ಹೆಣ್ಣಿನ ವಯಸ್ಸು ಕಡಿಮೆ ಇದ್ದರೂ ಸಹ ಮಕ್ಕಳಾಗದೇ ಇರುವ ಸಾಧ್ಯತೆಗಳಿವೆ. ಇದನ್ನು ಬಂಜೆತನ ಎನ್ನಬಹುದು. ಆದರೆ ಇದು ಮಾತ್ರವಲ್ಲ. ಮಹಿಳೆ ಗರ್ಭವತಿಯಾಗಿ ಆಕೆಯಲ್ಲಿ ಗರ್ಭ ನಿಲ್ಲದೇ ಇರುವ ಸ್ಥಿತಿಗೂ ಕೂಡ ಬಂಜೆತನ ಎನ್ನಬಹುದು. ಸಾಕಷ್ಟು ಮಹಿಳೆಯರು ಇಂದು ಇಂತಹ ಬಂಜೆತನವನ್ನು ಅನುಭವಿಸುತ್ತಿದ್ದಾರೆ.
ದಂಪತಿಗಳಲ್ಲಿ ಹಲವು ಬಾರಿ ಪ್ರಯತ್ನದ ಬಳಿಕವೂ ಮಕ್ಕಳಾಗುವ ಸಾಧ್ಯತೆ ಇಲ್ಲದಿದ್ದಲ್ಲಿ, ಅಥವಾ ಗರ್ಭ ಧರಿಸಿದರೂ ಅದು ನಿಲ್ಲದಿದ್ದಲ್ಲಿ ಮಹಿಳೆ ಮಾತ್ರ ಇದಕ್ಕೆ ಕಾರಣವಾಗಿರದೇ ಪುರುಷನೂ ಕೂಡ ಸಮಾನ ಪಾಲುದಾರನಾಗಿರುತ್ತಾನೆ. ದಂಪತಿಗಳಿಬ್ಬರಲ್ಲೂ ಹಲವಾರು ಕಾರಣಗಳಿಗೆ ಬಂಜೆತನ ಕಂಡುಬರಬಹುದು.
ಕೆಲವರಲ್ಲಿ ಬಂಜೆತನ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಅವರಿಗೆ ಮಕ್ಕಳಾಗುವುದಿಲ್ಲ. ಅಂತವರು ನಿಮಗೆ ಸಂತಾನ ಫಲ ಬೇಕೆಂದರೆ ಈ ಹಣ್ಣನ್ನು ಸೇವಿಸಿ.
ಅಂಜೂರ ಹಣ್ಣಿನಲ್ಲಿ ಜಿಂಕ್ , ಮೆಗ್ನಿಶಿಯಂ ಹೆಚ್ಚಾಗಿರುತ್ತದೆ. ಇದು ಸಂತಾನ ಫಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಪುರುಷರು ಸೇವಿಸುವುದರಿಂದ ಅವರಲ್ಲಿ ಫಲವತ್ತತೆ ಮತ್ತು ಪುರುಷರಿಗೆ ಬೇಕಾಗುವಂತಹ ಶಕ್ತಿಯನ್ನು ಹೆಚ್ಚಾಗುತ್ತದೆ. ಇದರಿಂದ ಉತ್ತಮ ಫಲ ಪಡೆಯಬಹುದು.

Comments are closed.