ಕರಾವಳಿ

ಉಡುಪಿ CEN ಅಪರಾಧ ಪೊಲೀಸರ ಕಾರ್ಯಾಚರಣೆ 2 ಕಿಲೋ ಗಾಂಜಾ ವಶ; ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಸೆನ್ ಅಒರಾಧ ಪೊಲೀಸರು ಬ್ರಹ್ಮಾವರದ ವಾರಂಬಳ್ಳಿ ಎಂಬಲ್ಲಿ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಆಸಿಫ್ ಬಾಷಾ (38), ರಿಯಾಜ್ (29) ಬಂಧಿತ ಆರೋಪಿಗಳು. ಬಂಧಿತರಿಂದ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಇಟ್ಟುಕೊಂಡಿದ್ದ 2 ಕಿಲೋ, 038 ಗ್ರಾಂ ತೂಕದ ಗಾಂಜಾ, 2 ಮೊಬೈಲ್ ಹ್ಯಾಂಡ್ ಸೆಟ್-2 , ಮಾರುತಿ ಡಿಝಾಯರ್ ಕಾರನ್ನು ವಶಕ್ಕೆ ಪಡೆದಿದ್ದು ಈ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 3,13,500/- ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಅವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಸೆನ್‌ ಅಪರಾಧ ಪೊಲೀಸ್‌ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಈ ಕಾರ್ಯಾಚರಣೆ ನಡೆಸಿದ್ದು ಪಿ.ಎಸ್.ಐ. ಲಕ್ಷ್ಮಣ, ಪಿ.ಎಸ್.ಐ. ನಾರಾಯಣ, ಎ.ಎಸ್.ಐ. ಕೇಶವ ಗೌಡ ಹಾಗೂ ಸಿಬ್ಬಂದಿಯವರಾದ ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ಶ್ರೀಧರ್, ಪ್ರವೀಣ, ಪ್ರದೀಪ ಶೆಟ್ಟಿ, ಅರುಣ್ ಶೆಟ್ಟಿ, ಮತ್ತು ಚಾಲಕ ನವೀನಚಂದ್ರ ಮೊದಲಾದವರು ಇದ್ದರು.

Comments are closed.