ದುಬಾಯಿ : ಇಂಡಿಯನ್ ಪ್ರೀಮಿಯರ್ ಲೀಗ್ 2020 – ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಕಳೆದ ಬಾರಿಯ ವಿನ್ನರ್‍ಸ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್‍ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯ ನಡೆಯಲಿದೆ.
ಈ ನಡುವೆ ಈಗಾಗಲೇ ದುಬಾಯಿಗೆ ಆಗಮಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ, ಚಿತ್ರನಟಿ ಪ್ರೀತಿ ಜಿಂಟಾಗೆ ಆತಂಕ ಹೆಚ್ಚಾಗಿದ್ದು, ನನಗೆ ತುಂಬಾ ಹೆದರಿಕೆ ಆಗುತ್ತಿದೆ ಎಂದು ಸ್ವತಹ ಪ್ರೀತಿ ಜಿಂಟಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಇದೇ ಬರುವ ಶನಿವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್ 2020 ಆರಂಭಗೊಳ್ಳಲ್ಲಿದ್ದು, ಐಪಿಎಲ್‌ನ ಏಂಟು ತಂಡಗಳು ಈಗಾಗಲೇ ದುಬೈಗೆ ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಒಂದು ವಾರದ ಹಿಂದೆ ದುಬೈಗೆ ಬಂದಿಳಿದಿರುವ ಪ್ರೀತಿ ಜಿಂಟಾ ಏಳು ದಿನಗಳ ಅವಧಿಗೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇಂದಿಗೆ ಪ್ರೀತಿಯ ಕ್ವಾರಂಟೈನ್ ಅವಧಿ ಮುಗಿಯಲಿದ್ದು, ಹೋಟೆಲ್‌ನಿಂದ ಹೊರಬರಲಿದ್ದಾರೆ.
ಕ್ವಾರಂಟೈನ್ ಅವಧಿ ಮುಗಿದು ಇಂದು ಹೊರ ಬರಲಿರುವ ಪ್ರೀತಿ ಜಿಂಟಾಗೆ ಸ್ವಲ್ಪ ಆತಂಕ ಹಾಗೂ ಹೆದರಿಕೆ ತಂದಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೇನೆ. ನಾನು ನಿಜವಾಗಿಯೂ ಯಾರನ್ನೂ ಭೇಟಿ ಮಾಡದಿದ್ದರೂ, ಸ್ವಲ್ಪ ಹೆದರಿಕೆ ಇದೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು, ಪ್ರೀತಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವೆ ಸೆಪ್ಟೆಂಬರ್ 20ರಂದು ಮೊದಲ ಪಂದ್ಯಾ ನಡೆಯಲಿದೆ. ಬಹುಷ ಮೊದಲ ಪಂದ್ಯಾ ನಡೆದ ಬಳಿಕ ಪ್ರೀತಿ ಜಿಂಟಾ ಆತಂಕ ದೂರವಾಗ ಬಹುದು ಎಂದು ಪ್ರೀತಿ ಅಭಿಮಾನಿಯೊಬ್ಬರು ತಿಳಿಸಿದ್ದಾರೆ.
Comments are closed.