ಆರೋಗ್ಯ

ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹುಳಿ, ಒಗರು, ಕಹಿ ಇರುವ ತರಕಾರಿ, ಹಣ್ಣುಗಳೂ ಮಹತ್ವದ ಪಾತ್ರ ನಿಜನಾ!

Pinterest LinkedIn Tumblr

ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ, ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ನಿಂಬೆಹಣ್ಣು ಕೂಡ ಒಂದು. ದೇಹ ತಂಪಾಗಿಸಲು ಮನೆಯಲ್ಲಿ ಶರಬತ್ ಮಾಡಿ ಕುಡಿಯುವುದು ಎಲ್ಲರಿಗೂ ಗೊತ್ತು. ಆದರೆ ಇದರಿಂದ ಇನ್ನೂ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಲಿ೦ಬೆಹಣ್ಣುಗಳಲ್ಲಿ ಫ್ಲೇವನಾಯ್ಡ್ (flavonoid) ಗಳೆ೦ಬ ರಾಸಾಯನಿಕಗಳಿದ್ದು, ಅವು ಆ೦ಟಿ ಆಕ್ಸಿಡೆ೦ಟ್ ಹಾಗೂ ಕ್ಯಾನ್ಸರ್ ರೋಗದ ವಿರುದ್ಧ ಸೆಣಸಾಡುವ ಗುಣಲಕ್ಷಣಗಳನ್ನು ಹೊ೦ದಿರುವ ಘಟಕಗಳನ್ನೊಳಗೊ೦ಡಿವೆ. ಮಾತ್ರವಲ್ಲದೇ, ಲಿ೦ಬೆ ಹಣ್ಣು ಮಧುಮೇಹ, ಮಲಬದ್ಧತೆ, ಅಧಿಕ ರಕ್ತದೊತ್ತಡ, ಜ್ವರ, ಅಜೀರ್ಣತೆ, ಮತ್ತು ಇನ್ನೂ ಅನೇಕ ಇತರ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಲಿ೦ಬೆಯು ತ್ವಚೆ, ಕೂದಲು, ಹಾಗೂ ಹಲ್ಲುಗಳ ಆರೋಗ್ಯ ವೃದ್ಧಿಸುತ್ತದ.

ರಕ್ತದ ಒತ್ತಡವನ್ನು ನಿಯಂತ್ರಣ:
ನಿತ್ಯವೂ ಒಂದೇ ಹೊತ್ತಿನಲ್ಲಿ, ಅಂದರೆ ಪ್ರತಿದಿನ ಬೆಳಿಗ್ಗೆ ಲಿಂಬೆರಸ ಸೇರಿಸಿದ ನೀರನ್ನು ಕುಡಿಯುತ್ತಾ ಬಂದರೆ ಕ್ರಮೇಣ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ವಿಟಮಿನ್‌ಗಳ ಆಗರ:
ಲಿಂಬೆಯಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಯಾವಾಗ ನಿಮ್ಮ ದೇಹದಲ್ಲಿ ವಿಟಮಿನ್ ಸಿ ಪ್ರಮಾಣ ಕುಸಿಯುತ್ತದೆಯೋ, ಆಗ ನಿಮ್ಮ ದೇಹದಲ್ಲಿ ರಿಪೇರಿ ಕೆಲಸವು ನಡೆಯುವುದಿಲ್ಲ. ಆದರೆ ಈ ಸಿಟ್ರಸ್ ಪಾನೀಯವನ್ನು ಸೇವಿಸಿದರೆ ಇದರಲ್ಲಿರುವ ಪೊಟಾಶಿಯಂ, ದೇಹದಲ್ಲಿರುವ ಮೆದುಳು ಮತ್ತು ನರ ವ್ಯೂಹವನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಪೊಟಾಶಿಯಂನ ಮೂಲ:
ಪೊಟ್ಯಾಶಿಯಂ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚು ಶಕ್ತಿ, ಸ್ವಚ್ಛ ತ್ಚಚೆ, ವಯಸ್ಸಾದಂತೆ ತೋರುವುದನ್ನು ತಡೆಯುತ್ತದೆ, ರೋಗ ನಿರೋಧಕ ಶಕ್ತಿ, ಒತ್ತಡ ಕಡಿಮೆ ಮಾಡುತ್ತದೆ, ಹಾಗೂ ಹೆಚ್ಚು ಏಕಾಗ್ರತೆಯನು ನೀಡುತ್ತದೆ.

ಕಿಡ್ನಿಯಲ್ಲಿನ ಕಲ್ಲು ನಿವಾರಣೆ:
ಮೂತ್ರಪಿಂಡದಲ್ಲಿ ಕಲ್ಲುಂಟಾಗಿದ್ದರೆ ನಿತ್ಯವೂ ಮುಂಜಾನೆ ಕೊಂಚವೇ ಬಿಸಿ ಇರುವ ನೀರಿನಲ್ಲಿ ಲಿಂಬೆ ರಸ ಹಾಕಿ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಕಲ್ಲು ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಜೊತೆಗೇ ಮೇದೋಜೀರಕ ಗ್ರಂಥಿಯ ಕಲ್ಲು, ಪಿತ್ತಕೋಶದ ಕಲ್ಲುಗಳು ಮತ್ತು ಕ್ಯಾಲ್ಸಿಯಂ ಘನೀಕರಿಸಿದ್ದರೆ ಅವೂ ಕರಗಿ ನೀರಾಗಿ ಹೊರಹರಿದು ಹೋಗುತ್ತವೆ.

ಬಾಯಿಯ ದುರ್ವಾಸನೆ ಪರಿಹಾರ:
ಲಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಶೀಘ್ರವೇ ಶಮನಹೊಂದಲೂ ನೆರವಾಗುತ್ತದೆ.

ತೂಕ ಇಳಿಕೆಗೆ:
ದಿನಾಲೂ ಬೆಳಗ್ಗೆ, ನೀವು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಲಿ೦ಬೆಯ ರಸದೊ೦ದಿಗೆ ಜೇನು ತುಪ್ಪವನ್ನೂ ಸಹ ಸೇರಿಸಿ ಸೇವಿಸಿದರೆ, ಶೀಘ್ರವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಭೇದಿಗೆ ರಾಮಬಾಣ:
ಲಿ೦ಬೆ ಹಣ್ಣಿನ ಅತ್ಯುತ್ತಮವಾದ ಆರೋಗ್ಯ ಸ೦ಬ೦ಧೀ ಪ್ರಯೋಜನವೇನೆ೦ದರೆ, ಅದು ಸಣ್ಣಕರುಳುಗಳಲ್ಲಿರುವ ಜ೦ತು ಅಥವಾ ಹುಳುಗಳನ್ನು ನಿವಾರಿಸುತ್ತದೆ. ಮಕ್ಕಳನ್ನು ಪದೇ ಪದೇ ಬಾಧಿಸುವ ಭೇದಿ ಹಾಗೂ ಇತರ ಉದರ ಸ೦ಬ೦ಧೀ ತೊ೦ದರೆಗಳನ್ನು ನಿವಾರಿಸುವ ಅತ್ಯುತ್ತಮ ಮಾರ್ಗವೆ೦ದರೆ ಅವರಿಗೆ ಲಿ೦ಬೆರಸ ಬೆರೆಸಿದ ನೀರನ್ನು ನೀಡುವುದು.

ಕೆಲವು ಸಲಹೆಗಳು:
ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಕ್ಕರೆ ಸೇರಿಸುವುದರಿಂದ ಲಿಂಬೆಯ ಗುಣಗಳು ನಾಶವಾಗುವುದರಿಂದ ಸಕ್ಕರೆ, ಉಪ್ಪು, ಬೆಲ್ಲ ಯಾವುದನ್ನೂ ಸೇರಿಸಬೇಡಿ. ಕೆಲವು ಹನಿ ಜೇನನ್ನು ಬೇಕಾದರೆ ಸೇರಿಸಬಹುದು.

ಜೇನು ಸೇರಿಸಿದ ನೀರು ಕುಡಿಯುವುದರಿಂದ ದೇಹ ಲಿಂಬೆ ಮತ್ತು ಜೇನು ಎರಡರ ಪ್ರಯೋಜನವನ್ನೂ ಪಡೆಯಬಹುದು. ಈ ನೀರನ್ನು ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಸೇವಿಸಿದ ಬಳಿಕ ದೀರ್ಘ ಉಸಿರಾಟದ ಮೂಲಕ ಸಾಕಷ್ಟು ನಡೆಯಿರಿ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

Comments are closed.