ಆರೋಗ್ಯ

ಹೃದಯದಲ್ಲಿನ ಬ್ಲಾಕೇಜ್ಗಳ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಈ ಸಸ್ಯ.

Pinterest LinkedIn Tumblr

ಕೆಮ್ಮು ಜ್ವರದಂತಹ ಸಣ್ಣ ಪುಟ್ಟ ಖಾಯಿಲೆಯಿಂದ ಹಿಡಿದು ಕ್ಯಾನ್ಸರ್, ಕಿಡ್ನಿವೈಫಲ್ಯ ಎಲ್ಲಕ್ಕೂ ಆಸ್ಪತ್ರೆ ಬೇಕೆ ಬೇಕು. ಸಣ್ಣ ತಲೆನೋವಿಗೂ ಆಸ್ಪತ್ರೆಗೆ ಓಡುವವರು ತುಂಬಾ ಜನ ಸಿಗುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಆಸ್ಪತ್ರೆ ಎಂದರೆ ಏನು ಎನು ಎಂಬುದೆ ತಿಳಿದಿರಲಿಲ್ಲ ಎಲ್ಲಾ ಖಾಯಿಲೆಗೂ ಕಾಲಬುಡದಲ್ಲೆ ಔಷಧಿ ಕೊಡುತ್ತಿದ್ದರು. ಎಷ್ಟು ಗಿಡಗಳು ಮರಗಳು ಇವೆಯೋ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿರುವುದು ಎಂಬುದು ಅವರ ಅನಿಸಿಕೆ.

ಈ ಗಿಡಮೂಲಿಕೆಯ ಗಿಡದ ಬಗೆಗಿನ ಉಲ್ಲೇಖ ರಾಮಾಯಣ ಕಾಲದಲ್ಲಿಲ್ಲೂ ಆಗಿದೆ. ರಾಮ ಮತ್ತು ಲಕ್ಷ್ಮಣರಿಗೆ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಯನ್ನು ಕಲಿಸುತ್ತಿದ್ದ ವಿಶ್ವಾಮಿತ್ರ ಮಹರ್ಷಿಗಳು ಬಲ ಮತ್ತು ಅತಿಬಲ ಎಂಬ ಮಂತ್ರ ಹೇಳಿಕೊಡುತ್ತಿರುತ್ತಾರೆ. ಇದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ನಿರ್ಜನವಾದ ಪ್ರದೇಶದಲ್ಲಿ ಉಪದೇಶ ನೀಡುತ್ತಾರೆ. ಆದರೆ ಅಲ್ಲಿಯೆ ಬೆಳೆದಿದ್ದ ಎರಡು ಗಿಡಗಳು ಆ ಮಂತ್ರಗಳನ್ನು ಕೇಳಿಸಿಕೊಂಡಿರುತ್ತದೆ. ಭಯದಲ್ಲೆ ಆ ಎರಡು ಗಿಡಗಳು ಇದನ್ನು ವಿಶ್ವಾಮಿತ್ರರಿಗೆ ತಿಳಿಸಿ ಕ್ಷಮೆ ಕೋರುತ್ತವೆ. ವಿಶ್ವಾಮಿತ್ತರು ನೀವು ಜಗತ್ತಿನ ಎಲ್ಲೆಡೆ ಬೆಳೆದು ಜನರಿಗೆ ಆರೋಗ್ಯ ಹಾಗು ಬಲವನ್ನು ನೀಡಿ ಎಂದು ಆಶಿರ್ವಾದ ಮಾಡಿದರಂತೆ. ಆ ಎರಡು ಗಿಡಗಳೆ ಬಲ ಮತ್ತು ಅತಿಬಲ. ನಾನು ನಿಮಗೆ ತಿಳಿಸಿ ಕೊಡಲು ಹೊರಟಿರುವ ಗಿಡಮೂಲಿಕೆ ಹೆಸರು ಅತಿಬಲ. ಹೃದಯ ಕಾಯಿಲೆ ಇಂದ ಪುರುಷತ್ವದ ಸಮಸ್ಯೆಯ ವರೆಗೂ ಹಲವಾರು ಖಾಯಿಲೆ ಗುಣಪಡಿಸುವ ಶಕ್ತಿ ಹೊಂದಿರುವುದು ಈ ಅತಿಬಲ. ಈ ಗಿಡಗಳು ಬಯಲು ಸೀಮೆಯಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತವೆ. ಮಲೆನಾಡಿನಲ್ಲಿಯೂ ಅಲ್ಲಲ್ಲಿ ಈ ಗಿಡ ಗೋಚರವಾಗುತ್ತದೆ.

ಈ ಅತಿಬಲ ಗಿಡವು ಅರಿಶಿನ ಬಣ್ಣದ ಹೂವು ಹೊಂದಿರುವ ಇದು ಹೃದಯಾಕಾರದ ಎಲೆ ಹೊಂದಿದ್ದು ಅಂಟು ಅಂಟಾದ ಸಣ್ಣ ಸಣ್ಣ ರೋಮಗಳನ್ನು ಹೊಂದಿರಯತ್ತದೆ. ಇಂತಹ ಗಿಡ ಕಂಡಲ್ಲಿ ಕಳೆ ಎಂದು ಕಿತ್ತೆಸೆಯದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಸಿ. ಈ ಗೀಡದ 3-4 ಎಲೆಗಳನ್ನು ನೀರಿನಲ್ಲಿ ನೆನೆಸಿ ಅನಂತರ ಕುದಿಸಿಕೊಂಡು ಶೋಧಿಸಿದ ಕಷಾಯವನ್ನು ದಿನಕ್ಕೆ ಮೂರು ಬಾರಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಬೆಳೆದ ಕಲ್ಲುಗಳು ಕರಗಿ ಮೂತ್ರನಾಳದ ಮೂಲಕ ಹೊರಗೆ ಹೋಗುತ್ತವೆ. ಕಣ್ಣಿನ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ. ಅತಿಬಲದ ಎಲೆಗಳ ಕಷಾಯ ಕುಡಿಯುವುದರಿಂದ ನಿಮ್ಮ ದೃಷ್ಟಿ ದೋಷ ಪರಿಹಾರವಾಗುತ್ತದೆ.

ಈಗ ಎಲ್ಲಾ ಕಡೆಗಳಲ್ಲಿ ನಾಯಿಯ ಕಾಟ ತಪ್ಪಿದ್ದಲ್ಲ. ಅದರ ಕಡಿತಕ್ಕೆ ಒಳಗಾದವರೂ ಕಡಿಮೆ ಎನಿಲ್ಲ.. ನಾಯಿ ಕಚ್ಚಿದ ನಂಜಿನಿಂದ ಆಸ್ಪತ್ರೆಗೆ ಹೋಗಿ ಸಪ್ಟಿಕ್ ಇಂಜೆಕ್ಷನ್ ತಗೋಳೊದು ತಪ್ಪಲ್ಲ.ಈ ನಾಯಿಯ ಕಡಿತಕ್ಕೂ ಅತಿಬಲ ಒಂದು ದಿವ್ಯೌಷಧಿ. ಏನಿಲ್ಲ ಅತಿಬಲದ ಎಲೆಗಳನ್ನು ಜಜ್ಜಿ ಅದರ ರಸವನ್ನು ಗಾಯವಾದಲ್ಲಿ ಹಚ್ಚಿ ಬಟ್ಟೆಯ ಸಹಾಯದಿಂದ ಕಟ್ಟಿದರೆ. ನಂಜು ಏರುವುದಿಲ್ಲ ಗಾಯವೂ ಬೇಗ ವಾಸಿಯಾಗುತ್ತದೆ. ಬೇರೆ ಬೇರೆ ರೀತಿಯ ರಕ್ತ ನಿಲ್ಲಿಸಲಾಗದ ಗಾಯಗಳಿಗೂ ಈ ರಸವನ್ನು ಬಳಸಬಹುದು.

ಈ ಅತಿಬಲ ಗಿಡಮೂಲಿಕೆಯೂ ವಿಷಮಶೀತ ಜ್ವರಕ್ಕೂ ಔಷಧಿಯಾಗಿದೆ. ಅತಿಬಲದ ಎಲೆಯ ಕಷಾಯಕ್ಕೆ ಕಲ್ಲುಸಕ್ಕರೆ ಹಾಕಿ ಸೇವಿಸಿದಲ್ಲಿ ವಿಷಮಶೀತ ಜ್ವರ ಕಡಿಮೆಮಾಡುವುದರ ಜೊತೆಗೆ ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ. ದಿನಗಳಲ್ಲಿ ಎರಡು ಬಾರಿ ಅತಿಬಲ ಎಲೆಯ ಕಷಾಯ ಕುಡಿಯುವುದರಿಂದ ಹೃದಯವು ಚೆನ್ನಾಗಿ ಕೆಲಸ ಮಾಡುತ್ತದೆ. ಹೃದಯದಲ್ಲಿ ಬ್ಲಾಕೇಜ್ಗಳ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಕ್ಕಳಿಗೆ ಈ ಕಷಾಯವನ್ನು ಎರಡು ಸ್ಪೂನ್ ಕುಡಿಸುವುದರಿಂದ ಜಂತು ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ.

ಸಯಾಟಿಕಾ ಅಂದರೆ ಸೊಂಟದ ನೋವಿದ್ದರೆ..ರಾತ್ರಿ ಹರಳೆಣ್ಣೆಯಿಂದ ಮಸಾಜ್ ಮಾಡಿ ಎರಡು ಹಿಡಿ ಅತಿಬಲದ ಎಲೆಗಳನ್ನು ನೋವಿರುವಲ್ಲಿ ಜಾಗದಲ್ಲಿ ಬಟ್ಟೆಯಿಂದ ಕಟ್ಟಿ ಹೀಗೆ ಮಾಡಿದರೆ ಬೆಳಿಗ್ಗೆ ಅಷ್ಟರಲ್ಲಿ ಸೊಂಟದ ನೋವು ಕಡಿಮೆಯಾಗಿರುತ್ತದೆ. 50ಗ್ರಾಂ ಅತಿಬಲದ ಬೀಜ, 100ಗ್ರಾಂ ಶತಾವರಿ ಬೇರಿನ ಪುಡಿಯನ್ನು ಜೋನಿಬೆಲ್ಲ ಅಥವಾ ಕಪ್ಪು ಬೆಲ್ಲದೊಂದಿಗೆ ಸೇರಿಸಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಉಂಡೆ ಮಾಡಿಟ್ಟು ಕೊಂಡು ಪ್ರತಿ ನಿತ್ಯ ಎರಡು ಬಾರಿ ಹಾಲಿನೊಂದಿಗೆ ಸೇವಿಸುತ್ತಾ ಬಂದರೆ ಪುರುಷತ್ವದ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಅತಿಬಲದ ಈಡಿ ಗಿಡವನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚಿಕೊಂಡರೆ ಚರ್ಮ ರೋಗದ ಸಮಸ್ಯೆಗಳನ್ನು ಇದು ನೀವಾರಿಸಿ ದೇಹಕ್ಕೆ ಪುಷ್ಟಿ ಕೊಡುತ್ತದೆ. ಅಸ್ತಮಾದಂತ ಕಾಯಿಲೆಗೂ ಇದರ ಎಲೆಯ ಕಷಾಯ ಔಷಧಿಯಾಗಿದೆ. ನೈಸರ್ಗಿಕವಾಗಿ ಸಿಗುವ ಆರೋಗ್ಯದ ಬಗೆಗೆ ನಿರ್ಲಕ್ಷ್ಯ ಬೇಡ.. ಈ ಗಿಡವನ್ನು ಎಲ್ಲಾದರೂ ಕಂಡರೆ ಅದನ್ನು ಮತ್ತಷ್ಟು ಬೇಳೆಸುವತ್ತ ಗಮನ ಹರಿಸಿ. ನಮ್ಮ ನೆಲದ ಔಷಧೀಯ ಸಸ್ಯಗಳನ್ನು ಕಾಪಾಡಿಕೊಳುವುದು ನಮ್ಮ ಕರ್ತವ್ಯವಾಗಿದೆ. ಔಷಧೀಯ ಗಿಡಗಳನ್ನು ಉಳಿಸಿ ಬೆಳೆಸಿ.

Comments are closed.