ತಿನ್ನಲು ಪ್ರತಿಯೊಬ್ಬರು ಏನಾದರೂ ಕೊಟ್ಟರೆ ಎಲ್ಲರೂ ಒಂದೊಂದು ಸ್ಟೈಲ್ ನಲ್ಲಿ ತಿನ್ನುತ್ತಾರೆ. ಕೆಲವರು ಆಹಾರವನ್ನು ನುಂಗಿದರೆ ಮತ್ತೆ ಕೆಲವರು ಅರ್ಧಂಬರ್ಧ ಜಗಿದು ತಿನ್ನುತ್ತಾರೆ, ಮತ್ತೆ ಕೆಲವರು ನಿಧಾನಕ್ಕೆ ಜಗಿದು ತಿನ್ನುತ್ತಾರೆ.
ಅರ್ಜೆಂಟ್ ನಲ್ಲಿ ತಿನ್ನಬೇಡಿ, ನಿಧಾನಕ್ಕೆ ಜಗಿದು ತಿನ್ನಿ ಅಂದರೆ ಹೇಗಾದರೂ ತಿಂದರೆ ಏನು?
ಹೊಟ್ಟೆ ತುಂಬಿದರೆ ಸಾಕಲ್ಲವೇ ಎಂದು ನಿಮಗೆ ಅನಿಸಬಹುದು. ಜಗಿದು ತಿನ್ನಿ ಎಂದು ಏಕೆ ಹೇಳುತ್ತಿದ್ದೇನೆ ಅಂದರೆ ಜಗಿದು ತಿಂದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು
.*.ಹೊಟ್ಟೆ ತುಂಬುವುದು: ನಿಧಾನಕ್ಕೆ ಜಗಿಯುತ್ತಾ ತಿಂದರೆ ಹೊಟ್ಟೆ ತುಂಬಿದಂತೆ ಅನಿಸುವುದು. ಅವಸರವಾಗಿ ತಿಂದರೆ ಎಷ್ಟು ತಿಂದೆವು ಅಂತ ಗೊತ್ತಾಗುವುದಿಲ್ಲ. ಇದರಿಂದ ಬೇಗನೆ ಹೊಟ್ಟೆ ಹಸಿವು ಆಗುವುದು.
*ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಆಹಾರವನ್ನು ನಿಧಾನಕ್ಕೆ ಚೆನ್ನಾಗಿ ಜಗಿದು ತಿಂದರೆ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ
* ಬಾಯಿಯ ಶುಚಿತ್ವಕ್ಕೆ ಒಳ್ಳೆಯದು: ನಿಧಾನಕ್ಕೆ ತಿನ್ನುವುದರಿಂದ ಹಲ್ಲಿನಲ್ಲಿ ಆಹಾರ ಅಂಟಿಕೊಳ್ಳುವುದಿಲ್ಲ. ಅಲ್ಲದೆ ಬಾಯಿ ದುರ್ಗಂಧ ಬೀರುವುದನ್ನು ತಡೆಯುತ್ತದೆ. ದೇಹಕ್ಕೆ ಬೇಗನೆ ಶಕ್ತಿ ತುಂಬುತ್ತದೆ. ಆಹಾರವನ್ನು ಜಗಿದು ತಿನ್ನುವಾಗ ಅದರಲ್ಲಿರುವ ಪೋಷಕಾಂಶಗಳು ಎಂಜಲಿನ ಜೊತೆ ಹೊಟ್ಟೆಯನ್ನು ಸೇರಿಸಿ ದೇಹಕ್ಕೆ ಬೇಗನೆ ಶಕ್ತಿಯನ್ನು ಪೂರೈಕೆ ಮಾಡುತ್ತದೆ.

Comments are closed.