ಕುಂದಾಪುರ: ಕೊರೊನಾ ಸೋಂಕು ಪತ್ತೆಹಚ್ಚುವ ಗಂಟಲುದ್ರವ ಪರೀಕ್ಷೆಗೆ ಇನ್ನು ಆಸ್ಪತ್ರೆಗೇ ಹೋಗಬೇಕಿಲ್ಲ. ಬದಲಾಗಿ ಬುಧವಾರದಿಂದ ಇಲ್ಲಿನ ಪುರಸಭೆಯಲ್ಲೂ ತಪಾಸಣಾ ಕೇಂದ್ರ ಆರಂಭಿಸಲಾಗಿದೆ.ಆರೋಗ್ಯ ಇಲಾಖೆ ಸಹಯೋಗದಲ್ಲಿ ಪುರಸಭೆ ಈ ಯೋಜನೆ ರೂಪಿಸಿದ್ದು ಪುರಸಭೆ ಕಟ್ಟಡದ ತಳ ಅಂತಸ್ತಿನ ಒಂದು ಕೊಠಡಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಕೊರೊನಾ ಐಸೋಲೇಶನ್ ಕೇಂದ್ರ ಹಳೆ ಆದರ್ಶ ಆಸ್ಪತ್ರೆಯಲ್ಲಿದ್ದ ಕಿಯೋಸ್ಕ್‌ನ್ನು ಇಲ್ಲಿ ಇರಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬಂದಿಯೂ ಇರುತ್ತಾರೆ.
ನೋಂದಣಿ ಮಾಡಿದ ಕೂಡಲೇ ಮೊಬೈಲ್‌ಗೆ ಒಟಿಪಿ ಬರುತ್ತದೆ. ಕೂಡಲೇ ಪರೀಕ್ಷಾ ದ್ರವ ಸಂಗ್ರಹ ಕಾರ್ಯವೂ ನಡೆಯುತ್ತದೆ. ನೆಗೆಟಿವ್ ಇದ್ದರೆ ಮೊಬೈಲ್‌ಗೆ ಸಂದೇಶ ಬರುತ್ತದೆ. ಪಾಸಿಟಿವ್ ಇದ್ದರೆ ಕರೆ ಬರುತ್ತದೆ. ಆಸ್ಪತ್ರೆಗೆ ಹೋಗಲು ಭೀತಿ ಪಡುವ ಅಗತ್ಯ ಇಲ್ಲ. ಯಾರು ಬೇಕಾದರೂ ಬಂದು ಉಚಿತವಾಗಿ ಪರೀಕ್ಷೆ ಮಾಡಿಕೊಂಡು ಹೋಗಬಹುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ಎರಡೇ ದಿನದಲ್ಲಿ ಐವತ್ತಕ್ಕೂ ಅಧಿಕ ಮಂದಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
Comments are closed.