ಆರೋಗ್ಯ

ತೂಕ ಇಳಿಸಲು ವ್ಯಾಯಾಮದ ಬದಲು ಮಾತ್ರೆ ಸೇವಿಸುತ್ತೀರಾ? ಹಾಗದರೆ ಇದನ್ನೊಮ್ಮೆ ಓದಿಕೊಳ್ಳಿ…

Pinterest LinkedIn Tumblr

ಸದ್ಯಕ್ಕೆ ಇಂದಿನ ವೇಗದ ಜನಾಂಗ ಎಲ್ಲ ಕೆಲಸಗಳಿಗೂ ಮಾತ್ರೆಗಳ ಮೇಲೆ ಅವಲಂಬಿತವಾಗಿದೆ. ಜಿಮ್‍ನಲ್ಲಿ ಹೋಗಿ ಬೆವರ್ ಹರಿಸಿ ತೂಕ ಇಳಿಸಿಕೊಳ್ಳುವ ವಿಧಾನದಿಂದ ಹೊರಬಂದು ಅತ್ಯಂತ ಸುಲಭದ ದಾರಿ ಹಿಡಿದಿದ್ದಾರೆ. ದಿನನಿತ್ಯ ವ್ಯಾಯಾಮ ಮಾಡುವ ಗೋಜಿಗೂ ಹೋಗುವುದಿಲ್ಲ. ಅದರ ಬದಲು ಮಾತ್ರೆ ತೆಗೆದುಕೊಳ್ಳುವುದು.

ತಮ್ಮ ದಿನನಿತ್ಯದ ಗಡಿಬಿಡಿಯ ವೇಳಾಪಟ್ಟಿಯ ಕಾರಣದಿಂದ ವ್ಯಾಯಾಮ ಮಾಡುವುದಕ್ಕೆ ಬಹುತೇಕರಿಗೆ ಸಮಯವೂ ಇರುವುದಿಲ್ಲ. ಆದ್ದರಿಂದ ಸುಲಭದ ದಾರಿಯೆಂದರೆ ಮಾತ್ರೆ ತೆಗೆದುಕೊಳ್ಳುವುದು. ಹೀಗೆ ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ಹಲವರ ಗಮನದಲ್ಲಿಲ್ಲ. ಈ ಅಪಾಯ ಕೆಲವೊಮ್ಮೆ ಎಚ್ಚರಿಕೆಯ ಮಟ್ಟದಿಂದ ತೀವ್ರತೆಯ ಮಟ್ಟಕ್ಕೂ ಸಾಗುತ್ತದೆ.

ಮಾತ್ರೆಯಿಂದ ಅಗುವ ತೊಂದರೆಗಳು :
1. ಅಜೀರ್ಣ ಸಮಸ್ಯೆ : ತಿಂದ ಮಾತ್ರೆಗಳು ಕೆಲವೊಮ್ಮೆ ಜೀರ್ಣವಾಗುವುದಿಲ್ಲ. ಅವು ಗ್ಯಾಸ್ಟ್ರಿಕ್‍ಗೆ ಕಾರಣವಾಗುತ್ತದೆ. ಇದರ ಮತ್ತೊಂದು ಮುಖ್ಯ ಸಮಸ್ಯೆಯೆಂದರೆ ಶರೀರ ಜೀವಸತ್ವಗಳನ್ನು ಹೀರಿಕೊಳ್ಳಲು ಅವಕಾಶ ನೀಡುವುದಿಲ್ಲ. ನಿಧಾನಕ್ಕೆ ಜೀವಸತ್ವದ ಕೊರತೆಯುಂಟಾಗುತ್ತದೆ. ಆದ್ದರಿಂದ ಜನ ಹೀಗೆ ಮಾತ್ರೆ ತೆಗೆದುಕೊಳ್ಳುವವರು ಜೀವಸತ್ವಗಳಿಗಾಗಿಯೇ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಾರೆ.

2. ಈ ಮಾತ್ರೆಗಳಲ್ಲಿರುವ ಭಾರೀ ಅಪಾಯಕಾರಿ ಅಂಶವೆಂದರೆ ಹಸಿವಾಗದಿರುವಂತೆ ತಡೆಯುವುದು. ನರವ್ಯೂಹದ ಮೇಲೆ ನಿರ್ದಿಷ್ಟ ಪರಿಣಾಮ ಹಸಿವಾಗದಂತೆ ತಡೆಯುವುದರಿಂದ ನಿಶ್ಯಕ್ತಿ ಉಂಟಾಗುವುದು ಸಹಜ. ಹೃದಯಬಡಿತವನ್ನು ಅಸಹಜವಾಗಿ ಏರಿಸುವ ಶಕ್ತಿಯನ್ನು ಇದು ಹೊಂದಿದೆ. ಇದರ ಪರಿಣಾಮ ಇದ್ದಕ್ಕಿದ್ದಾಂತೆ ಹೃದಯಾಘಾತವಾಗಬಹುದು. ರಕ್ತದೊತ್ತಡ ಹೆಚ್ಚುವುದರಿಂದ ಸಹಜವಾಗಿ ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ.

3. ಹೃದಯಾಘಾತವಾಗುವುದು ಒಂದು ತರಹದ ಸಮಸ್ಯೆಯಾದರೆ ಶರೀರ ಸಮತೋಲನ ಕಳೆದುಕೊಳ್ಳುವುದು ಮತ್ತೊಂದು ತರಹದ ಸಮಸ್ಯೆ. ನಿಮ್ಮ ಶರೀರದ ಮೇಲೆ ನಿಯಂತ್ರಣ ಕಳೆದುಕೊಂಡು ಆಗಾಗ ತೂರಾಡಿತ್ತಿರುವಂತಹ ಅನುಭವವಾಗುತ್ತದೆ.

ಇತರ ಪರಿಣಾಮಗಳು : ಹೊಟ್ಟೆ ನೋವು, ತೆಲೆನೋವು, ಗಂಟಲು. ಬಾಯಿ ಒಣಗುವುದು, ಔಷಧಿಗಳಿಗೆ ಒಗ್ಗಿಕೊಳ್ಳುವಂತಾಗುವುದು.

Comments are closed.