ಕುಂದಾಪುರ: ತಾಲೂಕಿನ ಗಂಗೊಳ್ಳಿಯ ದೇವಸ್ಥಾನವೊಂದರಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದ್ದು ಆತನ ರಕ್ಷಿಸಲು ಹೋದ ಇನ್ನಿಬ್ಬರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಇಲ್ಲಿನ ನಿವಾಸಿ ದಾಕಹಿತ್ಲುವಿನ ರಾಘವೇಂದ್ರ ಖಾರ್ವಿ ಆತ್ಮಹತ್ಯೆಗೆ ಯತ್ನಿಸಿದ್ದು ಲಕ್ಷ್ಮಣ್ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಬಚಾವ್ ಮಾಡಲು ಹೋಗಿ ಸುಟ್ಟ ಗಾಯಗಳಾಗಿದೆ.
ಅಮಾವಾಸ್ಯೆ ಪೂಜೆ ಇದ್ದ ಹಿನ್ನೆಲೆ ಭಕ್ತಾಧಿಗಳು ಗಂಗೊಳ್ಳಿಯ ಖಾರ್ವಿಕೇರಿ ಸಮೀಪದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದರು. ಇದೇ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದು ಬಂದ ರಾಘವೇಂದ್ರ ಮೈಮೇಲೆ ಸುರಿದುಕೊಂಡಿದ್ದಾನೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡಿದ್ದು ಬಚಾವ್ ಮಾಡಲು ಹೋದ ಇಬ್ಬರಿಗೆ ಬೆಂಕಿ ತಾಗಿದೆ. ಕೂಡಲೇ ಗಾಯಾಳುಗಳನ್ನು ಗಂಗೊಳ್ಳಿ ಆಪತ್ಭಾಂದವ ಆಂಬುಲೆನ್ಸ್ ಮೂಲಕ ಸಮಾಜಸೇವಕಾರದ ಇಬ್ರಾಹಿಂ ಗಂಗೊಳ್ಳಿ ಹಾಗೂ ರಜಬ್ ಬುದ್ಧ ಎನ್ನುವರು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
Comments are closed.