
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಾಂಜಾ ಎನ್ನುವುದು ತುಳಸಿಯಷ್ಟೇ ಪವಿತ್ರ ಎಂದು ಮಾದ್ಯಮಗಳೆದುರು ಹೇಳಿಕೆ ನೀಡಿದ್ದ ನಟಿಯ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿಯ ವಿರುದ್ಧ ಎ.ದೀಪಕ್ ಎನ್ನುವವರು ದೂರು ದಾಖಲಿಸಿದ್ದಾರೆ. ಸೆ. 1ರಂದು ಚಿತ್ರೋದ್ಯಮದಲ್ಲಿ ಡ್ರಗ್ಸ್ ವಿಚಾರವಾಗಿ ಮಾದ್ಯಮದೊಡನೆ ಮಾತನಾಡಿದ್ದ ನಟಿ ನಿವೇದಿತಾ ” ಗಾಂಜಾ ತುಳಸಿಯಷ್ಟೇ ಪವಿತ್ರ. ಆಯುರ್ವೇದದಲ್ಲಿ ಗಾಂಜಾ ಗಿಡಕ್ಕೆ ಭಾರೀ ಮಹತ್ವವಿದೆ. ಬ್ರಿಟೀಷರು ಅವರ ಇಂಗ್ಲೀಶ್ ಔಷಧಿಯ ಬಳಕೆ ಹೆಚ್ಚಾಗುವಂತೆ ಮಾಡಲು ಗಾಂಜಾವನ್ನು ನಿಷೇಧಿತ ಪಟ್ಟಿಗೆ ಸೇರಿಸಿದ್ದರು” ಎಂದು ಹೇಳಿದ್ದರು.
Comments are closed.