ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.
ಸಂಪಿಗೆ – ಒಂದು ಹೂವಿನ ಹೆಸರು. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ.ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ.
ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು.
ಇದರ ಉಪಯೋಗಗಳು:
1.ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.
2.ಆಯುರ್ವೇದದಲ್ಲಿ ಇದರ ಬೀಜದಿಂದ ಆರೋಗ್ಯಕಾರಿ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ.
3.ಸಂಪಿಗೆ ಹೂವಿನ ತೈಲದಲ್ಲಿ ‘ಐಸೊಯುಜಿನಾರ್’ ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ.
4.ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ.
5.ತಲೆಕೂದಲು ಉದುರುತ್ತಿದ್ದರೆ , ಹೊಟ್ಟು ಹೆಚ್ಚಾದರೆ , ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿ.
ಹರಳೆಣ್ಣೆ :
ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ಎತ್ತಿನ ಗಾಡಿಯ ಎಣ್ಣೆ ಎಂಬ ಕಾರಣಕ್ಕೇ ಹೆಚ್ಚಿನವರು ಹರಳೆಣ್ಣೆಯನ್ನು ಉಪಯೋಗಿಸದೇ ಮೂಲೆಗುಂಪಾಗಿಸಿದ್ದಾರೆ. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ ಎಂಬುದನ್ನು ಜನರು ತಿಳಿದಿಲ್ಲ.
ಅದರಲ್ಲೂ ಔಷಧಿಗಳು ವಾಸಿ ಮಾಡಲಾಗದಂತಹ ಕೆಲವು ವ್ಯಾಧಿಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ.
ಚರ್ಮದ ಕಂದು ಕಲೆ, ಸೊಂಟನೋವು, ಉಳುಕಿದ ಹಿಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ.
ಉಪಯೋಗಗಳು :
1.ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆಯ ಎರಡು ತಿಂಗಳಲ್ಲಿ ಕೊಂಚ ಹರಳೆಣ್ಣೆಯನ್ನು ಉಬ್ಬಿದ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು ಅತ್ಯಂತ ಕಡಿಮೆಯಾಗುತ್ತವೆ.
2.ಗಾಯ, ಜಜ್ಜಿದ, ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಸ್ಥಳದ ಮೇಲೆ ಕೊಂಚ ಹರಳೆಣ್ಣೆ ಸವರಿದರೆ ಬೇಗನೇ ಗುಣವಾಗುತ್ತದೆ. ಅಲ್ಲದೆ ನಡೆಯುವಾಗ ಕಾಲು ಉಳುಕಿದರೆ ತಕ್ಷಣ ಹರಳೆಣ್ಣೆ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಟ್ಟರೆ ಬೆಳಿಗ್ಗೆದ್ದಾಗ ನೋವು ಇರುವುದಿಲ್ಲ.
3. ಆಗಾಗ ಹರಳೆಣ್ಣೆಯ ಒಂದೆರಡು ಹನಿಗಳನ್ನು ಕಿವಿಗೆ ಬಿಟ್ಟುಕೊಳ್ಳುತ್ತಾ ಇದ್ದರೆ ಶ್ರವಣ ಶಕ್ತಿ ಕುಂದುವ ಸಾಧ್ಯತೆ ಕಡಿಮೆಯಾಗುತ್ತದೆ.
4. ಕಣ್ಣಿನ ಪೊರೆ ಇದ್ದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಹನಿ ಹರಳೆಣ್ಣೆ ಬಿಟ್ಟರೆ ಕಡಿಮೆಯಾಗುತ್ತದೆ.
5. ಕೆಳಬೆನ್ನ ಬಳಿ ಬೊಕ್ಕೆ ಇದ್ದರೆ ಹರಳೆಣ್ಣೆ ಸವರಿಕೊಳ್ಳುತ್ತಾ ಇರುವ ಮೂಲಕ ಶೀಘ್ರವೇ ಗುಣವಾಗುತ್ತದೆ.
6. ಚರ್ಮದ (ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಪ್ರಕಟಗೊಳ್ಳುವುದು) ತೊಂದರೆ ಕಂಡುಬಂದರೆ ಹರಳೆಣ್ಣೆಯಿಂದ ನಿತ್ಯವೂ ಮಸಾಜ್ ಮಾಡಿದರೆ ಕ್ರಮೇಣ ಕಡಿಮೆಯಾಗುತ್ತದೆ.
7. ಮಲಗುವ ಮುನ್ನ ಕೊಂಚ ಹರಳೆಣ್ಣೆಯಿಂದ ಕಣ್ಣುರೆಪ್ಪೆಗಳನ್ನು ಮಸಾಜ್ ಮಾಡಿಕೊಳ್ಳುತ್ತಾ ಇದ್ದರೆ ಕನ್ನಡಕ ತೊಡಬೇಕಾಗಿ ಬರುವ ತೊಂದರೆಗಳು ಕಡಿಮೆಯಾಗುತ್ತವೆ.
8. ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುತ್ತಾ ಇದ್ದರೆ ಧ್ವನಿಪೆಟ್ಟಿಗೆಯ ಗಂಟು ಕರಗಿ ಗಡಸು ಅಥವಾ ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.
Comments are closed.