
ನವದೆಹಲಿ: ಸ್ಟಾರ್ ದಂಪತಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅನುಷ್ಕಾ ಅವರು ಟ್ವಿಟರ್ ಮೂಲಕ ಗುರುವಾರ ಹಂಚಿಕೊಂಡಿದ್ದಾರೆ.
ಮೊದಲ ಬಾರಿ ಬೇಬಿ ಬಂಪ್ ಫೋಟೋವನ್ನು ಅನುಷ್ಕಾ ಅವರು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ವಿರಾಟ್ ಸಹ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು. 2021 ಜನವರಿಗೆ ಬರುತ್ತಿದ್ದೇವೆ ಎಂದು ಅನುಷ್ಕಾ ಪೋಟೋ ಜತೆಗೆ ಶೇರ್ ಮಾಡಿಕೊಂಡಿದ್ದಾರೆ.
ಅನುಷ್ಕಾ ಮತ್ತು ವಿರಾಟ್ 2017 ಡಿಸೆಂಬರ್ನಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದರು. ಸದ್ಯ ಇಬ್ಬರು ಮುಂಬೈ ನಿವಾಸದಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಝೀರೋ ಚಿತ್ರದ ಬಳಿಕ ಅನುಷ್ಕಾ ನಟನೆಯಲ್ಲಿ ಬ್ರೇಕ್ ತೆಗೆದುಕೊಂಡಿರುವ ಅನುಷ್ಕಾ, ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.
ಇನ್ನು ವಿರಾಟ್ ದುಬೈನಲ್ಲಿ ನಡೆಯಲಿರುವ ಐಪಿಎಲ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲಾಗಿದೆ.
Comments are closed.