ದಿವಸಕ್ಕೆ ಮೂರು ಚಮಚದಷ್ಟು ಬೆಳಗ್ಗೆ ಮತ್ತು ಸಾಯಂಕಾಲ ಕುಡಿಯಬೇಕು. ಹಲವಾರು ರೀತಿಯ ಕ್ಯಾನ್ಸರ್ ಗಳಿಂದ ಮನುಷ್ಯನನ್ನು ಉಳಿಸುವ ಗುಣ ಈ ಗಿಡಕ್ಕೆ ಇದೆ ಎಂದರೆ ಅತಿಶಯೋಕ್ತಿ ಎನಿಸಲಾರದು.

ಸಕ್ಕರೆ ಕಾಯಿಲೆಗೆ ಈ ಗಿಡದ 4 / 5 ಹಸಿರು ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತಿನ್ನುವುದು ಅಥವಾ ಪುಷ್ಪ ಹೂವುಗಳನ್ನು ಸಹ ಅಗೆದು ತಿಂದರೆ ಸಕ್ಕರೆ ಕಾಯಿಲೆ ನಿವಾರಣೆ ಹೊಂದುತ್ತದೆ. ಒಂದು ಹಿಡಿ ನಿತ್ಯಪುಷ್ಪ ಹೂವನ್ನು ಒಂದು ಬಟ್ಟಲು ನೀರಿಗೆ ಹಾಕಿ ಕಾಲು ಬಟ್ಟಲು ಆಗುವವರೆಗೂ ಕಾಯಿಸಿ ಕಷಾಯ ವನ್ನಾಗಿ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಷಾಯವನ್ನು ಸೇವಿಸಬೇಕು. ಇದರಿಂದ ಸಹ ಸಕ್ಕರೆ ಕಾಯಿಲೆ ನಿವಾರಣೆ ಆಗುತ್ತದೆ. ನಿತ್ಯ ಪುಷ್ಪವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ಇಟ್ಟುಕೊಳ್ಳಬೇಕು. 1 ಟೀಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ತಣ್ಣಗಾದ ಮೇಲೆ ಅರ್ಧ ಬಟ್ಟಲು ಕಷಾಯವನ್ನು ಸೇವನೆ ಮಾಡುವುದು.

ಈ ಮೂಲಕ ನಿತ್ಯಪುಷ್ಪ ಗಿಡ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸುಟ್ಟ ಗಾಯ ಮತ್ತು ಅದರ ಕಲೆಗಳಿಗೂ ಸಹ ಇದು ಉತ್ತಮ ಔಷಧಿ. ನಿತ್ಯಪುಷ್ಪ ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಅದರ ರಸ ತೆಗೆದು ಅದಕ್ಕೆ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ ಗಾಯದಮೇಲೆ ಮಂದವಾಗಿ ಲೇಪಿಸಬೇಕು. ಹೀಗೆ ಮಾಡುವುದರಿಂದ ಸುಟ್ಟಗಾಯ ಹಾಗೂ ಕಲೆಗಳು ಮಾಯವಾಗುವುದು. ಬೇಧಿ ಉಂಟಾಗಿದ್ದಲ್ಲಿ 10ಗ್ರಾಂ ನಿತ್ಯಪುಷ್ಪ ಎಲೆಗಳನ್ನು ಮತ್ತು ಹೂವುಗಳನ್ನು ಸಂಗ್ರಹಿಸಿ ಕಷಾಯಮಾಡಿ ತಣ್ಣಗಾದ ಮೇಲೆ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸಬೇಕು.

ಬಳಸುವ ಮೊದಲು ಎಚ್ಚರ:
ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಶರೀರವು ಸಹ ಭಿನ್ನ ಭಿನ್ನವಾಗಿರುತ್ತದೆ ಆದ್ದರಿಂದ ಎಲ್ಲ ಮನೆಮದ್ದುಗಳನ್ನು ಬಳಕೆ ಮಾಡುವುದಕ್ಕಿಂತ ಮೊದಲು ಒಮ್ಮೆ ವೈದ್ಯರ ಸಲಹೆಯನ್ನು ಪಡೆದು ಅಮೇಲೆ ಬಳಕೆ ಮಾಡುವುದು ಉತ್ತಮ.

Comments are closed.